Student Bus Pass 2025: ವಿದ್ಯಾರ್ಥಿಗಳಿಗೆ KSRTC ವತಿಯಿಂದ ಬಸ್ ಪಾಸ್ ಪಡೆಯಲು ಅರ್ಜಿ ಆಹ್ವಾನ.! ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ, ಇಲ್ಲಿದೆ ವಿವರ

ವಿದ್ಯಾರ್ಥಿಗಳಿಗೆ KSRTC ವತಿಯಿಂದ ಬಸ್ ಪಾಸ್ ಪಡೆಯಲು ಅರ್ಜಿ ಆಹ್ವಾನ.! ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ, ಇಲ್ಲಿದೆ ವಿವರ

ನಮಸ್ಕಾರ ಸ್ನೇಹಿತರೆ ಇದೀಗ ಬೇಸಿಗೆ ರಜೆ ಮುಕ್ತಾಯವಾಗಿದ್ದು ವಿದ್ಯಾರ್ಥಿಗಳಿಗೆ ಕೆ ಎಸ್ ಆರ್ ಟಿ ಸಿ ವತಿಯಿಂದ 2025 ಮತ್ತು 26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಇದೀಗ ಹೊಸದಾಗಿ ಬಸ್ ಪಾಸ್ ಪಡೆಯಲು ಅರ್ಜಿ ಆಹ್ವಾನ ಮಾಡಲಾಗಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ವಿದ್ಯಾರ್ಥಿಗಳು ಬಸ್ ಪಾಸ್ ಪಡೆಯಲು ಯಾವ ರೀತಿ ಅರ್ಜಿ ಸಲ್ಲಿಸಬೇಕು ಹಾಗೂ ಬಸ್ ಪಾಸ್ ಪಡೆಯಲು ಎಷ್ಟು ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ ಮತ್ತು ಬಸ್ ಪಾಸ್ ಪಡೆಯಲು ಬೇಕಾಗುವ ಅಗತ್ಯ ದಾಖಲಾತಿಗಳ ವಿವರ ಏನು ಎಂಬ ಮಾಹಿತಿಯನ್ನು ತಿಳಿಯೋಣ

WhatsApp Group Join Now
Telegram Group Join Now       

 

ವಿದ್ಯಾರ್ಥಿಗಳಿಗೆ ಬಸ್ ಪಾಸ್ (Student Bus Pass 2025) ಪಡೆಯಲು ಅರ್ಜಿ ಆಹ್ವಾನ..?

ಹೌದು ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಹಾಗೂ ವಿದ್ಯಾರ್ಥಿಗಳು ಹಳ್ಳಿಗಳಿಂದ ಮತ್ತು ದೂರದ ಪ್ರದೇಶಗಳಿಂದ ವಿದ್ಯಾಭ್ಯಾಸ ಮಾಡಲು ಶಾಲಾ ಕಾಲೇಜುಗಳಿಗೆ ಹೋಗಲು ಕಡಿಮೆ ಬೆಲೆಯಲ್ಲಿ ವಾರ್ಷಿಕ ಪಾಸ್ ಪಡೆಯಲು ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಥವಾ ಕೆಎಸ್ಆರ್ಟಿಸಿ ಸಂಸ್ಥೆಯಿಂದ ಬಸ್ ಪಾಸ್ ಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ

Student Bus Pass 2025
Student Bus Pass 2025

 

ಹೌದು ಸ್ನೇಹಿತರೆ ವಿದ್ಯಾರ್ಥಿಗಳು ತಮ್ಮ ಹಳ್ಳಿಗಳಿಂದ ಅಥವಾ ಗರಿಷ್ಠ ಅರವತ್ತು ಕಿಲೋಮೀಟರ್ ಒಳಗಡೆ ಇರುವಂತ ಶಾಲಾ-ಕಾಲೇಜುಗಳಿಗೆ ಉಚಿತವಾಗಿ ಪ್ರಯಾಣ ಮಾಡಲು ವಾರ್ಷಿಕವಾಗಿ ಅತ್ಯಂತ ಕಡಿಮೆ ದರದಲ್ಲಿ ಬಸ್ ಪಾಸ್ ನೀಡಲಾಗುತ್ತಿದೆ ಹಾಗಾಗಿ ವಿದ್ಯಾರ್ಥಿಗಳು ಈ ಒಂದು ಬಸ್ ಪಾಸ್ ಯೋಜನೆಗೆ ತುಂಬಾ ಸುಲಭವಾಗಿ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಇದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ

 

ksrtc ಬಸ್ ಪಾಸ್ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು..?

