New Ration Card 2025: ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ.! ರೇಷನ್ ಕಾರ್ಡ್ ತಿದ್ದುಪಡಿಗೂ ಕೂಡ ಅವಕಾಶ, ಕೊನೆಯ ದಿನಾಂಕ ಯಾವಾಗ
ನಮಸ್ಕಾರ ಸ್ನೇಹಿತರೆ ಇವತ್ತಿನ ದಿನ ರೇಷನ್ ಕಾರ್ಡ್ ಎಂಬುದು ತುಂಬಾ ಮುಖ್ಯವಾದ ದಾಖಲಾತಿಯಾಗಿದೆ ಮತ್ತು ರೇಷನ್ ಕಾರ್ಡ್ ಹೊಂದಿದಂತ ಕುಟುಂಬಗಳು ಸರಕಾರದ ವಿವಿಧ ಸಬ್ಸಿಡಿ ಯೋಜನೆಗಳ ಲಾಭ ಹಾಗೂ ನಮ್ಮ ಕರ್ನಾಟಕದಲ್ಲಿ ಜಾರಿ ಇರುವಂತಹ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುತ್ತದೆ ಹಾಗಾಗಿ ತುಂಬಾ ಜನರು ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಬಯಸುತ್ತಿದ್ದಾರೆ
ಇದೀಗ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಕೂಡ ಅವಕಾಶ ಮಾಡಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಇರುವ ಕೊನೆಯ ದಿನಾಂಕ ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳ ವಿವರ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಮಾಹಿತಿ ತಿಳಿಯೋಣ
ರೇಷನ್ ಕಾರ್ಡ್ ಅಂದರೆ ಏನು (New Ration Card 2025)..?
ಹೌದು ಸ್ನೇಹಿತರೆ ರೇಷನ್ ಕಾರ್ಡ್ ಅಂದರೆ ಕರ್ನಾಟಕ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ನೀಡುವಂತ ಒಂದು ಗುರುತಿನ ಚೀಟಿಯಾಗಿದ್ದು ಬಿಪಿಎಲ್ ಹಾಗೂ ಅಂತೋದಯ ರೇಷನ್ ಕಾರ್ಡ್ ಹೊಂದಿದವರಿಗೆ ಬಡವರು ಎಂದು ಗುರುತಿಸುತ್ತಾರೆ. (Ration card) ಹೊಂದಿದವರಿಗೆ ಸರ್ಕಾರ ಕಡೆಯಿಂದ ನಿರ್ದಿಷ್ಟ ಯೋಜನೆಗಳು ಹಾಗೂ ಹೊಸ ಹೊಸ ಯೋಜನೆಗಳನ್ನು ಈ ರೇಷನ್ ಕಾರ್ಡ್ (Ration Card) ಆಧಾರದ ಮೇಲೆ ಅಥವಾ ಮಾನದಂಡವನ್ನು ಆಗಿಸಿಕೊಂಡು ಹಲವಾರು ಸಬ್ಸಿಡಿ (subsidy) ಯೋಜನೆಗಳನ್ನು ವಿವಿಧ ಸರಕಾರಗಳು ತರುತ್ತವೆ

ಇದೀಗ ನಮ್ಮ ಕರ್ನಾಟಕ ರಾಜ್ಯದಲ್ಲಿ ಬಿಪಿಎಲ್ ಅಥವಾ ಅಂಥೋದಯ ರೇಷನ್ ಕಾರ್ಡ್ ಹೊಂದಿದಂತ ಕುಟುಂಬಗಳು ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಪ್ರತಿ ತಿಂಗಳು ಉಚಿತವಾಗಿ 10 ಕೆಜಿ ಅಕ್ಕಿಯನ್ನು ಪಡೆದುಕೊಳ್ಳಬಹುದು ಇದರ ಜೊತೆಗೆ ರಾಜ್ಯ ಸರ್ಕಾರದ ಸಬ್ಸಿಡಿ ಯೋಜನೆಗಳು ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಲಾಭ ಪಡೆಯಲು ಸಾಧ್ಯವಾಗುತ್ತದೆ ಹಾಗೂ ನಮ್ಮ ರಾಜ್ಯದ ಗ್ಯಾರಂಟಿ (guarantee scheme) ಯೋಜನೆಗಳ ಲಾಭ ಪಡೆಯಲು ಕಡ್ಡಾಯವಾಗಿ ರೇಷನ್ ಕಾರ್ಡ್ (Ration Card) ಹೊಂದಿರಬೇಕಾಗುತ್ತದೆ.
ಹೌದು ಸ್ನೇಹಿತರೆ ರೇಷನ್ ಕಾರ್ಡ್ ಬಂದಿದೆ ಅಂತ ಕುಟುಂಬಗಳು ಇವತ್ತು ನಮ್ಮ ರಾಜ್ಯದಲ್ಲಿ ಸುಮಾರು 8 ಸಾವಿರದವರೆಗೆ ಪ್ರತಿ ತಿಂಗಳು ನೇರವಾಗಿ ಹಣದ ಸಹಾಯವನ್ನು ಪಡೆದುಕೊಳ್ಳಬಹುದು ಅದು ಹೇಗೆ ಅಂದರೆ, ಕರ್ನಾಟಕ ರಾಜ್ಯ ಸರ್ಕಾರ ವತಿಯಿಂದ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 2000 ಹಣವನ್ನು ಪಡೆದುಕೊಳ್ಳಬಹುದು ಹಾಗೂ ಗೃಹಜೋತಿ ಯೋಜನೆ ಅಡಿಯಲ್ಲಿ ಉಚಿತ ವಿದ್ಯುತ್ ಸೌಲಭ್ಯ ಬಳಸಬಹುದು ಇದರ ಜೊತೆಗೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಉಚಿತ ಅಕ್ಕಿ ಪಡೆದುಕೊಳ್ಳಬಹುದು ಹಾಗೂ ಯುವನಿಧಿ ಯೋಜನೆ ಅಡಿಯಲ್ಲಿ ಸುಮಾರು ಪ್ರತಿ ತಿಂಗಳು 3000 ಹಣ ಪದವಿ ಪಾಸಾದಂತ ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು..
ಆದ್ದರಿಂದ ತುಂಬಾ ಜನರು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ ಇದೀಗ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಇದರ ಜೊತೆಗೆ ತಿದ್ದುಪಡಿ ಮಾಡಲು ಇರುವ ಕೊನೆಯ ದಿನಾಂಕ ಯಾವಾಗ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಹೊಸ ರೇಷನ್ ಕಾರ್ಡ್ (New Ration Card 2025) ಅರ್ಜಿ ಮತ್ತು ತಿದ್ದುಪಡಿ ಪ್ರಾರಂಭ..?
ಹೌದು ಸ್ನೇಹಿತರೆ ನಮ್ಮ ರಾಜ್ಯ ಸರ್ಕಾರ ಇದೀಗ ಹೊಸದಾಗಿ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವವರಿಗೆ ಹಾಗೂ ರೇಷನ್ ಕಾರ್ಡ್ ನಲ್ಲಿ ಯಾವುದೇ ಬದಲಾವಣೆ ಅಥವಾ ತಿದ್ದುಪಡಿ ಮಾಡಲು ಬಯಸುವವರಿಗೆ ಜೂನ್ 30 2025 ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಹಾಗೂ ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಟ್ಟಿದೆ ಆದರಿಂದ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ಈ ದಿನಾಂಕದ ಒಳಗಡೆ ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಆನ್ಲೈನ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು
ಹೌದು ಸ್ನೇಹಿತರೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5:00 ವರೆಗೆ ಅರ್ಜಿ ಸಲ್ಲಿಸಲು ಹಾಗೂ ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಟ್ಟಿದೆ ಆದ್ದರಿಂದ ಹೊಸದಾಗಿ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬಯಸುವವರು ನಿಮ್ಮ ಹತ್ತಿರ ಎರಡು ವರ್ಷದ ಕ್ಕಿಂತ ಹಳೆಯ ಈ ಶ್ರಮ ಕಾರ್ಡ್ ಇದ್ದರೆ ನಿಮಗೆ ಒಂದು ತಿಂಗಳಲ್ಲಿ ಹೊಸ ರೇಷನ್ ಕಾರ್ಡ್ ಸಿಗುತ್ತೆ ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಬಯಸುವವರು ಈ ದಿನಾಂಕದ ಒಳಗಡೆ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ
ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿಗೆ ಬೇಕಾಗುವ (New Ration Card 2025) ಅಗತ್ಯ ದಾಖಲಾತಿಗಳು..?
ಹೊಸ ರೇಷನ್ ಕಾರ್ಡ್:-
1) ಜಾತಿ ಪ್ರಮಾಣ ಪತ್ರ
2) ಆದಾಯ ಪ್ರಮಾಣ ಪತ್ರ
3) ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
4) ಜನನ ಪ್ರಮಾಣ ಪತ್ರ (ಮಕ್ಕಳಿಗೆ ಮಾತ್ರ)
5) ಈ ಶ್ರಮ ಕಾರ್ಡ್ or Job Card
6) ಮೊಬೈಲ್ ನಂಬರ್
7) ಇತರೆ ಅಗತ್ಯ ದಾಖಲಾತಿಗಳು
ರೇಷನ್ ಕಾರ್ಡ್ ತಿದ್ದುಪಡಿ:-
1) ರೇಷನ್ ಕಾರ್ಡ್
2) ಜಾತಿ ಪ್ರಮಾಣ ಪತ್ರ
3) ಆದಾಯ ಪ್ರಮಾಣ ಪತ್ರ
4) ಮೊಬೈಲ್ ನಂಬರ್
5) ಜನನ ಪ್ರಮಾಣ ಪತ್ರ (ಮಕ್ಕಳಿಗೆ ಮಾತ್ರ)
6) ಸದಸ್ಯರ ಆಧಾರ್ ಕಾರ್ಡ್
7) ಇತರೆ ದಾಖಲಾತಿಗಳು
ವಿಶೇಷ ಸೂಚನೆ:- ಹೊಸದಾಗಿ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಹಾಗೂ ರೇಷನ್ ಕಾರ್ಡ್ ನಲ್ಲಿ ಯಾವುದೇ ತಿದ್ದುಪಡಿ ಅಥವಾ ಸದಸ್ಯರನ್ನು ಸೇರ್ಪಡೆ ಮಾಡಲು ಬಯಸುತ್ತಿದ್ದರೆ ನೀವು ಕೂಡಲೇ ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಆನ್ಲೈನ್ ಕೇಂದ್ರಗಳಿಗೆ ಭೇಟಿ ನೀಡಿ ಹಾಗೂ ಹೆಚ್ಚಿನ ಮಾಹಿತಿಗಾಗಿ (more information) ಆಹಾರ ಇಲಾಖೆಯ ಅಧಿಕೃತ (ahara official) ವೆಬ್ ಸೈಟಿಗೆ ಭೇಟಿ ನೀಡಿ ಹಾಗೂ ಇದೇ ರೀತಿ ಪ್ರತಿದಿನ (daily Updates) ಹೊಸ ಮಾಹಿತಿ ಪಡೆಯಲು ಹಾಗೂ ಸರಕಾರಿ (government schemes) ಯೋಜನೆಗಳ ಬಗ್ಗೆ ಪ್ರತಿದಿನ ಅಪ್ಡೇಟ್ ಪಡೆದುಕೊಳ್ಳಲು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ನೀವು ಸೇರಿಕೊಳ್ಳಬಹುದು
PM Kisan 20Th Instalment: ಪಿಎಂ ಕಿಸಾನ್ 20ನೇ ಕಂತಿನ ಹಣ ರೂ. 2000 ಈ ದಿನ ಬಿಡುಗಡೆ ಇಲ್ಲಿದೆ ನೋಡಿ ಮಾಹಿತಿ