RRB Technican Recruitment: ರೈಲ್ವೆ ಇಲಾಖೆ ಭರ್ಜರಿ ನೇಮಕಾತಿ.! 6374 ಹುದ್ದೆಗಳಿಗೆ ಅರ್ಜಿ ಆಹ್ವಾನ
ನಮಸ್ಕಾರ ಸ್ನೇಹಿತರೆ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಬಯಸುವಂತಹ ಜನರಿಗೆ ಇದೀಗ ಮತ್ತೆ ಭರ್ಜರಿ ಗುಡ್ ನ್ಯೂಸ್ ನೀಡಿದೆ ಹೌದು ಸ್ನೇಹಿತರೆ ರೈಲ್ವೆ ಇಲಾಖೆ ತನ್ನ ಸಂಸ್ಥೆಯಲ್ಲಿ ಖಾಲಿ ಇರುವಂತ ಸುಮಾರು 6374 ತಂತ್ರಜ್ಞಾನ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಹೊಸ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ ಹಾಗಾಗಿ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ರೈಲ್ವೆ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು
ಹೌದು ಸ್ನೇಹಿತರೆ ಈ ಒಂದು ಲೇಖನಿಯ ಮೂಲಕ ನಾವು ಈ ರೈಲ್ವೆ ತಂತ್ರಜ್ಞಾನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ ಮತ್ತು ಅರ್ಜಿ ಸಲ್ಲಿಸಲು ಬಯಸುವವರು ಹೊಂದಿರಬೇಕಾದ ಅರ್ಹತೆಗಳು ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಆದ್ದರಿಂದ ನೀವು ಈ ಲೇಖನಿಯನ್ನು ಆದಷ್ಟು, ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಮಾಡಲು ಬಯಸುವಂಥ ಜನರಿಗೆ ಶೇರ್ ಮಾಡಿ
ರೈಲ್ವೆ ಇಲಾಖೆ ಹೊಸ ನೇಮಕಾತಿ (RRB Technican Recruitment).?
ನಮ್ಮ ಭಾರತೀಯ ರೈಲ್ವೆ ಇಲಾಖೆ ಇದೀಗ ಆರ್‌ಆರ್‌ಬಿ ತಂತ್ರಜ್ಞಾನದ ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಈ ಒಂದು ಅಧಿಸೂಚನೆ ಪ್ರಕಾರ ನಮ್ಮ ದೇಶದಲ್ಲಿ ಒಟ್ಟು 6374 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಅಧಿಸೂಚನೆ ಪ್ರಕಾರ ವಿವಿಧ 18 ರೈಲ್ವೆ ವಲಯಗಳು ಖಾಲಿ ಇರುವ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಹಾಗಾಗಿ ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು

ಹೌದು ಸ್ನೇಹಿತರೆ ಈ ನೇಮಕಾತಿ ಅಧಿಸೂಚನೆ ಪ್ರಕಾರ ಸುಮಾರು 18 ರೈಲ್ವೆ ವಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಪಶ್ಚಿಮ ರೈಲ್ವೆ ವಲಯದಲ್ಲಿ 849 ಹುದ್ದೆಗಳು, ದಕ್ಷಿಣ ರೈಲ್ವೆ ವಲಯದಲ್ಲಿ 1,215 ಹುದ್ದೆಗಳು, ಪೂರ್ವ ರೈಲ್ವೆ ವಲಯದಲ್ಲಿ 1,119 ಹುದ್ದೆಗಳು ಖಾಲಿ ಇವೆ, ಉತ್ತರ ರೈಲ್ವೆ ವಲಯದಲ್ಲಿ 478 ಹುದ್ದೆಗಳು ಖಾಲಿ ಇವೆ, ಇಂಟಿಗ್ರೇಲ್ ಕೋಚ್ ಫ್ಯಾಕ್ಟರಿ 404 ಹುದ್ದೆಗಳು ಖಾಲಿ ಇವೆ, ಮಧ್ಯ ರೈಲ್ವೆ ವಲಯ 305 ಹುದ್ದೆಗಳು ಖಾಲಿ ಇವೆ, ಉತ್ತರ ಮಧ್ಯ ರೈಲ್ವೆ 241 ಹುದ್ದೆಗಳು ಖಾಲಿ ಇವೆ, ಪೂರ್ವ ಮಧ್ಯ ರೈಲ್ವೆ ವಲಯ 31 ಹುದ್ದೆಗಳು ಮತ್ತು ಇತರ ವಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ನಡೆಯಲಿದೆ
ಹುದ್ದೆಗಳ ನೇಮಕಾತಿ ವಿವರ (RRB Technican Recruitment).?
ನೇಮಕಾತಿ ಇಲಾಖೆ:- ರೈಲ್ವೆ ಇಲಾಖೆ
ಖಾಲಿ ಹುದ್ದೆಗಳ ಸಂಖ್ಯೆ:- 6374 ಹುದ್ದೆಗಳು
ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ
ಅರ್ಜಿ ಪ್ರಾರಂಭ ದಿನಾಂಕ:- ಶೀಘ್ರದಲ್ಲೇ ಪ್ರಕಟಣೆ
ಅರ್ಜಿ ಕೊನೆಯ ದಿನಾಂಕ:- ಶೀಘ್ರದಲ್ಲೇ ಪ್ರಕಟಣೆ
ಅರ್ಜಿ ಶುಲ್ಕ:- ₹250-₹500 ರೂಪಾಯಿವರೆಗೆ
ಅರ್ಜಿ ಸಲ್ಲಿಸಲು (RRB Technican Recruitment) ಇರುವ ಅರ್ಹತೆಗಳು..?
ಶೈಕ್ಷಣಿಕ ಅರ್ಹತೆ:- ಸ್ನೇಹಿತರ ಭಾರತೀಯ ರೈಲ್ವೆ ಇಲಾಖೆ ಇದೀಗ ಆರ್ ಆರ್ ಬಿ ಅಡಿಯಲ್ಲಿ ಸುಮಾರು 6374 ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಹಾಗಾಗಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಹುದ್ದೆಗಳ ಅನುಗುಣವಾಗಿ ಗ್ರೇಡ್-1 ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಯಾವುದೇ ಕ್ಷೇತ್ರದಲ್ಲಿ ಡಿಪ್ಲೋಮೋ ಹಾಗೂ ಬಿ ಎಸ್ ಸಿ ಪಾಸಾದವರು ಅರ್ಜಿ ಸಲ್ಲಿಸಬಹುದು ಹಾಗೂ ಗ್ರೇಡ್-3 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಐಟಿಐ ಮತ್ತು ಪದವಿ ಹೊಂದಿದವರು ಅರ್ಜಿ ಸಲ್ಲಿಸಬಹುದು
ಸಂಬಳ ಎಷ್ಟು:- ಭಾರತೀಯ ರೈಲ್ವೆ ಇಲಾಖೆ ಆರ್‌ಆರ್‌ಬಿ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆ ಪ್ರಕಾರ ಹುದ್ದೆಗಳ ಅನುಗುಣವಾಗಿ ತಿಂಗಳಿಗೆ ಕನಿಷ್ಠ 21000 ಯಿಂದ ಗರಿಷ್ಠ 67,000 ವರೆಗೆ ಸಂಬಳ ನೀಡಲಾಗುತ್ತದೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನೀವು ಅಧಿಕೃತ ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ನೋಡಿ
ವಯೋಮಿತಿ ಎಷ್ಟು:- ಭಾರತೀಯ ರೈಲ್ವೆ ಇಲಾಖೆ ಆರ್ ಆರ್ ಬಿ ಬಿಡುಗಡೆ ಮಾಡಿರುವ ನೇಮಕಾತಿ ಅಧಿಸೂಚನೆ ಪ್ರಕಾರ ಈ 6374 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರ ವಯಸ್ಸು ಹುದ್ದೆಗಳ ಅನುಗುಣವಾಗಿ ಕನಿಷ್ಠ 18 ವರ್ಷದಿಂದ ಗರಿಷ್ಠ 36 ವರ್ಷದವರೆಗೆ ನಿಗದಿ ಮಾಡಲಾಗಿದೆ ಹಾಗೂ ಮೀಸಲಾತಿ ಆಧಾರದ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಒಬಿಸಿ ಮತ್ತು ಪಿ ಡಬ್ಲ್ಯೂ ಡಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ
ಆಯ್ಕೆ ಪ್ರಕ್ರಿಯೆ:- ಭಾರತೀಯ ರೈಲ್ವೆ ಇಲಾಖೆ RRB ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೊದಲು ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಮೇಲೆ ಆಯ್ಕೆ ಮಾಡಲಾಗುತ್ತದೆ ನಂತರ ದಾಖಲಾತಿ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ಮತ್ತು ಇತರ ವಿಧಾನಗಳನ್ನು ಆಧರಿಸಿ ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ
ಅರ್ಜಿ ಸಲ್ಲಿಸುವುದು ಹೇಗೆ (RRB Technican Recruitment).?
ಸ್ನೇಹಿತರೆ ಭಾರತೀಯ ರೈಲ್ವೆ ಇಲಾಖೆ ಬಿಡುಗಡೆ ಮಾಡಿರುವ ಆರ್ ಆರ್ ಬಿ ಅಧಿಕೃತ ಅಧಿಸೂಚನೆ ಪ್ರಕಾರ ಈ 6374 ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ಹಾಗಾಗಿ ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ ಕೆಳಗಡೆ ನೀಡಿದ್ದೇವೆ ಹಾಗೂ ನೀವು ನಿಮ್ಮ ಹತ್ತಿರದ (online centre) ಆನ್ಲೈನ್ ಸೆಂಟರ್ ಗಳಿಗೆ (apply) ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರೆ ಇದೇ ರೀತಿ ನಿಮಗೆ ಸರ್ಕಾರಿ ಉದ್ಯೋಗ ಹಾಗೂ ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಮತ್ತು ನಮ್ಮ ಕರ್ನಾಟಕದ ವಿವಿಧ ಜಿಲ್ಲೆ ಹಾಗೂ ವಿವಿಧ ತಾಲೂಕು ಮತ್ತು ಪ್ರದೇಶಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ಕೇಂದ್ರ ಸರಕಾರದ ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಮತ್ತು ಇತರ ಹುದ್ದೆಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಿ