ಮಹಿಳೆಯರಿಗೆ ಕೇವಲ ₹500 ಗೆ ಗ್ಯಾಸ್ ಸಿಲೆಂಡರ್! ನೀವು ಪಡೆಯಲು ಕೂಡಲೇ ಈ ಕೆಲಸ ಮಾಡಿ.

ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಲೇಖನ ಮೂಲಕ ತಿಳಿಸುವುದೇನೆಂದರೆ ಮಹಿಳೆಯರಿಗೆ ಕೇವಲ 500 ಗೆ ಗ್ಯಾಸ್ ಸಿಲಿಂಡರ್ (lpg subsidy in karnataka) ಈ ಕೆಲಸ ಮಾಡಿದರೆ ಸಿಗುತ್ತೆ. ಏನೆಂದು ತಿಳಿಯಬೇಕಾದರೆ ಈ ಲೇಖನೆಯನ್ನು ಪೂರ್ತಿಯಾಗಿ ಓದಿ

ಹಲವಾರು ಕುಟುಂಬಗಳು ಈಗಂತೂ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಇಲ್ಲದೆ ಅಡಿಗೆ ಮಾಡಲು ಸಾಧ್ಯವಿಲ್ಲ ಎಂಬುವಂತೆ ಮಹಿಳೆಯರು ತಯಾರಾಗಿದ್ದಾರೆ ಇವಾಗ ಪ್ರತಿ ಹಳ್ಳಿಗಳಲ್ಲಿಯೂ ಕೂಡ LPG ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ನೋಡಲು ಸಿಗುತ್ತೆ ಆದ್ದರಿಂದ ತುಂಬಾ ಜನರು ಎಲ್ಪಿಜಿ ಗ್ಯಾಸ್ ಅನ್ನು ಅಡುಗೆ ಮಾಡಲು ಉಪಯೋಗಿಸುತ್ತಿದ್ದಾರೆ ಅಂತವರಿಗೆ ಕೇಂದ್ರ ಸರಕಾರದಿಂದ ಗುಡ್ ನ್ಯೂಸ್ ಎಂದು ಹೇಳಬಹುದು.

ಎಲ್ಪಿಜಿ ಗ್ಯಾಸ್ ಸಿಲಿಂಡರ್ ( Lpg Subsidy ) ಬಳಸುವಂತಹ ತುಂಬಾ ಜನರು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಏಕೆಂದರೆ ಇವಾಗ ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಕೆ ತುಂಬಾ ದುಬಾರಿಯಾಗಿದೆ ಏನಿಲ್ಲ ಅಂದರೂ ಅಡುಗೆ ಮಾಡಲು ಬಳಸುವ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ನ ಬೆಲೆ 1000 ದಿಂದ ರೂ.1200 ತನಕ ಇದೆ ಆದ್ದರಿಂದ ಬಡ ಕುಟುಂಬಗಳು ಲ್‍ಪಿಜಿ ಗ್ಯಾಸ್ ಸಿಲಿಂಡರ್ ಬಳಸಿ ಅಡುಗೆ ಮಾಡಲು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ನಮ್ಮ ಭಾರತ ದೇಶವು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಂದ ಕೂಡಿದ ದೇಶವಾಗಿದೆ ತುಂಬಾ ಜನರು ಹಳ್ಳಿಗಳಲ್ಲಿ ವಾಸ ಮಾಡುತ್ತಿರುವ ಕುಟುಂಬಗಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಾಗಿರುತ್ತವೆ ಹಾಗೂ ನಗರ ಪ್ರದೇಶದಲ್ಲಿ ವಾಸ ಮಾಡುವ ಕುಟುಂಬಗಳು ಮಧ್ಯಮ ವರ್ಗದ ಕುಟುಂಬದ ಜನರು ನಗರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ. ಅಂತವರಿಗೆ ತಿಂಗಳಿಗೆ 1,200 ರೂಗಳನ್ನು ಕೊಟ್ಟು ಒಂದು ಎಲ್ಪಿಜಿ ಗ್ಯಾಸ್ ಸಿಲೆಂಡರ್ ಪಡೆಯಲು ( Lpg Subsidy ) ತುಂಬಾ ಕಷ್ಟವಾಗುತ್ತೆ ಏಕೆಂದರೆ ಅವರು ಆದಾಯ ತಿಂಗಳಿಗೆ 8೦೦೦ ರಿಂದ 10 ಸಾವಿರದವರೆಗೆ ಇರುತ್ತೆ ಅದರಲ್ಲಿ ಪ್ರತಿ ತಿಂಗಳು 1,200 ಹಣವನ್ನು ಖರ್ಚು ಮಾಡಬೇಕೆಂದರೆ ತುಂಬಾ ಕಷ್ಟವಾಗುತ್ತೆ.

WhatsApp Group Join Now
Telegram Group Join Now       

ಇತ್ತೀಚಿನ ದಿನಗಳಲ್ಲಿ ಅಡಿಗೆ ಮಾಡಲು ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ತುಂಬಾ ಮುಖ್ಯವಾಗಿದೆ ಏಕೆಂದರೆ ಇವಾಗ ಕಟ್ಟಿಗೆಯ ಮೂಲಕ ಅಡಿಗೆ ಮಾಡಲು ಹಳ್ಳಿಯ ಜನರು ಅಷ್ಟಾಗಿ ಇಷ್ಟಪಡುತ್ತಿಲ್ಲ ಮತ್ತು ಕಟ್ಟಿಗೆಯಿಂದ ಅಡುಗೆ ಮಾಡುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತೆ ಮತ್ತು ಮರ ಗಿಡಗಳು ಹಾಗೂ ಅರಣ್ಯ ಪ್ರದೇಶ ನಾಶವಾಗುತ್ತೆ. ನಗರ ಪ್ರದೇಶದಲ್ಲಿ ವಾಸ ಮಾಡುವ ಜನರಿಗೆ ಕಟ್ಟಿಗೆ ಅಥವಾ ಸೌದೆ ದೊರೆಯುವುದು ತುಂಬಾ ಕಷ್ಟವಾಗುತ್ತೆ ಆದ್ದರಿಂದ ಅವರು ಅಡುಗೆ ಮಾಡಲು ಲ್‍ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ಬಳಕೆ ಮಾಡುತ್ತಾರೆ.

ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಕೇವಲ 500 ರೂಗಳಿಗೆ ಪಡೆಯಬೇಕೆಂದರೆ ನೀವು ಪ್ರಧಾನಮಂತ್ರಿ ಉಜ್ವಲ ಯೋಜನೆ ನೋಂದಣಿ ಮಾಡಿಕೊಂಡಿರಬೇಕಾಗುತ್ತದೆ. ಯಾವ ರೀತಿ ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ಕೇವಲ 500 ರೂಪಾಯಿಗೆ ಪಡೆಯುವುದು ಎಂದು ಮುಂದೆ ತಿಳಿಸಿಕೊಡುತ್ತಾ ಹೋಗುತ್ತೇನೆ ಹಾಗಾಗಿ ಈ ಲೇಖನೆಯನ್ನು ಪೂರ್ತಿಯಾಗಿ ಓದಿ ಅಂದರೆ ಮಾತ್ರ ನಿಮಗೆ ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ 500 ಸಿಗುತ್ತೆ.

ಏನಿದು ಪ್ರಧಾನ ಮಂತ್ರಿ ಉಜ್ವಲ ಯೋಜನೆ (Lpg Subsidy)

  • ಪ್ರಧಾನ ಮಂತ್ರಿ ಉಜ್ವಲ ಯೋಜನೆ ಎಂಬುದು ಭಾರತದ ಪ್ರಧಾನಿಯಾದ ನರೇಂದ್ರ ಮೋದಿಯವರು ಮೇ 1 2016ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತರಲಾಗುತ್ತೆ.
  • ಈ ಯೋಜನೆ ಮೂಲಕ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ ಕುಟುಂಬಗಳಿಗೆ ಉಚಿತವಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ನೀಡುವ ಯೋಜನೆಯಾಗಿದೆ ಇದರಿಂದ ಬಡ ಕುಟುಂಬಗಳಿಗೆ ಉಚಿತವಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ನೀಡುವ ಒಂದು ಯೋಜನೆಯಾಗಿದೆ
  • ಈ ಯೋಜನೆಯ ಮೂಲಕ ಪರಿಸರ ಮಾಲಿನ್ಯ ತಡೆಯುವುದು ಮತ್ತು ಅರಣ್ಯ ನಾಶ ತಡೆಯುವುದು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಉದ್ದೇಶವಾಗಿದೆ
  • ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಮೂಲಕ ಹಳ್ಳಿಯಲ್ಲಿ ವಾಸ ಮಾಡುವ ಜನರಿಗೆ ಮತ್ತು ಬಡ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಎಲ್ಪಿಜಿ ಗ್ಯಾಸ್ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ
  • ಈ ಯೋಜನೆ ