ಹೊಸ ರೇಷನ್ ಕಾರ್ಡ್ ಗೆ ಅರ್ಜಿ & ತಿದ್ದುಪಡಿಗೆ ಅವಕಾಶ..! ಬೇಕಾಗುವ ದಾಖಲೆಗಳೇನು ? Ration Card apply

ನಮಸ್ಕಾರ ಸ್ನೇಹಿತರೆ ಈ ಲೇಖನ ಮೂಲಕ ಕರ್ನಾಟಕ ಸಮಸ್ತ ಜನರಿಗೆ ತಿಳಿಸುವುದೇನೆಂದರೆ ಹೊಸ ರೇಷನ್ ಕಾರ್ಡಿಗೆ ( Ration Card apply ) ಅರ್ಜಿ ಮತ್ತು ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ ಈ ಸುದ್ದಿಯು ಕರ್ನಾಟಕ ಸರ್ಕಾರ ಕಡೆಯಿಂದ ಬಂದ ಆಫೀಷಿಯಲ್ ಸುದ್ದಿಯಾಗಿದೆ ಯಾವ ದಿನಾಂಕದಂದು ಹೊಸ ರೇಷನ್ ಕಾರ್ಡ್ ಅರ್ಜಿಗ ಮತ್ತು ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಕೊಡಲಾಗುತ್ತೆ ಎಂದು ಈ ಲೇಖನದಲ್ಲಿ ತಿಳಿಸಿಕೊಡುತ್ತಿದ್ದೇನೆ ಹಾಗಾಗಿ ಈ ಲೇಖನೆಯನ್ನು ಪೂರ್ತಿಯಾಗಿ ಓದಿ ಅಂದರೆ ಮಾತ್ರ ನಿಮಗೆ ನಿಖರವಾದ ಮಾಹಿತಿ ಗೊತ್ತಾಗುತ್ತದೆ

ರೇಷನ್ ಕಾರ್ಡ್ ಎಂಬುದು ಈಗ ತುಂಬಾ ಮಹತ್ವವನ್ನು ಪಡೆದುಕೊಂಡಿದೆ ಏಕೆಂದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ ಇದರಲ್ಲಿ ಪ್ರಮುಖವಾಗಿ ಮೂರು ಗ್ಯಾರಂಟಿಗಳನ್ನು ಪಡೆಯಬೇಕಾದರೆ ರೇಷನ್ ಕಾರ್ಡನ್ನು ಒಂದು ಮಾನದಂಡವಾಗಿ ಬಳಸಲಾಗುತ್ತದೆ. ಆದ್ದರಿಂದ ತುಂಬಾ ಜನರು ಹೊಸ ರೇಷನ್ ಕಾರ್ಡಿಗೆ ( Ration Card apply ) ಅರ್ಜಿ ಹಾಕಲು ಕಾಯುತ್ತಿದ್ದಾರೆ ಅಂತವರಿಗೆ ಕರ್ನಾಟಕ ಸರ್ಕಾರ ಕಡೆಯಿಂದ ಗುಡ್ ನ್ಯೂಸ್ ಬಂದಿದೆ ಎಂದು ಹೇಳಬಹುದು.

ರೇಷನ್ ಕಾರ್ಡ್ ಎಂಬುವುದು ಈಗಿನ ಕಾಲದಲ್ಲಿ ಒಂದು ಪ್ರಮುಖ ಆಧಾರವಾಗಿ ಬಳಸಲಾಗುತ್ತದೆ ಉದಾಹರಣೆ ಯಾವುದೇ ಒಂದು ಯೋಜನೆಯ ಲಾಭ ಪಡೆಯಬೇಕಾದರೆ ಅದಕ್ಕೆ ಪ್ರಮುಖವಾಗಿ ರೇಷನ್ ಕಾರ್ಡ್ ಆಧಾರವಾಗಿ ಬಳಸಲಾಗುತ್ತದೆ ಅಂತ ರೇಷನ್ ಕಾರ್ಡ್ ಮಾಡಿಸಲು ತುಂಬಾ ಜನರು ಎರಡು ಮೂರು ವರ್ಷಗಳಿಂದ ಕಾಯುತ್ತಿದ್ದಾರೆ ಆದ್ದರಿಂದ ಈ ಲೇಖನ ಮೂಲಕ ಯಾವ ರೀತಿ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕುವುದು ಮತ್ತು ರೇಷನ್ ಕಾರ್ಡ್ ತಿದ್ದುಪಡಿಗೆ ಯಾವ ದಾಖಲಾತಿಗಳು ಬೇಕಾಗುತ್ತವೆ ಎಂಬುದು ಈ ಲೇಖನೆಯಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಸಿದ್ದೇನೆ ಹಾಗಾಗಿ ಈ ಲೇಖನೆಯನ್ನು ಪೂರ್ತಿಯಾಗಿ ಓದಿ

ರೇಷನ್ ಕಾರ್ಡ್ ಯಾವಾಗ ಜಾರಿಗೆ ಬಂದಿದೆ ( Ration Card apply )

ರೇಷನ್ ಕಾರ್ಡ್ ( Ration Card apply ) ಮೊದಲು ಪರಿಚಯಿಸಿದವರು ಬ್ರಿಟಿಷರು ಅವರು ಎರಡನೇ ಮಹಾಯುದ್ಧದ ಕಾಲದಲ್ಲಿ ಬಡ ಕುಟುಂಬಗಳಿಗೆ ಮತ್ತು ಯುದ್ಧದಲ್ಲಿ ಹೋರಾಡಿದ ಸೈನಿಕರ ಕುಟುಂಬಕ್ಕೆ ಪಂಡಿತರ ಚೀಟಿಯ ಮೂಲಕ ಆಹಾರ ದವಸ ಧಾನ್ಯಗಳನ್ನು ಹಂಚಿಕೆ ಮಾಡಲು ಪ್ರಾರಂಭಿಸಿದರು.

WhatsApp Group Join Now
Telegram Group Join Now       

1947ರಲ್ಲಿ ಭಾರತ ದೇಶಕ್ಕೆ ಸ್ವತಂತ್ರ ಬಂದ ನಂತರ 1950 ರಲ್ಲಿ ಮತ್ತೆ ಈ ಪಂಡಿತರ ಚೀಟಿಯ ಮೂಲಕ ಆಹಾರ ಮತ್ತು ದವಸ ಧಾನ್ಯಗಳನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪಂಡಿತರ ಚೀಟಿಯ ಮೂಲಕ ವಿತರಣೆ ಮಾಡಲಾಯಿತು.

1947ರಲ್ಲಿ ಸ್ವತಂತ್ರ ಬಂದ ನಂತರ ಭಾರತದಲ್ಲಿ ತೀವ್ರ ಹಣದುಬ್ಬರ ಮತ್ತು ಬಡತನದಿಂದ ಜನರು ಹಸಿವಿನಿಂದ ಬಳಲುತ್ತಿದ್ದರು ಆದ್ದರಿಂದ ಭಾರತ ಸರ್ಕಾರ ಬಡವರಿಗೆ ಮತ್ತು ಹಸಿವಿನಿಂದ ಬಳಲುವಂತಹ ಕುಟುಂಬಗಳಿಗೆ ( Ration Card apply ) ಪಂಡಿತರ ಚೀಟಿಯ ಮೂಲಕ ಸಬ್ಸಿಡಿ ದರದಲ್ಲಿ ಅಗತ್ಯವಿರುವ ದವಸ ಧಾನ್ಯಗಳನ್ನು ವಿತರಣೆ ಮಾಡಲು ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿತ್ತು.

ರೇಷನ್ ಕಾರ್ಡ್ ನಲ್ಲಿ ಎಷ್ಟು ವಿಧಗಳು ( Ration Card apply )

ಈ ಲೇಖನ ಮೂಲಕ ನಾವು ಕರ್ನಾಟಕದಲ್ಲಿರುವ ಪಂಡಿತರ ಚೀಟಿಗಳ ವಿವಿಧ ಕಾಡುಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಕರ್ನಾಟಕದಲ್ಲಿ ರೇಷನ್ ಕಾರ್ಡ್ ಅಥವಾ ಪಂಡಿತರ ಚೀಟಿ ಎಂದು ಕರೆಯಬಹುದು ಕರ್ನಾಟಕದಲ್ಲಿರುವ ಪಂಡಿತರ ಚೀಟಿಗಳಲ್ಲಿ ಮೂರರಿಂದ ನಾಲ್ಕು ರೀತಿಯ ಪಂಡಿತರ ಚೀಟಿಗಳಿಗೆ.

1) BPL Ration Card

WhatsApp Group Join Now
Telegram Group Join Now       

2) AAY Ration Card

3) APL Ration Card

BPL Ration Card:- ಬಿಪಿಎಲ್ ರೇಷನ್ ಕಾರ್ಡ್ ( Ration Card apply ) ಈ ರೇಷನ್ ಕಾರ್ಡನ್ನು ಬಡತನ ರೇಖೆ ಗಳಿಗಿಂತ ಕೆಳಗಿರುವ ಕುಟುಂಬಗಳಿಗೆ ನೀಡಲಾಗುತ್ತದೆ. ಈ ರೇಷನ್ ಕಾರ್ಡ್ ಪಡೆಯುವುದರಿಂದ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಬಹುದಾಗಿದೆ ಹಾಗೂ ಈ ಕಾರ್ಡನ್ನು ಬಡತನ ರೇಖೆಗಿಂತ ಕೆಳಗಿರುವವರಿಗೆ ಅಂದರೆ ಅವರ ವಾರ್ಷಿಕ ಆದಾಯ 36,000ಗಿಂತ ಕಡಿಮೆ ಇದ್ದರೆ ಅಂತವರಿಗೆ ಬಿಪಿಎಲ್ ರೇಷನ್ ಕಾರ್ಡ್ ನೀಡಲಾಗುತ್ತದೆ.

  • ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಕರ್ನಾಟಕದಲ್ಲಿ ತಲಾ ಹತ್ತು ಕೆಜಿ ಅಕ್ಕಿ ನೀಡುತ್ತವೆ ಎಂದು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಘೋಷಣೆ ಮಾಡಿತ್ತು.
  • ಪ್ರಸ್ತುತ ಕರ್ನಾಟಕದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಪಡೆದವರಿಗೆ ಕೇಂದ್ರ ಸರಕಾರದಿಂದ ಪ್ರತಿಯೊಬ್ಬ ಸದಸ್ಯನಿಗೆ ಐದು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ ಹಾಗೂ ರೇಷನ್ ಕಾರ್ಡ್ ನಲ್ಲಿ ಎಷ್ಟು ಜನರ ಸದಸ್ಯರು ಇರುತ್ತಾರೆ ಅಷ್ಟು ಜನರಿಗೆ ಕೇಂದ್ರ ಸರ್ಕಾರದಿಂದ 5 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ.

ಉದಾಹರಣೆಗೆ:-  ಒಂದು ರೇಷನ್ ಕಾರ್ಡ್ ನಲ್ಲಿ ಐದು ಜನ ಸದಸ್ಯರಿದ್ದಾರೆ ಎಂದರೆ ಅವರಿಗೆ 25 ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರದ ಕಡೆಯಿಂದ ಉಚಿತವಾಗಿ ನೀಡಲಾಗುತ್ತದೆ.

ಕರ್ನಾಟಕದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಕರ್ನಾಟಕ ಸರಕಾರ ಕಡೆಯಿಂದ ಅಕ್ಕಿಯ ಅಭಾವ ಇರುವುದರಿಂದ ಪ್ರತಿಯೊಬ್ಬ ಸದಸ್ಯನಿಗೆ ಒಂದು ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ 5 ಕೆಜಿ ಅಕ್ಕಿಗೆ 170 ರೂ.ಗಳ ಹಣವನ್ನು ರೇಷನ್ ಕಾರ್ಡ್ ಕುಟುಂಬದ ಮುಖ್ಯಸ್ಥೆಯಾದ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ವರ್ಗಾವಣೆ ಮಾಡಲಾಗುತ್ತದೆ.

ಉದಾಹರಣೆ:- ಒಂದು ರೇಷನ್ ಕಾರ್ಡ್ ನಲ್ಲಿ ಒಬ್ಬ ಸದಸ್ಯರಿಗೆ 5 ಕೆಜಿ ಅಕ್ಕಿ ಹಣ ರೂ.170ಯಂತೆ ಒಂದು ರೇಷನ್ ಕಾರ್ಡ್ ನಲ್ಲಿ ಐದು ಜನ ಸದಸ್ಯರಿದ್ದರೆ 850 ರೂ ಗಳನ್ನೂ ನೀಡಲಾಗುತ್ತದೆ ಈ ಹಣವನ್ನು ರೇಷನ್ ಕಾರ್ಡ್ ಕುಟುಂಬದ ಮುಖ್ಯಸ್ಥೆ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ವರ್ಗಾವಣೆ ಮಾಡಲಾಗುತ್ತದೆ.

ಕರ್ನಾಟಕದಲ್ಲಿ ಇಲ್ಲಿವರೆಗೂ ಬಿಪಿಎಲ್ ಕಾರ್ಡ್ ಹೊಂದಿದ ಸದಸ್ಯರಿಗೆ ಆರು ತಿಂಗಳಿನ ಅಕ್ಕಿ ಹಣವನ್ನು ರೇಷನ್ ಕಾರ್ಡ್ ಮುಖ್ಯಸ್ಥರಿಗೆ ವರ್ಗಾವಣೆ ಮಾಡಲಾಗಿದೆ.

AYY Ration Card:- ಈ ರೇಷನ್ ( Ration Card apply ) ಕಾರ್ಡನ್ನು ಅತ್ಯಂತ ಕಡು ಬಡತನದಲ್ಲಿರುವ ಕುಟುಂಬಗಳಿಗೆ ನೀಡಲಾಗುತ್ತದೆ ಈ ರೇಷನ್ ಕಾರ್ಡ್ ಹೊಂದಿದ ವ್ಯಕ್ತಿಗಳನ್ನು ಅತ್ಯಂತ ಕಡುಬಡುವರೆಂದು ಕರ್ನಾಟಕ ರಾಜ್ಯ ಸರ್ಕಾರ ಕಡೆಯಿಂದ ಗುರುತಿಸಲಾಗುತ್ತದೆ.

  • ಅಂತೋದಯ ಅನ್ನ ಯೋಜನೆಯ ಕಾಡನ್ನು ಪಡೆಯಬೇಕೆಂದರೆ ವಾರ್ಷಿಕ ಆದಾಯ 15,000 ಗಿಂತ ಕಡಿಮೆ ಇರಬೇಕಾಗುತ್ತದೆ ಅಂದರೆ ಮಾತ್ರ ಈ ರೇಷನ್ ಕಾರ್ಡನ್ನು ಪಡೆಯಬಹುದಾಗಿದೆ.

ಅಂತೋದಯ ಅನ್ನ ಯೋಜನೆ ರೇಷನ್ ( Ration Card apply ) ಕಾರ್ಡಿನಿಂದ ಆಗುವ ಉಪಯೋಗಗಳು

  • ಈ ರೇಷನ್ ಕಾರ್ಡ್ ಹೊಂದಿದಂತ ಕುಟುಂಬಗಳನ್ನು ಅತ್ಯಂತ ಕಡುಬಡುವರೆಂದು ಗುರುತಿಸಲಾಗುತ್ತದೆ ಹಾಗೂ ಈ ಕುಟುಂಬದಲ್ಲಿ 60 ವರ್ಷ ಮೇಲ್ಪಟ್ಟ ವಯಸ್ಕರ ಇದ್ದರೆ ಅವರಿಗೆ ಅಂಚೆಯ ಮೂಲಕ ಹಾಗೂ ನೇರವಾಗಿ ಅವರ ಮನೆಗೆ ರೇಷನ್ ಸೆಲ್ಫಿಸಲಾಗುತ್ತದೆ.
  • ಅಂತೋದಯ ಅನ್ನ ಯೋಜನೆ ರೇಷನ್ ಕಾರ್ಡ್ ನಿಂದ ಕೇಂದ್ರ ಸರಕಾರ ಕಡೆಯಿಂದ 35 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ಈ ರೇಷನ್ ಕಾರ್ಡ್ ನಲ್ಲಿ ಎಷ್ಟು ಜನ ಸದಸ್ಯರಿದ್ದರು ಕೂಡ 35 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ಅಂದರೆ ಈ ರೇಷನ್ ಕಾರ್ಡ್ ನಲ್ಲಿ ಒಬ್ಬ ಸದಸ್ಯರಿದ್ದರೂ ಕೂಡ 35 ಕೆಜಿ ಅಕ್ಕಿ ಸಿಗುತ್ತದೆ ಮತ್ತು ಹತ್ತು ಜನ ಸದಸ್ಯರಿದ್ದರು ಕೂಡ ಕೇವಲ 35 ಕೆಜಿ ಅಕ್ಕಿ ಮಾತ್ರ ಸಿಗುತ್ತದೆ.

ಕರ್ನಾಟಕ ರಾಜ್ಯ ಸರ್ಕಾರ ಕಡೆಯಿಂದ ಈ ರೇಷನ್ ಕಾರ್ಡ್ ಇದ್ದವರಿಗೆ ಎರಡು ಜನ ಸದಸ್ಯರಕ್ಕಿಂತ ಮೇಲಿದ್ದರೆ ಅಂತವರಿಗೆ ಪ್ರತಿ ತಿಂಗಳು ಒಬ್ಬ ಸದಸ್ಯರಿಗೆ 5 ಕೆಜಿ ಅಕ್ಕಿ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.

ಕರ್ನಾಟಕ ರಾಜ್ಯ ಸರ್ಕಾರ ಕಡೆಯಿಂದ ಈ ಕಾಡು ಹೊಂದಿದವರಿಗೆ 5 ಕೆಜಿ ಅಕ್ಕಿಯ ಹಣ ರೂ.170ಯಂತೆ ಹಣ ಪಡೆಯಬೇಕಾದರೆ ಕನಿಷ್ಠ ಇಬ್ಬರು ಸದಸ್ಯರ ಮೇಲ್ಪಟ್ಟು ಇರಬೇಕಾಗುತ್ತದೆ. ಅಂದರೆ ಮಾತ್ರ ಅಂತವರಿಗೆ ಹಣ ಬರುತ್ತದೆ ಇಲ್ಲವಾದರೆ ಹಣ ಬರುವುದಿಲ್ಲ.

APL Ration Card:- ಈ ರೇಷನ್ ಕಾರ್ಡನ್ನು ಬಡತನ ರೇಖೆಗಿಂತ ಮೇಲಿರುವವರಿಗೆ ನೀಡಲಾಗುತ್ತದೆ. ಈ ರೇಷನ್ ಕಾರ್ಡ್ ನಿಂದ ಸರ್ಕಾರ ಕಡೆಯಿಂದ ಯಾವುದೇ ರೀತಿಯ ಸಬ್ಸಿಡಿ ದರದಲ್ಲಿ ರೇಷನ್ ನೀಡಲಾಗುವುದಿಲ್ಲ.

