ಮನೆ ಇಲ್ಲದವರಿಗೆ ಉಚಿತ ಮನೆ ನಿರ್ಮಾಣಕ್ಕೆ ಅರ್ಜಿ ಈ ರೀತಿ ಸಲ್ಲಿಸಿ | Pradhan mantri awas Yojana

Pradhan mantri awas Yojana :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಲೇಖನ ಮೂಲಕ ತಿಳಿಸುವುದೇನೆಂದರೆ, ಮನೆ ಇಲ್ಲದವರಿಗೆ ಉಚಿತ ಮನೆ ನಿರ್ಮಾಣಕ್ಕೆ ಅರ್ಜಿ ಹಾಕಲು ಅವಕಾಶ ಮಾಡಲಾಗಿದೆ ಯಾವ ರೀತಿ ಅರ್ಜಿ ಹಾಕಬೇಕು ಹಾಗೂ ಅರ್ಜಿ ಹಾಕಲು ಬೇಕಾಗುವಂತ ದಾಖಲಾತಿಗಳು ಎಂಬುದು ಈ ಲೇಖನಿಯಲ್ಲಿ ತಿಳಿಸಿ ಕೊಡುತ್ತೇನೆ ಹಾಗಾಗಿ ಈ ಲೇಖನೆಯನ್ನು ಪೂರ್ತಿಯಾಗಿ ಓದಿ.

ನಮ್ಮ ಭಾರತ ದೇಶದಲ್ಲಿ ಬಡವರ ಅನಕೂಲಕ್ಕಾಗಿ ಸರಕಾರ ಆಗಾಗ ಕೆಲವೊಂದು ಯೋಜನೆಗಳನ್ನು ಜಾರಿಗೆ ತರುತ್ತದೆ ಅಂತ ಯೋಚನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಆವಾಸ್ ಯೋಜನೆ ( pradhan mantri awas yojana ) ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಈ ಯೋಜನೆ ಮೂಲಕ ಮನೆ ಇಲ್ಲದವರಿಗೆ ಉಚಿತವಾಗಿ ಮನೆ ನಿರ್ಮಾಣ ಮಾಡಿಕೊಡುವುದು ಉದ್ದೇಶವಾಗಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ ( pradhan mantri awas yojana ) ಮೂಲಕ ಸಮಾಜದಲ್ಲಿರುವ ಆರ್ಥಿಕವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗದವರಿಗೆ ಕಡಿಮೆ ದರದಲ್ಲಿ ವಸತಿ ನಿರ್ಮಾಣ ಮಾಡುವ ಗುರಿಯನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಕೇಂದ್ರ ಸರಕಾರ ಹೊಂದಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವ ಬಡ ಕುಟುಂಬಗಳಿಗೆ ಹಾಗೂ ಯಾರಿಗೆ ವಾಸ ಮಾಡಲು ಮನೆ ಇರುವುದಿಲ್ಲ ಅಂತವರಿಗೆ ಮತ್ತು ನಗರ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುವಂತ ಕುಟುಂಬಗಳಿಗೆ ಕಡಿಮೆ ದರದಲ್ಲಿ ಮನೆ ಕಟ್ಟಿಕೊಡುವುದು ಅಥವಾ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್ ಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ ಸಾಲ ನೀಡುವುದು ಮತ್ತು ನೀಡಿದ ಸಾಲದಲ್ಲಿ ಇಂತಿಷ್ಟು ಅಂತ ಸಬ್ಸಿಡಿ ನೀಡಲಾಗುತ್ತದೆ.

WhatsApp Group Join Now
Telegram Group Join Now       

 

ಏನಿದು ಪ್ರಧಾನ ಮಂತ್ರಿ ಆವಾಸ್ ಯೋಜನೆ ( Pradhan mantri awas Yojana )

ಮೊದಲು ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ( pradhan mantri awas yojana ) ಜಾರಿಗೆ ತರಲು ಬಡ ಕುಟುಂಬಗಳಿಗೆ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಪಕ್ಕ ಮನೆ ಮಾಡಿ ಕೊಡುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಯಿತು

ಈ ಹಿಂದೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ರಾಜೀವ್ ಗಾಂಧಿ ಆವಾಸ್ ಯೋಜನೆ ಎಂದು ಕರೆಯಲಾಗುತ್ತದೆ. ರಾಜೀವ್ ಗಾಂಧಿ ಆವಾಸ್ ಯೋಜನೆಯನ್ನು 1985 ರಲ್ಲಿ ಪ್ರಾರಂಭ ಮಾಡಲಾಗಿದೆ. ಅಂದಿನ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವು ರಾಜೀವ್ ಗಾಂಧಿ ಆವಾಸ್ ಯೋಜನೆಯನ್ನು ಬಡ ಕುಟುಂಬಗಳಿಗೆ ಕಡಿಮೆ ದರದಲ್ಲಿ ಮನೆ ನಿರ್ಮಾಣ ಗುರಿಯನ್ನು ಈ ಯೋಜನೆ ಮೂಲ ಉದ್ದೇಶವಾಗಿತ್ತು.

ರಾಜೀವ್ ಗಾಂಧಿ ಆವಾಸ್ ಯೋಜನೆಯನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಯೋಜನೆಯನ್ನು ಪ್ರಧಾನಮಂತ್ರಿ ಆವಾಸ್ ಯೋಜನೆ ಎಂದು ಮರುನಾಮಕರಣ ಮಾಡಲಾಯಿತು.

WhatsApp Group Join Now
Telegram Group Join Now       

ಪ್ರಧಾನ ಮಂತ್ರಿ ಆವಾಸ್ ಯೋಜನೆ 2015 ಜೂನ್ 25ರಂದು ಈ ಯೋಜನೆಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ( pradhan mantri awas yojana ) ಎಂದು ಮರುನಾಮಕರಣ ಮಾಡಲಾಯಿತು. ಈ ಯೋಜನೆ ಮೂಲಕ ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಾಣ ಹಾಗೂ ಮನೆ ಕಟ್ಟಲು ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್ ಗಳ ಮೂಲಕ ಮನೆ ನಿರ್ಮಾಣಕ್ಕೆ ಲೋನ್ ನೀಡುವ ಉದ್ದೇಶವಾಗಿದೆ.

(ಇದನ್ನು-ಒಮ್ಮೆ-ಓದಿ):- ಮಹಿಳೆಯರಿಗೆ ಕೇವಲ 500 ಗೆ ಗ್ಯಾಸ್ ಸಿಲೆಂಡರ್ ಪಡೆಯಲು ಕೂಡಲೇ ಈ ಕೆಲಸ ಮಾಡಿ

ಪ್ರಧಾನ ಮಂತ್ರಿ ಆವಾಸ್ ಯೋಜನೆ ( pradhan mantri awas yojana ) ಉದ್ದೇಶ ಏನು..?

  • ಪ್ರಧಾನ ಮಂತ್ರಿ ಆವಾಸ್ ಯೋಜನೆ 2015 ಜೂನ್ 25ರಂದು ಈ ಯೋಜನೆಯನ್ನು ಪ್ರಾರಂಭ ಮಾಡಲಾಯಿತು. ಈ ಯೋಜನೆ ಮೂಲಕ ಪ್ರಾರಂಭದಲ್ಲಿ 20 ಮಿಲಿಗನ್ ಮನೆಗಳ ನಿರ್ಮಾಣದ ಗುರಿಯನ್ನು ಈ ಯೋಜನೆಯ ಮೂಲಕ ಮಾಡುವ ಗುರಿ ಹೊಂದಿತ್ತು.
  • ಈಗ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ( pradhan mantri awas yojana ) 2024 ರಿಂದ 2025 ರ ತನಕ ಈ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಸುಮಾರು ಮೂರು ಕೋಟಿ ಮನೆಗಳ ನಿರ್ಮಾಣ ಮಾಡುವ ಉದ್ದೇಶ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಕೈಗೊಳ್ಳುವ ಉದ್ದೇಶವಿದೆಯೆಂದು ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ತಿಳಿಸಿದ್ದಾರೆ.
  • ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಹಾಗೂ ನಗರಮಟ್ಟದಲ್ಲಿ ಹಿಂದುಳಿದ ಹಾಗೂ ಬಡ ಕುಟುಂಬಗಳಿಗೆ ಸ್ವಂತ ಮನೆ ಇಲ್ಲದವರಿಗೆ ಮನೆ ನಿರ್ಮಾಣ ಮಾಡಲು ತುಂಬಾ ಉಪಯುಕ್ತವಾದ ಹಾಗೂ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದೆ.
  • ಪ್ರಧಾನ ಮಂತ್ರಿ ಆವಾಸ್ ಯೋಜನೆ ( pradhan mantri awas yojana ) ಮೂಲಕ ನಗರ ಪ್ರದೇಶದಲ್ಲಿ ವಾಸಿಸುವಂತಹ ಬಡ ಕುಟುಂಬಗಳಾದ ಹಾಗೂ ಕಡಿಮೆ ಆದಾಯ ಹೊಂದಿದ ಕುಟುಂಬದ ತುಂಬಾ ಜನರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಅಂತವರಿಗೆ ಒಂದು ಸ್ವಂತ ಮನೆ ಕಟ್ಟಬೇಕೆಂಬ ಆಸೆ ಇರುತ್ತದೆ ಹಾಗೂ ಆ ಆಸೆಯನ್ನು ವಿವರಿಸಿಕೊಳ್ಳಲು ಅವರ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರುವುದಿಲ್ಲ ಅಂತವರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ.
  • ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವಂಥ ಅನೇಕ ಬಡ ಕುಟುಂಬಗಳು ಹಾಗೂ ಹಿಂದುಳಿದ ವರ್ಗದ ಕುಟುಂಬಗಳಿಗೆ ಮತ್ತು ಅಲ್ಪಸಂಖ್ಯಾತ ಕುಟುಂಬಗಳಿಗೆ ಈ ಯೋಜನೆ ಮೂಲಕ ಒಂದು ಸ್ವಂತ ಮನೆ ನಿರ್ಮಾಣ ಮಾಡುವುದು ಹಾಗೂ ಅವರ ಆರ್ಥಿಕ ಪತಿ ಪರಸ್ಥಿತಿ ಸುಧಾರಿಸುವ ಸಲುವಾಗಿ ಈ ಯೋಜನೆಯನ್ನು ಗ್ರಾಮೀಣಮಟ್ಟದಲ್ಲಿಯೂ ಕೂಡ ವಿಸ್ತರಣೆ ಮಾಡಲಾಯಿತು.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಇಲ್ಲಿವರೆಗೂ ಪೂರ್ಣಗೊಂಡ ಮನೆಗಳ ರಾಜ್ಯವಾರು ಪಟ್ಟಿ ಈ ರೀತಿ ಆಗಿದೆ

ಕರ್ನಾಟಕ :- ನಮ್ಮ ಕರ್ನಾಟಕ ರಾಜ್ಯದಲ್ಲಿ ಇಲ್ಲಿಯವರೆಗೂ ಪ್ರಧಾನಮಂತ್ರಿ ಆವಾಸ್ ಯೋಜನೆ ಮೂಲಕ ಸುಮಾರು 6,51, 203 ಮನೆಗಳನ್ನು ಮಂಜೂರು ಮಾಡಲಾಗಿದೆ ಇದರಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಕೇವಲ 25% ಮನೆಗಳು ಮಾತ್ರ ಪೂರ್ಣಗೊಂಡಿವೆ.

ಅಂದರೆ ನಮ್ಮ ಕರ್ನಾಟಕ ರಾಜ್ಯದಲ್ಲಿ 100 ಮನೆಗಳು ಮಂಜುರಾದರೆ ಅದರಲ್ಲಿ ಕೇವಲ 25 ಮನೆಗಳನ್ನು ಮಾತ್ರ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಪೂರ್ಣಗೊಳಿಸಲು ಸಾಧ್ಯವಾಗಿದೆ ಇನ್ನು 75% ಮನೆಗಳ ಅರ್ಜಿ ಹಾಕದೆ ಹಾಗೆ ಉಳಿದಿವೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ನಮ್ಮ ಉದ್ದೇಶ.

ಈ ಲೇಖನ ಮೂಲಕ ನೀವು ಯಾವ ರೀತಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಉಚಿತವಾದ ಮನೆ ನಿರ್ಮಾಣ ಮಾಡಿಕೊಳ್ಳುವುದು ಎಂಬುದು ತಿಳಿಸಿಕೊಡುತ್ತಿದ್ದೇವೆ ಹಾಗಾಗಿ ಪ್ರತಿಯೊಬ್ಬರೂ ಈ ಯೋಜನೆಯ ಲಾಭ ಪಡೆಯಬೇಕೆಂದು ನಿಮಗೆ ತಿಳಿಸುತ್ತಿದ್ದೇವೆ.

ಆಂಧ್ರಪ್ರದೇಶ:- ಆಂಧ್ರಪ್ರದೇಶದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಇಲ್ಲಿಯವರೆಗೂ ಸುಮಾರು 20,೦5,932 ಮನೆಗಳು ಮಂಜೂರಾಗಿದ್ದು ಇದರಲ್ಲಿ ಕೇವಲ 16% ಅಷ್ಟು ಮನೆಗಳು ಆಂಧ್ರಪ್ರದೇಶದಲ್ಲಿ ನಿರ್ಮಾಣವಾಗಿದೆ.

ಗುಜರಾತ್:- ಗುಜರಾತ್ ನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ 6,43,192 ಮನೆಗಳು ಮಂಜುರಾಗಿದ್ದು ಇದರಲ್ಲೇ 58 % ಅಷ್ಟು ಮನೆಗಳು ಪೂರ್ಣಗೊಂಡಿವೆ.

ಕೇರಳ :- ಕೇರಳದಲ್ಲಿ 1,29,297 ಮನೆಗಳನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಮಂಜೂರು ಮಾಡಲಾಗಿದೆ ಇದರಲ್ಲಿ 58% ಮನೆಗಳು ನಿರ್ಮಾಣ ಮಾಡಿಲಾಗಿದೆ

ಇರು ಈ ರೀತಿ ಅನೇಕ ರಾಜ್ಯಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಮನೆಗಳ ಮಂಜೂರು ಮಾಡಲಾಗಿದ್ದು ತುಂಬಾ ಜನರು ಮನೆಗಳಿಗೆ ಅರ್ಜಿ ಹಾಕದೆ ಹಾಗೂ ಇದರ ಬಗ್ಗೆ ಮಾಹಿತಿ ಇಲ್ಲದೆ ತುಂಬಾ ಮನೆಗಳು ಬಾಕಿ ಉಳಿದಿದೆ ಹಾಗಾಗಿ ಪ್ರತಿಯೊಬ್ಬರೂ ಅರ್ಜಿ ಹಾಕಿ ಯೋಜನೆಯ ಲಾಭವನ್ನು ಪಡೆಯಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.

Pradhan mantri awas Yojana
Pradhan mantri awas Yojana

ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ( Pradhan mantri awas Yojana ) ಎರಡು ರೀತಿಯ ಯೋಜನೆಗಳನ್ನು ಜಾರಿಗೆ ತರಲಾಗಿದೆ ಆ ಯೋಜನೆಗಳು ಯಾವೆಂದು ನೋಡೋಣ.

