Vidyadhan Scholarship 2025: ಹತ್ತನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ 75,000 ವರೆಗೆ ಸ್ಕಾಲರ್ಶಿಪ್ ಸಿಗುತ್ತೆ! ವಿದ್ಯಾಧನ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ

Vidyadhan Scholarship 2025: ಹತ್ತನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ 75,000 ವರೆಗೆ ಸ್ಕಾಲರ್ಶಿಪ್ ಸಿಗುತ್ತೆ! ವಿದ್ಯಾಧನ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಹತ್ತನೇ ತರಗತಿ ಪಾಸಾದಂತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದೀಗ ಕರ್ನಾಟಕ ವಿದ್ಯಾಧನ್ ವಿದ್ಯಾರ್ಥಿ ವೇತನದ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ ಅರ್ಜಿ ಸಲ್ಲಿಸಿದಂತ ವಿದ್ಯಾರ್ಥಿಗಳಿಗೆ ಗರಿಷ್ಠ 75,000 ವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಹಾಗಾಗಿ ಈ ಒಂದು ಲೇಖನಯ ಮೂಲಕ ಈ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ಹಾಗೂ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಎಂಬ ವಿಷಯ ತಿಳಿಯೋಣ

ಪಿಎಂ ಕಿಸಾನ್ ಯೋಜನೆಯ ಹೊಸ ಅಪ್ಡೇಟ್ ತಕ್ಷಣ ರೈತರು ಈ ಒಂದು ಕೆಲಸ ಮಾಡಿ 2000 ಹಣವನ್ನು ಪಡೆದುಕೊಳ್ಳಿ ಇಲ್ಲಿದೆ ನೋಡಿ ಸಂಪೂರ್ಣ ವಿವರ

ಹೌದು ಸ್ನೇಹಿತರೆ ತುಂಬಾ ಬಡ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಂದುವರಿಸಲು ಆರ್ಥಿಕ ನೆರವು ಸಿಗದೇ ಸಾಕಷ್ಟು ವಿದ್ಯಾರ್ಥಿಗಳು ಮಧ್ಯದಲ್ಲಿ ಶಾಲಾ-ಕಾಲೇಜುಗಳು ಬಿಡುತ್ತಾರೆ ಅಂತವರಿಗೆ ಈ ಒಂದು ವಿದ್ಯಾರ್ಥಿ ವೇತನ ಸಾಕಷ್ಟು ನೆರವು ನೀಡಲಾಗುತ್ತಿದೆ ಎಂದು ಹೇಳಬಹುದು ಹಾಗಾಗಿ ಬಡ ವಿದ್ಯಾರ್ಥಿಗಳು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಆರ್ಥಿಕ ನೆರವು ಪಡೆದುಕೊಳ್ಳಬಹುದು ಹಾಗಾಗಿ ಬೇಗ ಈ ಒಂದು ಲೇಖನವನ್ನು ನೀವು ಬಡ ವಿದ್ಯಾರ್ಥಿಗಳಿಗೆ ಶೇರ್ ಮಾಡಿ

 

ವಿದ್ಯಾಧನ್ ಸ್ಕಾಲರ್ಶಿಪ್ ಯೋಜನೆ (Vidyadhan Scholarship 2025)..?

ಹೌದು ಸ್ನೇಹಿತರೆ, ಬಡ ವಿದ್ಯಾರ್ಥಿಗಳಿಗೆ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಮತ್ತು ಉನ್ನತ ಶಿಕ್ಷಣ ಪಡೆಯಲು ಬಯಸುವಂಥ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ 1999 ರಲ್ಲಿ ಇನ್ಫೋಸಿಸ್ ಸಂಸ್ಥೆಯ ಸಹ ಸ್ಥಾಪಕರು ಎಸ್ ಡಿ ಶಿಬುಲಾಲ ಮತ್ತು ಕುಮಾರಿ ಶಿಬುಲಾಲ ಅವರು ಸರೋಜಿನಿ ದಾಮೋದರ್ (SRE) ಪ್ರತಿಷ್ಠಾನದ ಮೂಲಕ ವಿದ್ಯಾ ಧನ್ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ

Vidyadhan Scholarship 2025
Vidyadhan Scholarship 2025

 

ಹೌದು ಸ್ನೇಹಿತರೆ, ಈ ಒಂದು ಸಂಸ್ಥೆ ಇಲ್ಲಿವರೆಗೂ  ನಮ್ಮ ದೇಶದಲ್ಲಿ ಇರುವಂತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಸುಮಾರು 20 ಕ್ಕಿಂತ ಹೆಚ್ಚಿನ ರಾಜ್ಯದ ವಿದ್ಯಾರ್ಥಿಗಳಿಗೆ ಇಲ್ಲಿವರೆಗೂ ಸ್ಕಾಲರ್ಶಿಪ್ ನೀಡತಾ ಬಂದಿದೆ ಹಾಗೂ ಈ ಒಂದು ಸಂಸ್ಥೆ ಇಲ್ಲಿವರೆಗೂ 20 ರಾಜ್ಯಕ್ಕಿಂತ ಹೆಚ್ಚು ಪ್ರತಿಭಾವಂತ 50 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಹೆಚ್ಚು ವಿದ್ಯಾರ್ಥಿ ಗಳಿಗೆ ಇಲ್ಲಿವರೆಗೂ ಆರ್ಥಿಕ ನೆರವು ನೀಡಿದೆ ಮತ್ತು ಈ ಒಂದು ಯೋಜನೆಯನ್ನು 2014ರಲ್ಲಿ ನಮ್ಮ ಕರ್ನಾಟಕದಲ್ಲಿ ಪ್ರಾರಂಭಿಸಲಾಯಿತು ಹಾಗೂ ಈ ಸಂಸ್ಥೆಯಿಂದ 1,500 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆದಿದ್ದಾರೆ.

ಆದ್ದರಿಂದ ಈ ಒಂದು ಸಂಸ್ಥೆ ವಿದ್ಯಾಧನ್ ಯೋಜನೆ ಅಡಿಯಲ್ಲಿ ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ 2025 ರಲ್ಲಿ ವಿದ್ಯಾರ್ಥಿ ವೇತನ ನೀಡಲು ಗುರಿ ಹೊಂದಲಾಗಿದೆ ಹಾಗಾಗಿ ಪ್ರತಿಯೊಬ್ಬ ಬಡ ವಿದ್ಯಾರ್ಥಿಗಳು ಹಾಗೂ ಉನ್ನತ ಶಿಕ್ಷಣ ಪಡೆಯಲು ಬಯಸುವಂತಹ ವಿದ್ಯಾರ್ಥಿಗಳು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ ಆರ್ಥಿಕ ನೆರವು ಪಡೆದುಕೊಳ್ಳಬಹುದು ಹಾಗಾಗಿ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಇದಕ್ಕೆ ಸಂಬಂಧಿಸಿದ ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ

 

ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು (Vidyadhan Scholarship 2025).?

  • ವಿದ್ಯಾ ಧನ್ ಸ್ಕಾಲರ್ಶಿಪ್ ಯೋಜನೆಯ ಮೂಲಕ 75 ಸಾವಿರ ರೂಪಾಯಿವರೆಗೆ ವಿದ್ಯಾರ್ಥಿ ವೇತನ ಪಡೆಯಲು ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ನಮ್ಮ ಕರ್ನಾಟಕದಿಂದ 2025 ರಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
  • ವಿಧ್ಯಾಧನ ಸ್ಕಾಲರ್ಶಿಪ್ ಯೋಜನೆ ಅಡಿಯಲ್ಲಿ ಸ್ಕಾಲರ್ಶಿಪ್ ಪಡೆಯಲು ಬಯಸುವ ವಿದ್ಯಾರ್ಥಿಗಳು ತಮ್ಮ ಎಸ್ ಎಸ್ ಎಲ್ ಸಿ ಯಲ್ಲಿ 90% ಗಿಂತ ಹೆಚ್ಚಿನ ಅಂಕ ಅಥವಾ ಎ ಪ್ಲಸ್ (A+) ಹೊಂದಿರಬೇಕು
  • ವಿದ್ಯಧಾನ್ ಯೋಜನೆ ಅಡಿಯಲ್ಲಿ ಅಂಗವಿಕಲ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಪಡೆಯಲು ಬಯಸಿದರೆ ಇಂದಿನ ತರಗತಿಯಲ್ಲಿ ಅಥವಾ ಎಸ್ಸೆಸ್ಸೆಲ್ಸಿಯಲ್ಲಿ ಶೇಕಡ 75 ರಷ್ಟು ಅಂಕ ಪಡೆದಿರಬೇಕು
  • ವಿದ್ಯಾಧನ್ ಸ್ಕಾಲರ್ಶಿಪ್ ಯೋಜನೆ ಅಡಿಯಲ್ಲಿ ವಿದ್ಯಾರ್ಥಿ ವೇತನ ಪಡೆಯಲು ಬಯಸುವ ವಿದ್ಯಾರ್ಥಿಗಳು ಅಥವಾ ವಿದ್ಯಾರ್ಥಿಗಳ ಪೋಷಕರು ಕಡ್ಡಾಯವಾಗಿ 2 ಲಕ್ಷ ರೂಪಾಯಿಗಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರಬೇಕು

 

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದರೆ ಎಷ್ಟು ಹಣ ಸಿಗುತ್ತದೆ..?

ಹೌದು ಸ್ನೇಹಿತರೆ ವಿದ್ಯಾ ಧನ್ ಸ್ಕಾಲರ್ಶಿಪ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾದಂತ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಮಾಡಲು ವರ್ಷಕ್ಕೆ 10 ಸಾವಿರ ರೂಪಾಯಿವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ ನಂತರ ಪದವಿ ವಿದ್ಯಾಭ್ಯಾಸ ಮಾಡಲು ವಿದ್ಯಾರ್ಹತೆಯ ಅನುಗುಣವಾಗಿ ಅಥವಾ ಪದವಿಯ ಅನುಗುಣವಾಗಿ ಕನಿಷ್ಠ 15000 ರೂಪಾಯಿಯಿಂದ ಗರಿಷ್ಠ 75,000 ವರೆಗೆ ವರ್ಷಕ್ಕೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ ಹಾಗಾಗಿ ಬಡ ವಿದ್ಯಾರ್ಥಿಗಳು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಈ ಒಂದು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ

 

ವಿದ್ಯಾರ್ಥಿ ವೇತನಕ್ಕೆ ಅರ್ಜಿ (Vidyadhan Scholarship 2025) ಸಲ್ಲಿಸಲು ಬೇಕಾಗುವ ದಾಖಲಾತಿಗಳು..?

  • ಇಂದಿನ ತರಗತಿಯ ಅಂಕಪಟ್ಟಿಗಳು
  • ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ
  • ವಿದ್ಯಾರ್ಥಿಯ ಜಾತಿ ಪ್ರಮಾಣ ಪತ್ರ
  • ವಿದ್ಯಾರ್ಥಿಯ ಆದಾಯ ಪ್ರಮಾಣ ಪತ್ರ
  • ವಿದ್ಯಾರ್ಥಿ ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋಸ್
  • ವಿದ್ಯಾರ್ಥಿ ಅಂಗವಿಕಲತೆ ಪ್ರಮಾಣ ಪತ್ರ (ಅಂಗವಿಕಲ ವಿದ್ಯಾರ್ಥಿಗಳಿಗೆ ಮಾತ್ರ)
  • ವಿದ್ಯಾರ್ಥಿಯ ಇಮೇಲ್ ವಿಳಾಸ
  • ವಿದ್ಯಾರ್ಥಿಯ ಬ್ಯಾಂಕ್ ಖಾತೆಯ ವಿವರಗಳು
  • ವಿದ್ಯಾರ್ಥಿಯ ಶಾಲಾ ಪ್ರವೇಶ ಪ್ರಮಾಣ ಪತ್ರ
  • ಇತರೆ ಅಗತ್ಯ ದಾಖಲಾತಿಗಳು

 

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಆಯ್ಕೆ ವಿಧಾನ..?

ಸ್ನೇಹಿತರೆ ಅರ್ಹ ಹಾಗೂ ಆಸಕ್ತಿ ಇರುವಂತಹ ವಿದ್ಯಾರ್ಥಿಗಳು ಕೆಳಗಡೆ ನೀಡಿರುವ ಲಿಂಕ್ ಬಳಸಿಕೊಂಡು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂಟು ಆಗಸ್ಟ್ 2025 ನಿಗದಿ ಮಾಡಲಾಗಿದೆ ಹಾಗಾಗಿ ಆಸಕ್ತಿ ಇರುವ ವಿದ್ಯಾರ್ಥಿಗಳು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಅಥವಾ ನೇರವಾಗಿ ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

ಸ್ನೇಹಿತರೆ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದಂತ ಅಭ್ಯರ್ಥಿಗಳನ್ನು ಮೊದಲು ಆನ್ಲೈನ್ ಹಂತದಲ್ಲಿ ಪರಿಶೀಲನೆ ನಡೆಸಲಾಗುತ್ತದೆ ನಂತರ ಸಾಮಾನ್ಯ ಜ್ಞಾನ ಹಾಗೂ ಭಾಷಾ ಸಾಮರ್ಥ್ಯ ಮತ್ತು ಲೆಕ್ಕಶಾಸ್ತ್ರ ಹಾಗೂ ಇತರ ಆನ್ಲೈನ್ ಪರೀಕ್ಷೆಗಳ ಮೂಲಕ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿದಾರರನ್ನು ಈ ಸಂಸ್ಥೆ ಆಯ್ಕೆ ಮಾಡುತ್ತದೆ ನಂತರ ಈ ಒಂದು ಫೌಂಡೇಶನ್ ವತಿಯಿಂದ ಸ್ವಯಂ ಸೇವಕರನ್ನು ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಎಲ್ಲಾ ಹಂತಗಳ ಪರಿಶೀಲನೆ ನಡೆಸಿ ಅಂತಿಮವಾಗಿ ಈ ಒಂದು ವಿದ್ಯಾರ್ಥಿ ವೇತನಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ

pm kisan 20th installment: ಪಿಎಂ ಕಿಸಾನ್ 20ನೇ ಕಂತಿನ ಹಣ ಈ ದಿನ ಬಿಡುಗಡೆ! ಹಣ ಪಡೆಯಲು ತಕ್ಷಣ ಈ ಕೆಲಸ ಮಾಡಿ

1 thought on “Vidyadhan Scholarship 2025: ಹತ್ತನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ 75,000 ವರೆಗೆ ಸ್ಕಾಲರ್ಶಿಪ್ ಸಿಗುತ್ತೆ! ವಿದ್ಯಾಧನ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ”

Leave a Comment