ಈ ಕಾಡಿನಿಂದ ಉಪಯೋಗವೇನೆಂದು ನೋಡುವುದಾದರೆ ಈ ರೇಷನ್ ಕಾರ್ಡ್ ಹೊಂದಿದವರು ಆರೋಗ್ಯ ಸೇವೆಗಳಿಗಾಗಿ ಈ ಕಾಡಿನ ಉಪಯೋಗ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ official website  ಲಿಂಕ್

Ration Card ಪಡೆಯಲು ಇರಬೇಕಾದ ಅರ್ಹತೆ ( Ration Card apply )

BPL & AAY Ration Card:- 

1) ಕರ್ನಾಟಕದಲ್ಲಿ ರೇಷನ್ ಕಾರ್ಡ್ ಪಡೆಯಲು ಮೊದಲು ನೀವು ಕರ್ನಾಟಕದ ವಾಸ ಮಾಡುವ ನಿವಾಸಿ ಆಗಿರಬೇಕಾಗುತ್ತದೆ

2) ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ನಿಮ್ಮ ವಾರ್ಷಿಕ ಆದಾಯ 36,000ಗಿಂತ ಕಡಿಮೆ ಇರಬೇಕಾಗುತ್ತದೆ

3) ಬಿಪಿಎಲ್ ರೇಷನ್ ಕಾರ್ಡ್ ಪಡೆಯುವವರು ಒಂದುವರೆ ಎಕರೆಗಿಂತ ಮೇಲೆ ಹೆಚ್ಚಿನ ಭೂಮಿಯನ್ನು ಹೊಂದಿರಬಾರದು ಇದು ಹಳ್ಳಿಗಳಲ್ಲಿ ವಾಸ ಮಾಡುವ ಜನರಿಗೆ ಅನ್ವಯಿಸುತ್ತದೆ

4) ನಗರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದರೆ ಅಂತವರು ನೂರು ಚದರ್ ಮೀಟರ್ ಗಿಂತ ಭೂ ವಿಸ್ತರಣವನ್ನು ಹೊಂದಿರಬಾರದು

5) ಈ ಕಾಡಿಗೆ ಅರ್ಜಿ ಹಾಕಲು ಬಯಸುವವರು ಯಾವುದೇ ರೀತಿಯ ನಾಲ್ಕು ಚಕ್ರದ ವಾಹನವನ್ನು ಹೊಂದಿರಬಾರದು

6) ಈ ಕಾರ್ಡಿಗೆ ಅರ್ಜಿ ಹಾಕಲು ಬಯಸುವಂಥ ವ್ಯಕ್ತಿಗಳು ಸ್ವಂತ ವಾಹನ ಮತ್ತು ಸ್ವಂತ ಪ್ಲಾಟ್ ಹಾಗೂ ಸ್ವಂತ ಮನೆಯನ್ನು ಹೊಂದಿರಬಾರದು.

New Ration Card apply
New Ration Card apply

ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅಗತ್ಯವಿರುವ ದಾಖಲಾತಿಗಳು ( Ration Card apply )

ಆಧಾರ್ ಕಾರ್ಡ್ :- ಭಾರತದಲ್ಲಿ ವಾಸ ಮಾಡುವಂತಹ ಪ್ರತಿಯೊಬ್ಬ ಪ್ರಜೆಯ ಆಧಾರ್ ಕಾರ್ಡ್ ಹೊಂದಿರುತ್ತಾರೆ.

ಈ ಆಧಾರ್ ಕಾರ್ಡನ್ನು ಭಾರತದ ನಿವಾಸಿ ಎಂದು ಗುರುತಿಸಲು ಹಾಗೂ ಪ್ರಮುಖ ಒಂದು ಗುರುತಿನ ಆಧಾರವಾಗಿ ಬಳಸಲಾಗುತ್ತದೆ.

ವಿಳಾಸದ ಪುರಾವೆ:- ನೀವು ವಾಸ ಮಾಡುವ ಸ್ಥಳದ ವಿಳಾಸ ಹೊಂದಿರುವ ಯಾವುದಾದರೂ ಒಂದು ದಾಖಲೆ ಬೇಕಾಗುತ್ತದೆ ಉದಾಹರಣೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ, ಇವುಗಳಲ್ಲಿ ಯಾವುದಾದರೂ ಒಂದು ಇದ್ದರೆ ನಡೆಯುತ್ತದೆ.