ಸ್ನೇಹಿತರೆ ಈಗಾಗಲೇ ನಮ್ಮ ರಾಜ್ಯ ಸರ್ಕಾರ ಶಕ್ತಿ ಯೋಜನೆ ಅಡಿಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ಗಳಲ್ಲಿ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಹಾಗೂ ಲಿಂಗತ್ವ ಅಲ್ಪ ಸಂಖ್ಯಾತರಿಗೆ ಉಚಿತ ಬಸ್ ಪ್ರಯಾಣ ಮಾಡಲು ಅವಕಾಶ ಮಾಡಿಕೊಡಲಾಗಿದೆ ಇದೀಗ ಒಂದನೇ ತರಗತಿಯಿಂದ ಯಾವುದೇ ಪದವಿ ಅಥವಾ ಇತರ ಸ್ನಾತಕೋತ್ತರ ಪದವಿಯಲ್ಲಿ ಅಧ್ಯಯನ ಮಾಡುತ್ತಿರುವಂತ ವಿದ್ಯಾರ್ಥಿಗಳು ಈ ಒಂದು ಬಸ್ ಪಾಸ್ ಯೋಜನೆಗೆ ಅರ್ಜಿ ಸಲ್ಲಿಸಬಹುದು ಹಾಗಾಗಿ ನಾವು ಈ ಲೇಖನ ಮೂಲಕ ಯಾವ ವರ್ಗದ ವಿದ್ಯಾರ್ಥಿಗಳಿಗೆ ಎಷ್ಟು ಬಸ್ ಪಾಸ್ ಪಡೆಯಲು ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ ಎಂಬ ಮಾಹಿತಿ ತಿಳಿಯೋಣ

WhatsApp Group Join Now
Telegram Group Join Now       

 

ಸ್ಟೂಡೆಂಟ್ ಬಸ್ ಪಾಸ್ ಪಡೆಯಲು ಎಷ್ಟು ದರ ನಿಗದಿ(Student Bus Pass 2025) ..?

ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ:- ಹೌದು ಸ್ನೇಹಿತರೆ, ಸಾಮಾನ್ಯವಾಗಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಂತ ವಿದ್ಯಾರ್ಥಿಗಳಿಗೆ ಈ ಕೆಳಗಿನಂತೆ ಬಸ್ ಪಾಸ್ ತರ ನಿಗದಿ ಮಾಡಲಾಗಿದೆ ಮತ್ತು ಈ ಒಂದು ಬಸ್ ಪಾಸ್ ಅವಧಿ ಹತ್ತು ತಿಂಗಳಗಳ ಕಾಲ ನೀಡಲಾಗುತ್ತದೆ

  • ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ:- ₹150/- 
  • SC/ST ವರ್ಗದ ವಿದ್ಯಾರ್ಥಿಗಳಿಗೆ:- ₹150/-

 

ಪ್ರೌಢಶಾಲೆ ವಿದ್ಯಾರ್ಥಿಗಳಿಗೆ:- ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಈ ಕೆಳಗಿನಂತೆ ಬಸ್ ಪಾಸ್ ದರವನ್ನು ನಿಗದಿ ಮಾಡಲಾಗಿದೆ

  • ಸಾಮಾನ್ಯ ವರ್ಗದ ಬಾಲಕ ವಿದ್ಯಾರ್ಥಿಗಳಿಗೆ:- ₹750/-
  • SC/ST ವರ್ಗದ ಬಾಲಕ ವಿದ್ಯಾರ್ಥಿಗಳಿಗೆ:- ₹150/-
  • ಸಾಮಾನ್ಯ ವರ್ಗದ ಬಾಲಕಿ ವಿದ್ಯಾರ್ಥಿಗಳಿಗೆ:- ₹550
  • SC/ST ವರ್ಗದ ಬಾಲಕಿ ವಿದ್ಯಾರ್ಥಿಗಳಿಗೆ:- ₹150/-

 

ಕಾಲೇಜು ಮತ್ತು ಡಿಪ್ಲೋಮೋ ವಿದ್ಯಾರ್ಥಿಗಳಿಗೆ:- ಹೌದು ಸ್ನೇಹಿತರೆ ಹತ್ತನೇ ತರಗತಿ ನಂತರ ಯಾವುದೇ ಕಾಲೇಜು ಅಥವಾ ಡಿಪ್ಲೋಮೋ ಕೋರ್ಸ್ ಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಕೆಳಗಿನಂತೆ ಬಸ್ ಪಾಸ್ ದರ ನಿಗದಿ ಮಾಡಲಾಗಿದೆ

  • ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ:- ₹1050/- 
  • SC/ST ವರ್ಗದ ವಿದ್ಯಾರ್ಥಿಗಳಿಗೆ:- ₹150/-

 

ಐಟಿಐ ವಿದ್ಯಾರ್ಥಿಗಳಿಗೆ:- ಸ್ನೇಹಿತರೆ ಐ ಟಿ ಐ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬೋರ್ಬರಿ 12 ತಿಂಗಳವರೆಗೆ ಬಸ್ ಪಾಸ್ ನೀಡಲಾಗುತ್ತದೆ ಹಾಗಾಗಿ ಬಸ್ ಪಾಸ್ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಈ ಕೆಳಗಿನಂತೆ ಮಾಡಲಾಗಿದೆ

  • ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ:- ₹1,310/- 
  • SC/ST ವರ್ಗದ ವಿದ್ಯಾರ್ಥಿಗಳಿಗೆ:- ₹160/-

 

ವೃತ್ತಿಪರ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ:- ಹೌದು ಸ್ನೇಹಿತರೆ ವೃತ್ತಿಪರ ಕೋರ್ಸ್ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 10 ತಿಂಗಳವರೆಗೆ ಬಸ್ ಪಾಸ್ ವಿತರಣೆ ಮಾಡಲಾಗುತ್ತದೆ ಹಾಗಾಗಿ ಬಸ್ ಪಾಸ್ ಪಡೆಯಲು ಬಯಸುವ ವಿದ್ಯಾರ್ಥಿಗಳು ಕೆಳಗಡೆ ನೀಡಿದ ಬಸ್ ಪಾಸ್ ದರವನ್ನು ಪಾವತಿಸಬೇಕು

  • ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ:- ₹1,50/- 
  • SC/ST ವರ್ಗದ ವಿದ್ಯಾರ್ಥಿಗಳಿಗೆ:- ₹150/-

 

ಸಂಜೆ ಕಾಲೇಜು ಮತ್ತು ಪಿ ಎಚ್ ಡಿ ವಿದ್ಯಾರ್ಥಿಗಳಿಗೆ:- 

  • ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ:- ₹1,350/- 
  • SC/ST ವರ್ಗದ ವಿದ್ಯಾರ್ಥಿಗಳಿಗೆ:- ₹150/-

 

ಬಸ್ ಪಾಸ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ..?

ವಿದ್ಯಾರ್ಥಿಗಳು ಬಸ್ ಪಾಸ್ ಪಡೆಯಲು ಮೊಬೈಲ್ ಮೂಲಕ ಅರ್ಜಿ ಸಲ್ಲಿಸಲು ಬಯಸಿದರೆ ನೀವು ಮೊದಲು ಕೆಎಸ್ಆರ್ಟಿಸಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಬಸ್ ಫಾರ್ಮ್ ಡೌನ್ಲೋಡ್ ಮಾಡಿಕೊಳ್ಳಿ ನಂತರ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಆ ಒಂದು ಫಾರಂ ಅನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ತುಂಬಾ ಸುಲಭವಾಗಿ ಬಸ್ ಪಾಸಿಗೆ ಅರ್ಜಿ ಸಲ್ಲಿಸಬಹುದು

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

ಸ್ನೇಹಿತರ ಬಸ್ ಪಾಸಿಗೆ ಅರ್ಜಿ ಸಲ್ಲಿಸಲು ಮೇಲೆ ಕೊಟ್ಟಿರುವಂತ ಲಿಂಕಿನ ಮೇಲೆ ಕ್ಲಿಕ್ ಮಾಡಿ ನೀವು ಸೇವಾ ಸಿಂಧು ಪೋರ್ಟಲ್ ಗೆ ಲಾಗಿನ್ ಮಾಡಿ ನಂತರ ಅಲ್ಲಿ ಬಸ್ ಪಾಸಿಗೆ ತುಂಬಾ ಸುಲಭವಾಗಿ ಅರ್ಜಿ ಸಲ್ಲಿಸಬಹುದು ಹಾಗೂ ಬಸ್ ಪಾಸ್ ಪಡೆಯಲು ಇರುವ ಸುಂಕವನ್ನು ನೀವು ಆನ್ಲೈನ್ ಮೂಲಕ ಫೋನ್ ಪೇ ಅಥವಾ ಡೆಬಿಟ್ ಕಾರ್ಡ್ ಇತರ ಆನ್ಲೈನ್ ಮೂಲಕ ಪಾವತಿ ಮಾಡಬಹುದು ಹಾಗೂ ಬಸ್ ಪಾಸ್ ಅರ್ಜಿ ಸಲ್ಲಿಕೆ ಆದ ನಂತರ ನೀವು ನಿಮ್ಮ ಹತ್ತಿರದ ಕೆ ಎಸ್ ಆರ್ ಟಿ ಸಿ ಕಚೇರಿಗಳಿಗೆ ಭೇಟಿ ನೀಡಿ ಬಸ್ ಪಾಸ್ ಪಡೆದುಕೊಳ್ಳಬಹುದು

ನೀವು ಆನ್ಲೈನ್ ಮೂಲಕ ಬಸ್ ಪಾಸ್ ಅರ್ಜಿ ಸಲ್ಲಿಸಲು ಬರದೇ ಹೋದಲ್ಲಿ ನೀವು ನಿಮ್ಮ ಹತ್ತಿರದ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ಇತರ ಸಿಎಸ್‌ಸಿ ಕೇಂದ್ರಗಳಿಗೆ ಅಥವಾ ಆನ್ಲೈನ್ ಕೇಂದ್ರಗಳಿಗೆ ಭೇಟಿ ನೀಡಿ ತುಂಬಾ ಸುಲಭವಾಗಿ ಅರ್ಜಿ ಸಲ್ಲಿಸಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ನೀವು ಕೆಎಸ್ಆರ್ಟಿಸಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ

ವಿಶೇಷ ಸೂಚನೆ:- ಸ್ನೇಹಿತರೆ ನಿಮಗೆ ಇದೇ ರೀತಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿವಿಧ ಮಾಹಿತಿಗಳು ಹಾಗೂ ವಿವಿಧ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಶಾಲಾ ಕಾಲೇಜು ಪ್ರಾರಂಭ ಹಾಗೂ ರಜೆಯ ಕುರಿತು ಮಾಹಿತಿ ಹಾಗೂ ತಂತ್ರಜ್ಞಾನ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಮಾಹಿತಿ ಪಡೆಯಲು ಆಸಕ್ತಿ ಇದ್ದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ಗಳಿಗೆ ಸೇರಿಕೊಳ್ಳಬಹುದು

KEF Scholarship 2025-26: 10ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಸಿಗಲಿದೆ ಪ್ರತಿ ತಿಂಗಳು ₹3500 ವಿದ್ಯಾರ್ಥಿ ವೇತನ ಬೇಗ ಅರ್ಜಿ ಸಲ್ಲಿಸಿ

Leave a Comment

?> ?>