ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ, ಈ ದಾಖಲೆ ಇದ್ದರೆ ಒಂದೇ ತಿಂಗಳಿಗೆ ಹೊಸ ರೇಷನ್ ಕಾರ್ಡ್ ಸಿಗುತ್ತೆ, ಇಲ್ಲಿದೆ ನೋಡಿ ವಿವರ
ನಮಸ್ಕಾರ ಸ್ನೇಹಿತರೆ ಇವತ್ತಿನ ದಿನ ಹೊಸ ರೇಷನ್ ಕಾರ್ಡ್ ಅಥವಾ ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಈ ಒಂದು ದಾಖಲಾತಿ ನಿಮ್ಮ ಹತ್ತಿರ ಇದ್ದರೆ ಕೇವಲ ಒಂದು ತಿಂಗಳ ಒಳಗಡೆ ನೀವು ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಬಹುದು ಹಾಗಾಗಿ ಈ ಒಂದು ಲೇಖನ ಮೂಲಕ ನಾವು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು ಮತ್ತು ರೇಷನ್ ಕಾರ್ಡ್ ನಿಂದ ಆಗುವಂಥ ಉಪಯೋಗಗಳು ಮತ್ತು ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ತಿಳಿಯೋಣ
ಹೌದು ಸ್ನೇಹಿತರೆ ನೀವು ಸರಕಾರದ ಸಬ್ಸಿಡಿ ಯೋಜನೆಗಳು ಹಾಗೂ ನಮ್ಮ ಕರ್ನಾಟಕದಲ್ಲಿ ಜಾರಿ ಇರುವಂತಹ 5 ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಮತ್ತು ವಿವಿಧ ಯೋಜನೆಗಳಿಗೆ ಅಪ್ಲೈ ಮಾಡಲು ನಿಮಗೆ ಬಿಪಿಎಲ್ ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿ ಕಡ್ಡಾಯವಾಗಿ ಕೇಳಲಾಗುತ್ತಿದೆ ಮತ್ತು ಈ ಒಂದು ದಾಖಲಾತಿ ಅತ್ಯಂತ ಮುಖ್ಯ ದಾಖಲಾತಿಯಾಗಿ ಇವತ್ತಿನ ದಿನದಲ್ಲಿ ಮಾರ್ಪಾಡಾಗಿದೆ ಹಾಗಾಗಿ ತುಂಬಾ ಜನರು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಮಾಡಲು ಕಾಯುತ್ತಿದ್ದಾರೆ ಅಂತವರಿಗೆ ಇದೀಗ ಸಿಹಿ ಸುದ್ದಿ
ರೇಷನ್ ಕಾರ್ಡ್ ಉಪಯೋಗಗಳು (ಹೊಸ ರೇಷನ್ ಕಾರ್ಡ್)..?
ಬಿಪಿಎಲ್ ರೇಷನ್ ಕಾರ್ಡ್ ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರ ಜೊತೆಗೋಡಿ ಬಡತನ ರೇಖೆಗಿಂತ ಕೆಳಗಿರುವಂತೆ ಕುಟುಂಬಗಳಿಗೆ ಈ ಬಿಪಿಎಲ್ ರೇಷನ್ ಕಾರ್ಡ್ ನೀಡಲಾಗುತ್ತಿದೆ ಮತ್ತು ಈ ರೇಷನ್ ಕಾರ್ಡ್ ಹೊಂದಿದವರನ್ನು ಬಡವರು ಎಂದು ಗುರುತಿಸಲಾಗುತ್ತದೆ ಆದ್ದರಿಂದ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಸರಕಾರದ ಮೂಲಕ ಹಲವಾರು ಯೋಜನೆಗಳ ಸೌಲಭ್ಯ ಮತ್ತು ಸಬ್ಸಿಡಿ ಯೋಜನೆಗಳ ಸೌಲಭ್ಯ ಹಾಗೂ ಕರ್ನಾಟಕದಲ್ಲಿ ವಿವಿಧ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಈ ರೇಷನ್ ಕಾರ್ಡ್ ತುಂಬಾ ಅಗತ್ಯವಾದ ದಾಖಲಾತಿ ಆಗಿದೆ

ನಿಮ್ಮ ಬಳಿ ಬಿಪಿಎಲ್ ಅಥವಾ ಅಂತೋದಯ ರೇಷನ್ ಕಾರ್ಡ್ ಇದ್ದರೆ ನಿಮಗೆ ಕೇಂದ್ರ ಸರ್ಕಾರ ಕಡೆಯಿಂದ ಪ್ರತಿ ತಿಂಗಳು ಗರಿ ಕಲ್ಯಾಣಿ ಯೋಜನೆ ಅಡಿಯಲ್ಲಿ 5 ಕೆಜಿ ಅಕ್ಕಿ ಸಿಗುತ್ತದೆ ಹಾಗೂ ರಾಜ್ಯ ಸರ್ಕಾರ ಕಡೆಯಿಂದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 5 ಕೆಜಿ ಅಕ್ಕಿ ಸಿಗುತ್ತಿದೆ ಅಂದರೆ ನಿಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ನೀವು ಕೇಂದ್ರ ಮತ್ತು ರಾಜ್ಯ ಸರ್ಕಾರ ಕಡೆಯಿಂದ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಯ ಮೂಲಕ 10 ಕೆ.ಜಿ ಅಕ್ಕಿ ಪ್ರತಿ ಸದಸ್ಯರಿಗೆ ಪಡೆದುಕೊಳ್ಳಬಹುದು,
ಇದರ ಜೊತೆಗೆ ಕಾಂಗ್ರೆಸ್ ಪಕ್ಷ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ತಿಂಗಳು 2000 ಪಡೆಯಬಹುದು ಹಾಗೂ ಗೃಹಜೋತಿ ಯೋಜನೆ ಮೂಲಕ ಉಚಿತ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬಹುದು ಹಾಗಾಗಿ ನಿಮ್ಮ ಹತ್ತಿರ ರೇಷನ್ ಕಾರ್ಡ್ ಇದ್ದರೆ ಪ್ರತಿ ತಿಂಗಳು ಸರಕಾರ ಕಡೆಯಿಂದ ಏನಿಲ್ಲ ಅಂದರೂ ಕನಿಷ್ಠ 5000 ವರೆಗೆ ಹಣ ಪಡೆಯಬಹುದು ಹಾಗಾಗಿ ತುಂಬಾ ಜನರು ಹೊಸ ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದಾರೆ ಅಂತವರಿಗೆ ಇದೀಗ ಸಿಹಿ ಸುದ್ದಿ
ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ..?
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬಯಸುವಂತಹ ಜನರಿಗೆ ಇದೀಗ ನಮ್ಮ ರಾಜ್ಯ ಸರ್ಕಾರ ಹೊಸ ರೇಷನ್ ಕಾರ್ಡ್ ಅಥವಾ ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ ಆದ್ದರಿಂದ ಹೊಸದಾಗಿ ಬಿಪಿಎಲ್ ಅಥವಾ ಅಂತೋದಯ ಅಥವಾ ಎಪಿಎಲ್ ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿ ಪಡೆಯಲು ಬಯಸುವಂತಹ ಜನರು ಜೂನ್ 30 ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ,
ಆಹಾರ ಇಲಾಖೆ ಇದೀಗ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಲ್ಲದೆ ಪಡಿತರ ಚೀಟಿಯಲ್ಲಿ ಬದಲಾವಣೆ ಮಾಡಲು ಅಂದರೆ ರೇಷನ್ ಕಾರ್ಡ್ ತಿದ್ದುಪಡಿಗೂ ಕೂಡ ಅವಕಾಶ ಮಾಡಿಕೊಟ್ಟಿದೆ ಮತ್ತು ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ಯಾವುದೇ ಬದಲಾವಣೆ ಮಾಡಲು 30 ಜೂನ್ 2025 ರವರೆಗೆ ಅವಕಾಶ ಮಾಡಿಕೊಡಲಾಗಿದೆ ಆದ್ದರಿಂದ ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ
ಒಂದೇ ತಿಂಗಳಿಗೆ ಹೊಸ ಪಡಿತರ ಚೀಟಿ (ಹೊಸ ರೇಷನ್ ಕಾರ್ಡ್) ಸಿಗುತ್ತೆ.?
ಹೌದು ಸ್ನೇಹಿತರೆ ನೀವು ಅತ್ಯಂತ ಬಡ ಕುಟುಂಬದವರಾಗಿದ್ದರೆ ಹಾಗೂ ನಿಮ್ಮ ಹತ್ತಿರ ಕಾರ್ಮಿಕ ಇಲಾಖೆಯ ಕಾರ್ಮಿಕ ಕಾರ್ಡ್ ಅಥವಾ ಕೇಂದ್ರ ಸರ್ಕಾರ ಕಡೆಯಿಂದ ನೀಡುತ್ತಿರುವಂತ ಈ ಶ್ರಮ ಕಾರ್ಡ್ ನಿಮ್ಮ ಹತ್ತಿರ ಇದ್ದರೆ ನೀವು ಒಂದು ತಿಂಗಳ ಒಳಗಡೆ ಹೊಸ ಪಡಿತರ ಚೀಟಿ ಅಥವಾ ಹೊಸ ಬಿಪಿಎಲ್ ರೇಷನ್ ಕಾರ್ಡ್ ಪಡೆಯಬಹುದು,
ಹೌದು ಸ್ನೇಹಿತರೆ ನಿಮ್ಮ ಹತ್ತಿರ ಎರಡು ವರ್ಷದ ಹಳೆಯ ಈ ಶ್ರಮ ಕಾರ್ಡ್ ಇದ್ದರೆ ನೀವು ಹೊಸದಾಗಿ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಿ ಕೇವಲ ಒಂದೇ ತಿಂಗಳಲ್ಲಿ ಹೊಸ ರೇಷನ್ ಕಾರ್ಡ್ ಪಡೆಯಬಹುದು ಹಾಗಾಗಿ ನೀವು ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ & ಇತರ ಆನ್ಲೈನ್ ಕೇಂದ್ರಗಳಿಗೆ ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5:00 ವರೆಗೆ ಭೇಟಿ ನೀಡಿ
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳ ವಿವರ..?
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಈ ಶ್ರಮ ಕಾರ್ಡ್
- ಕುಟುಂಬದ ಸದಸ್ಯರ ಆಧಾರ್ ಕಾರ್ಡ್
- ಮೊಬೈಲ್ ನಂಬರ್
- ಆರು ವರ್ಷದ ಒಳಗಿನ ಮಕ್ಕಳಿಗೆ ಜನನ ಪ್ರಮಾಣ ಪತ್ರ
- ಮತದಾರ ಗುರುತಿನ ಚೀಟಿ
- ಇತರೆ ಅಗತ್ಯ ದಾಖಲಾತಿಗಳು
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ..?
ಹೌದು ಸ್ನೇಹಿತರೆ ನಿಮ್ಮ ಬಳಿ ಈ ಶ್ರಮ ಕಾರ್ಡ್ ಇದ್ದರೆ ಅಥವಾ ಇಲ್ಲದೇ ಇದ್ದರೂ ಕೂಡ ನೀವು ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ ಪಡೆಯಬಹುದು ಹಾಗಾಗಿ ನೀವು ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, & ಇತರೆ ಆನ್ಲೈನ್ ಕೇಂದ್ರಗಳಿಗೆ ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5:00 ವರೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ನಾವು ಕೆಳಗಡೆ ನೀಡಿರುವ ಲಿಂಕ್ ಬಳಸಿಕೊಂಡು ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರೆ ಇದೇ ರೀತಿ ನಿಮಗೆ ವಿವಿಧ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳು ಮತ್ತು ನಮ್ಮ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ನೇಮಕಾತಿ ಮಾಡಿಕೊಳ್ಳುವ ವಿವಿಧ ಸರ್ಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳು ಮತ್ತು ರೈತರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಪ್ರತಿದಿನ ಮಾಹಿತಿಗಾಗಿ ನಮ್ಮ ಸೋಶಿಯಲ್ ಮೀಡಿಯಾ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು
1 thought on “ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ, ಈ ದಾಖಲೆ ಇದ್ದರೆ ಒಂದೇ ತಿಂಗಳಿಗೆ ಹೊಸ ರೇಷನ್ ಕಾರ್ಡ್ ಸಿಗುತ್ತೆ, ಇಲ್ಲಿದೆ ನೋಡಿ ವಿವರ”