ಜಾತಿ ಮತ್ತು ಆದಾಯ ಪ್ರಮಾಣ ಪತ್ರ:- ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಭಾರತದಲ್ಲಿ ವಾಸ ಮಾಡುವಂತಹ ಪ್ರತಿಯೊಬ್ಬನು ತೆಗೆಸಬೇಕಾದಂತ ಒಂದು ದಾಖಲಾತಿಯಾಗಿದೆ ಹಾಗೂ ಆತನ ವಾರ್ಷಿಕ ಆದಾಯ ಎಷ್ಟೆಂದು ಇದರಲ್ಲಿ ದೃಢಪಟ್ಟಿರುತ್ತದೆ ಹಾಗಾಗಿ ಈ ದಾಖಲಾತಿಯನ್ನು ಕಡ್ಡಾಯವಾಗಿ ಕೇಳಲಾಗುತ್ತದೆ.

ಭಾರತದಲ್ಲಿ ವಾಸ ಮಾಡುವ ಜನರು ಅನೇಕ ಧರ್ಮ ಮತ್ತು ಜಾತಿಯನ್ನು ಹೊಂದಿರುತ್ತಾರೆ ಅವರು ತಮ್ಮ ಧರ್ಮದಲ್ಲಿ ಯಾವ ಜಾತಿ ಎಂದು ತಿಳಿಸಲು ಬಳಸುವಂತಹ ಒಂದು ಪ್ರಮಾಣ ಪತ್ರವನ್ನು ಜಾತಿ ಪ್ರಮಾಣ ಪತ್ರವೆಂದು ಕರೆಯುತ್ತಾರೆ.

ಇತ್ತೀಚಿನ ಭಾವಚಿತ್ರ:- ಭಾವಚಿತ್ರವೆಂದರೆ ತುಂಬಾ ಜನರಿಗೆ ಗೊಂದಲ ಉಂಟಾಗಬಹುದು ಭಾವಚಿತ್ರವೆಂದರೆ ನೀವು ಇತ್ತೀಚಿಗೆ ತೆಗೆಸಿದ ಒಂದು ಫೋಟೋವನ್ನು ಭಾವಚಿತ್ರ ಎಂದು ಕರೆಯುತ್ತಾರೆ.

ಮೊಬೈಲ್ ನಂಬರ್:- ನೀವು ನಿಮ್ಮ ಫೋನನ್ನು ಬಳಸುತ್ತಿದ್ದರೆ ಒಂದು ಮೊಬೈಲ್ ನಂಬರ್ ಹೊಂದಿರುತ್ತೀರಿ ಆ ನಂಬರ್ ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಇರುವಂತಹ ಮೊಬೈಲ್ ನಂಬರ್ ಹೊಸ ರೇಷನ್ ಕಾರ್ಡ್ ಇಳಿಯಲು ಕೊಡಬೇಕಾಗುತ್ತದೆ.

ಇದನ್ನು.! ಒಮ್ಮೆ. ಓದಿ.:- ಮಹಿಳೆಯರಿಗೆ ಕೇವಲ 500 ಗೆ ಗ್ಯಾಸ್ ಸಿಲೆಂಡರ್ ಪಡೆಯಲು ಕೂಡಲೇ ಈ ಕೆಲಸ ಮಾಡಿ

ಹೊಸ ರೇಷನ್ ಕಾರ್ಡಿಗೆ ( Ration Card apply ) ಅರ್ಜಿ ಸಲ್ಲಿಸುವ ದಿನಾಂಕ

ಇತ್ತೀಚೆಗೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು 2-3 ಸಲ ಕರ್ನಾಟಕ ಸರ್ಕಾರ ಕಡೆಯಿಂದ ಅವಕಾಶ ಕಲ್ಪಿಸಿ ಕೊಟ್ಟಿದ್ದರು ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಕಾರಣ ಸರ್ವರ್ ದೋಷದಿಂದ ಯಾವುದೇ ರೀತಿಯ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಆಗಿಲ್ಲ

2023ರಲ್ಲಿ ಎರಡರಿಂದ ಮೂರು ಸಲ ಅವಕಾಶ ಕೊಟ್ಟಿತ್ತು ಆದರೆ ತಾಂತ್ರಿಕ ದೋಷದಿಂದ ಯಾವುದೇ ರೀತಿಯ ಅರ್ಜಿ ಸಲ್ಲಿಸಲು ಅವಕಾಶವಾಗಿಲ್ಲ.

2024ರಲ್ಲಿ ಜನವರಿ ತಿಂಗಳಲ್ಲಿ ಎರಡು ದಿನಗಳ ಕಾಲಾವಕಾಶ ನೀಡಲಾಗಿತ್ತು ಅಲ್ಲಿಯೂ ಕೂಡ ತಾಂತ್ರಿಕ ದೋಷದಿಂದ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ.

2024ರಲ್ಲಿ ಸರಕಾರ ಕಡೆಯಿಂದ ಅಫೀಷಿಯಲ್ ದಿನಾಂಕವನ್ನು ಘೋಷಣೆ ಮಾಡಲಾಗಿದೆ ಇದನ್ನು ಸಿಎಂ ಸಿದ್ದರಾಮಯ್ಯ ಅವರು ಮತ್ತು ಆಹಾರ ಮತ್ತು ನಾಗರಿಕ ಸಚಿವರಾದಂತ ಕೆ ಎಚ್ ಮುನಿಯಪ್ಪನವರು ಕೂಡ ತಿಳಿಸಿದ್ದಾರೆ ದಿನಾಂಕ ಯಾವಾಗ ಎಂದು ನೋಡುವುದಾದರೆ.

ಏಪ್ರಿಲ್ ಒಂದರ ನಂತರ ಹೊಸ ರೇಷನ್ ಕಾರ್ಡಿಗೆ ( Ration Card apply ) ಅರ್ಜಿ ಹಾಕಲು ಅವಕಾಶ ನೀಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸಚಿವರಾದಂತ ಕೆ ಎಚ್ ಮುನಿಯಪ್ಪನವರು ತಿಳಿಸಿದ್ದಾರೆ.

ಮಾರ್ಚ್ 31ರ ಒಳಗಡೆಯಾಗಿ ಇಲ್ಲಿವರೆಗೂ ಸಲ್ಲಿಕೆ ಆಗಿರುವಂತಹ ಹೊಸ ರೇಷನ್ ಕಾರ್ಡ್ ಅರ್ಜಿಗಳು ಅಂದರೆ 2023ರ ಒಳಗಡೆ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಿದಂತ ಫಲಾನುಭವಿಗಳಿಗೆ ಇದೇ ತಿಂಗಳು ಮಾರ್ಚ್ 31 2024 ರ ಒಳಗಡೆಯಾಗಿ ವಿತರಣೆ ಮಾಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸಚಿವರಾದ ಕೆಎಚ್ ಮುನಿಯಪ್ಪನವರು ತಿಳಿಸಿದ್ದಾರೆ.

ರೇಷನ್ ಕಾರ್ಡ್ ಅರ್ಜಿ ಎಲ್ಲಿ ಸಲ್ಲಿಸಬೇಕು ( Ration Card apply )

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಕೆಲವೊಂದು ಸರಕಾರದಿಂದ ಅನುಮೋದನೆ ಪಡೆದಂತ ಸಂಸ್ಥೆಗಳ ಮೂಲಕ ಅರ್ಜಿ ಸ್ವೀಕಾರ ಮತ್ತು ತಿದ್ದುಪಡಿಗೆ ಅವಕಾಶ ಕಲ್ಪಿಸಿ ಕೊಡಲಾಗಿದೆ ಆ ಸಂಸ್ಥೆಗಳು ಈ ಕೆಳಕಂಡಂತಿವೆ

ಗ್ರಾಮ ಒನ್:- ಕರ್ನಾಟಕ ಸರ್ಕಾರದಿಂದ ಆದ್ಯತೆ ಪಡೆದ ಒಂದು ಆನ್ಲೈನ್ ಪೋರ್ಟಲ್ ಆಗಿದೆ ಈ ಪೋರ್ಟಲ್ ಮೂಲಕ ಜನರು ತಮ್ಮ ಹೊಸ ರೇಷನ್ ಕಾರ್ಡ್ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಹಾಗೂ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಬಹುದು.

ಈ ಸಂಸ್ಥೆಯು ಕರ್ನಾಟಕ ರಾಜ್ಯದಲ್ಲಿರುವ ಪ್ರತಿಯೊಂದು ಗ್ರಾಮದಲ್ಲಿ ಕರ್ನಾಟಕ ಸರಕಾರದ ವಿವಿಧ ರೀತಿಯ ಸೇವೆಗಳನ್ನು ಈ ಸಂಸ್ಥೆ ಮೂಲಕ ಕರ್ನಾಟಕ ಸರ್ಕಾರ ಸೇವೆಗಳನ್ನು ಜನರು ಪಡೆಯಬಹುದಾಗಿದೆ.

ಬೆಂಗಳೂರು ಒನ್ :- ಇದು ಕೂಡ ಕರ್ನಾಟಕ ಸರ್ಕಾರದಿಂದ ಆದ್ಯತೆ ಪಡೆದ ಒಂದು ಆನ್ಲೈನ್ ಪೋರ್ಟಲ್ ಆಗಿದೆ ಇದು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಇರುವಂತ ಜನರಿಗೆ ಈ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ

ಕರ್ನಾಟಕ ಒನ್:- ಇದು ಕೂಡ ಕರ್ನಾಟಕ ಸರ್ಕಾರದಿಂದ ಆದ್ಯತೆ ಪಡೆದ ಒಂದು ಆನ್ಲೈನ್ ಪೋರ್ಟಲ್ ಆಗಿದೆ ಇದರ ಮೂಲಕವೂ ಕೂಡ ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿಗೆ ಅವಕಾಶ ಕೊಡಲಾಗಿದೆ

 

ಈ ಮೇಲ್ಕಾಣಿಸಿದ ಎಲ್ಲಾ ಆನ್ಲೈನ್ ಪೋರ್ಟಲ್ ಮೂಲಕ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಮತ್ತು ರೇಷನ್ ಕಾರ್ಡ್ ನಲ್ಲಿ ಸದಸ್ಯರ ಶೇರ್ ಪಡೆ ಮತ್ತು ವಾಸ ಮಾಡುವ ಸ್ಥಳದ ಬದಲಾವಣೆ ಮಾಡಬಹುದಾಗಿದೆ.

ರೇಷನ್ ಕಾರ್ಡ್ ( Ration Card apply ) ತಿದ್ದುಪಡೆಯಲ್ಲಿ ಏನು ಮಾಡಬಹುದು

1) ನಿಮ್ಮತ್ರ ಈಗಾಗಲೇ ರೇಷನ್ ಕಾರ್ಡ್ ಇದ್ದರೆ ಇದರಲ್ಲಿ ನಿಮ್ಮ ಮನೆಯ ಸದಸ್ಯರನ್ನು ಸೇರ್ಪಡೆ ಮಾಡಬಹುದು

2) ನಿಮ್ಮ ಮನೆಯ ಸದಸ್ಯರಾದ ಮಕ್ಕಳನ್ನು ಹಾಗೂ ನಿಮ್ಮ ಕುಟುಂಬದ ಇತರ ಸದಸ್ಯರನ್ನು ಸೇರಿಸಬಹುದಾಗಿದೆ

3) ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ವಾಸ ಮಾಡುವ ಸ್ಥಳವನ್ನು ಬದಲಾವಣೆ ಮಾಡಲು ಅವಕಾಶವಿದೆ

4) ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಾರಾದರೂ ಸದಸ್ಯರ ಹೆಸರು ತಪ್ಪಾಗಿದ್ದಲ್ಲಿ ಹೆಸರನ್ನು ಸರಿಯಾಗಿ ಸೇರಿಸಲು ಅವಕಾಶವಿದೆ

5) ರೇಷನ್ ಕಾರ್ಡ್ ನಲ್ಲಿರುವ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಮಾಡುವ ಅವಕಾಶವಿದೆ

6) ರೇಷನ್ ಕಾರ್ಡ್ ನಲ್ಲಿರುವ ಸದಸ್ಯರಿಗೆ ಈಕೆ ವೈ ಸಿ ಮಾಡಲು ಅವಕಾಶವಿದೆ

ಈ ಲೇಖನ ಮೂಲಕ ಒಂದು ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಯಾವ ದಾಖಲಾತಿಗಳು ಬೇಕು ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು ಹಾಗೂ ಯಾವ ದಿನಾಂಕದಲ್ಲಿ ಬಿಡುತ್ತಾರೆ ಎಂದು ತಿಳಿಸಲಾಗಿದೆ

ನನ್ನ ಪ್ರೀತಿಯ ಓದುಗರೆ ಇದರ ಮೂಲಕ ತಿಳಿಸುವುದೇನೆಂದರೆ ಈ ವೆಬ್ಸೈಟ್ನಲ್ಲಿ ಪ್ರಚಾರವಾಗುವಂತಹ ಎಲ್ಲಾ ಮಾಹಿತಿಗಳು ನಿಖರ ಮತ್ತು ಖಚಿತವಾಗಿರುತ್ತದೆ ಎಂದು ತಿಳಿಸಿಕೊಡುತ್ತಿದ್ದೇನೆ ಹಾಗೂ ಈ ವೆಬ್ಸೈಟ್ನಲ್ಲಿ ಪ್ರಚಾರವಾಗುವಂತ ಯಾವುದೇ ಸುಳ್ಳು ಮಾಹಿತಿಯನ್ನು ಪ್ರಚಾರ ಮಾಡುವುದಿಲ್ಲ

ಇದೇ ರೀತಿ ಸರ್ಕಾರ ಕಡೆಯಿಂದ ಬರುವ ವಿವಿಧ ರೀತಿಯ ಯೋಜನೆಗಳು ಹಾಗೂ ಸರಕಾರಿ ಉದ್ಯೋಗದ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಯಬೇಕಾದರೆ ನಮ್ಮ ವೆಬ್ಸೈಟ್ ಫಾಲೋ ಮಾಡಿ

ಇಲ್ಲಿವರೆಗೂ ತಾಳ್ಮೆಯಿಂದ ನಮ್ಮ ಲೇಖನೆಯನ್ನು ಓದಿದ್ದಕ್ಕೆ ಧನ್ಯವಾದಗಳು ಮತ್ತೆ ಬೇರೆ ಮಾಹಿತಿಯೊಂದಿಗೆ ಸಿಗುತ್ತೇನೆ.