 

ಪ್ರಧಾನ ಮಂತ್ರಿ ಆವಾಸ್ ಯೋಜನೆ 2024 ನಗರ ಪಟ್ಟಿ

  • ಪ್ರಧಾನ ಮಂತ್ರಿ ಆವಾಸ್ ಯೋಜನೆ 2024 ನಗರ ಮಟ್ಟದಲ್ಲಿ ವಾಸ ಮಾಡುವಂಥ ಜನರಿಗೆ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಅಂದರೆ ನಗರ ಪ್ರದೇಶದಲ್ಲಿ ವಾಸ ಮಾಡುವಂಥ ಜನರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ.
  • ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ನಗರ ಮಟ್ಟದಲ್ಲಿ ವಾಸಿಸುವಂತಹ ಜನರಿಗೆ 2 ಲಕ್ಷದಿಂದ 2,36,000 ತನಕ ಮನೆ ಕಟ್ಟಿಸಿಕೊಳ್ಳಲು ಸಬ್ಸಿಡಿ ನೀಡಲಾಗುತ್ತದೆ. ಹಾಗೂ ಗರಿಷ್ಠ ಮಟ್ಟದ ಲೋನ್ ಬ್ಯಾಂಕ್ ಗಳ ಮೂಲಕ ಈ ಯೋಜನೆಯಲ್ಲಿ ಸುಮಾರು 10 ಲಕ್ಷದಿಂದ 20 ಲಕ್ಷದ ತನಕ ಕಡಿಮೆ ಬಡ್ಡಿ ದರದಲ್ಲಿ ನೀಡಲಾಗುತ್ತದೆ.
  • ನಗರ ಪ್ರದೇಶದಲ್ಲಿ ವಾಸಿಸುವಂತಹ ಬಡ ಕುಟುಂಬಗಳಾದ ಕಟ್ಟಡ ಕಾರ್ಮಿಕರು, ಅಂಗವಿಕಲರು, ಬೀದಿ ಬದಿ ವ್ಯಾಪಾರಿಗಳು, ತರಕಾರಿ ಮಾರುವವರು, ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವವರು, ಹಾಗೂ ಹಿಂದುಳಿದ ವರ್ಗದವರು ಈ ಯೋಜನೆ ಲಾಭ ಪಡೆಯಬಹುದಾಗಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ ( Pradhan mantri awas Yojana ) 2024 ಗ್ರಾಮೀಣ ಪಟ್ಟಿ 

ಪ್ರಧಾನ ಮಂತ್ರಿ ಆವಾಸ್ ಯೋಜನೆ ( Pradhan mantri awas Yojana ) ಗ್ರಾಮೀಣ ಭಾಗದ ಜನರಿಗೆ ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಾಣ ಮಾಡಲು ಈ ಯೋಜನೆಯನ್ನು ಗ್ರಾಮೀಣ ಭಾಗಗಳಿಗೆ ವಿಸ್ತರಣೆ ಮಾಡಲಾಯಿತು ಈ ಯೋಜನೆ ಮೂಲಕ ಗ್ರಾಮೀಣ ಜನರು ಉಚಿತ ಮನೆ ಕಟ್ಟಿಸಿಕೊಳ್ಳಲು ಅವಕಾಶವಿದೆ

ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಭಾಗದ ಜನರಿಗೆ ಈ ಯೋಜನೆಯ ಮೂಲಕ ಸುಮಾರು ಒಂದು ಲಕ್ಷದಿಂದ ಒಂದು ಲಕ್ಷ ಐವತ್ತು ಸಾವಿರದವರೆಗೆ ಮನೆ ನಿರ್ಮಾಣ ಮಾಡಲು ಕೇಂದ್ರ ಸರಕಾರದ ಕಡೆಯಿಂದ ಸಹಾಯಧನ ದೊರೆಯುತ್ತದೆ ಹಾಗೂ ಮನೆ ಕಟ್ಟಿಸಿಕೊಳ್ಳಲು ಈ ಯೋಜನೆ ಮೂಲಕ ಲೋನ್ ನೀಡಲಾಗುತ್ತದೆ ಅದು ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್ ಗಳ ಮೂಲಕ ಲೋನ್ ನೀಡಿ 1,50,000 ತನಕ ಪಡೆಯಬಹುದಾಗಿದೆ .

ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಭಾಗದಲ್ಲಿ ವಾಸಿಸುವ ರೈತರು ಕೃಷಿಕ ಮಹಿಳೆಯರು ಅಂಗವಿಕಲರು ಹಾಗೂ ಹಿಂದುಳಿದ ವರ್ಗದವರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಮತ್ತು ಅಲ್ಪಸಂಖ್ಯಾತರು ಈ ಯೋಜನೆ ಲಾಭ ಪಡೆಯಬಹುದಾಗಿದೆ

(ಇದನ್ನು-ಒಮ್ಮೆ-ಓದಿ):-ಹೊಸ ರೇಷನ್ ಕಾರ್ಡ್ ಗೆ ಅರ್ಜಿ & ತಿದ್ದುಪಡಿಗೆ ಅವಕಾಶ..! ಬೇಕಾಗುವ ದಾಖಲೆಗಳೇನು ? ration card apply 

ಪ್ರಧಾನ ಮಂತ್ರಿ ಆವಾಸ್ ಯೋಜನೆ ( Pradhan mantri awas Yojana ) ಅರ್ಹತೆಗಳೇನು

 

1)ಈ ಯೋಜನೆಯ ಲಾಭ ಪಡೆಯುವಂಥ ವ್ಯಕ್ತಿಗಳು 18 ವರ್ಷ ಮೇಲ್ಪಟ್ಟವರಾಗಿರಬೇಕಾಗುತ್ತದೆ

2) ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಹಾಕಲು ಬಯಸುವಂತಹ ವ್ಯಕ್ತಿ ಮೊದಲು ಭಾರತದ ಪ್ರಜೆಯಾಗಿರಬೇಕು ಮತ್ತು ಆ ರಾಜ್ಯದಿಂದ ಯಾವುದಾದರೂ ಒಂದು ಸದಸ್ಯತ್ವವನ್ನು ಪಡೆದಿರಬೇಕು

3) ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಹಾಕಲು ವಾಸ ಮಾಡುವಂಥ ರಾಜ್ಯದ ಒಂದು ಪಂಡಿತರ ಚೀಟಿ ಅಥವಾ ರೇಷನ್ ಕಾರ್ಡ್ ಪಡೆದಿರಬೇಕಾಗುತ್ತದೆ

4) ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಹಾಕಲು ಆತನ ವಾರ್ಷಿಕ ಆದಾಯ ಮೂರು ಲಕ್ಷದ ಒಳಗಡೆ ಇರಬೇಕಾಗುತ್ತದೆ

5) ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಹಾಕಲು ಬಯಸುವಂತಹ ಮಧ್ಯಮ ವರ್ಗದ ಕುಟುಂಬದ ಆದಾಯ ಆರು ಲಕ್ಷದ ಒಳಗಡೆ ಇರಬೇಕಾಗುತ್ತದೆ

6) ಬಿಪಿಎಲ್ ರೇಷನ್ ಕಾರ್ಡ್ ಪಡೆದಿರಬೇಕಾಗುತ್ತದೆ.

7) ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಮೊದಲ ಆದ್ಯತೆ ಅಂಗವಿಕಲರಿಗೆ ಮತ್ತು ವಿಧಿಯವರಿಗೆ ಹಾಗೂ ವಯಸ್ಕರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

 

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ( Pradhan mantri awas Yojana ) ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

 

1) ಆಧಾರ್ ಕಾರ್ಡ್:- ಇದು ಭಾರತದ ಪ್ರಜೆಗೆ ನೀಡುವಂತ ಒಂದು ಗುರುತಿನ ಆಧಾರವಾಗಿದೆ ಇದು ಕಡ್ಡಾಯವಾಗಿ ಬೇಕಾಗುತ್ತದೆ

2) ರೇಷನ್ ಕಾರ್ಡ್:- ಬಿಪಿಎಲ್ ಮತ್ತು ಹಂತೋದಯ ಹೊಂದಿದ ಕುಟುಂಬಗಳ ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ

3) ಜಾತಿ ಮತ್ತು ಆದಾಯ ಪ್ರಮಾಣ ಪತ್ರ:- ಭಾರತ ದೇಶದಲ್ಲಿ ವಾಸ ಮಾಡುವಂತಹ ಪ್ರಜೆಯು ತಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆದಿರುತ್ತಾರೆ. ಇದರ ಒಂದು ಜೆರಾಕ್ಸ್ ಅನ್ನು ಬೇಕಾಗುತ್ತದೆ

4) ಜಾಬ್ ಕಾರ್ಡ್:- ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನೀಡುವಂತ ಒಂದು ಆಧಾರವಾಗಿದ್ದು ಜಾಬ್ ಕಾರ್ಡ್ ಇದ್ದರೆ ಈ ದಾಖಲೆಯನ್ನು ನೀಡಬೇಕಾಗುತ್ತದೆ ಒಂದು ವೇಳೆ ಇಲ್ಲವಾದರೆ ನೀಡುವಂತಹ ಅವಶ್ಯಕತೆ ಇಲ್ಲ

5) ಮೊಬೈಲ್ ನಂಬರ್:- ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಇರುವ ಮೊಬೈಲ್ ನಂಬರ್ ಬೇಕಾಗುತ್ತದೆ

6) ಆದಾಯ ಪ್ರಮಾಣ ಪತ್ರ:-ಅರ್ಜಿ ಹಾಕಲು ಬಯಸುವಂತಹ ವ್ಯಕ್ತಿಯ ತಮ್ಮ ವಾರ್ಷಿಕ ಆದಾಯ ಎಷ್ಟು ಇದೆ ಎಂದು ತಿಳಿಸುವಂತ ಒಂದು ಪ್ರಮಾಣ ಪತ್ರವಾಗಿದೆ.

7) ಭಾವಚಿತ್ರ:- ಅರ್ಜಿ ಹಾಕಲು ಬಯಸುವಂತಹ ವ್ಯಕ್ತಿಯು ಇತ್ತೀಚಿಗೆ ತೆಗೆದ ಒಂದು ಫೋಟೋ ಬೇಕಾಗುತ್ತದೆ

8) ಬ್ಯಾಂಕ್ ಪಾಸ್ ಬುಕ್:- ಬ್ಯಾಂಕ್ ಖಾತೆಯು ತಮ್ಮ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರಬೇಕು ಮತ್ತು ಖಾತೆಯ ಕೆವೈಸಿ ಕಡ್ಡಾಯವಾಗಿ ಆಗಿರಬೇಕಾಗುತ್ತದೆ

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ( Pradhan mantri awas Yojana ) ಅರ್ಜಿ ಎಲ್ಲಿ ಸಲ್ಲಿಸಬೇಕು

ಗ್ರಾಮ ಒನ್:- ಕರ್ನಾಟಕದಲ್ಲಿ ವಾಸ ಮಾಡುವಂತಹ ಪ್ರಜೆಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವಂತಹ ಜನರು ತಮ್ಮ ಹತ್ತಿರದ ಗ್ರಾಮವನ್ ಸೆಂಟರ್ ಮೂಲಕ ಅರ್ಜಿ ಸಲ್ಲಿಸಬಹುದು

ಬೆಂಗಳೂರು ಒನ್:- ಬೆಂಗಳೂರು ಪ್ರದೇಶದಲ್ಲಿ ವಾಸ ಮಾಡುವಂಥ ವ್ಯಕ್ತಿಗಳು ಬೆಂಗಳೂರು ಒನ್ ಮೂಲಕ ಅರ್ಜಿ ಸಲ್ಲಿಸಬಹುದು

ಕರ್ನಾಟಕ ಒನ್:– ಕರ್ನಾಟಕದಲ್ಲಿ ವಾಸ ಮಾಡುವ ಅಂತ ತಮ್ಮ ಹತ್ತಿರದ ಆನ್ಲೈನ್ ಸೆಂಟರ್ ಆದ ಕರ್ನಾಟಕ ಒನ್ ಅರ್ಜಿ ಸಲ್ಲಿಸಬಹುದು

CSC ಕೇಂದ್ರ :- ಕೇಂದ್ರ ಸರ್ಕಾರದಿಂದ ಆದ್ಯತೆ ನೀಡಲಾದ ಸಿ ಎಸ್ ಸಿ ಕೇಂದ್ರಗಳ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು

ಈ ಮೇಲ್ಕಾಣಿಸಿದ ಆನ್ಲೈನ್ ಸೆಂಟರ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಈ ಕೆಳಗಡೆ ನೀಡಲಾದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಪೋರ್ಟಲ್ ಮೂಲಕ ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ನೀವು ಮನೆಯ ಪಡೆಯಬೇಕಾದರೆ ಈ ಮೇಲ್ಕಾಣಿಸಿದ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ವಿಸಿಟ್ ಮಾಡಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಅರ್ಜಿ ಸಲ್ಲಿಸಬೇಕೆಂದು ತಿಳಿಸಿ ಆನ್ಲೈನ್ ಸೆಂಟರ್ನ ಅವರು ಖಂಡಿತವಾಗಲೂ ನಿಮಗೆ ಅರ್ಜಿ ಸಲ್ಲಿಸಿ ಕೊಡುತ್ತಾರೆ

ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ನೀವು ಮನೆಯಲ್ಲಿ ಕುಳಿತು ಕೂಡ ಅರ್ಜಿ ಸಲ್ಲಿಸಬಹುದು ಅದು ಯಾವ ರೀತಿ ಎಂದು ಮುಂದಿನ ಆರ್ಟಿಕಲ್ ನಲ್ಲಿ ತಿಳಿಸಲಾಗುತ್ತದೆ ಹಾಗಾಗಿ ನಮ್ಮ ವೆಬ್ಸೈಟ್ ಅನ್ನು ಪ್ರತಿದಿನ ಫಾಲೋ ಮಾಡಿ ಮತ್ತು ಇನ್ನೆಷ್ಟು ಹೆಚ್ಚಿನ ಮಾಹಿತಿಗಾಗಿ ತಿಳಿದುಕೊಳ್ಳಿ

ನನ್ನ ಪ್ರೀತಿಯ ಓದುಗರೆ ಈ ಲೇಖನ ಮೂಲಕ ತಿಳಿಸುವುದೇನೆಂದರೆ ಈ ವೆಬ್ಸೈಟ್ನಲ್ಲಿ ಪ್ರಚಾರ ವಾಗುವಂತಹ ಎಲ್ಲಾ ಸುದ್ದಿಗಳು ಖಚಿತ ಮತ್ತು ನಿಖರವಾಗಿರುತ್ತೆ ಎಂದು ಸ್ಪಷ್ಟಪಡಿಸುತ್ತಿದ್ದೇನೆ ಮತ್ತು

ಈ ವೆಬ್ಸೈಟ್ನಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡಲಾಗುವುದಿಲ್ಲ ಎಂದು ನಿಮಗೆ ತಿಳಿಸುತ್ತೇನೆ.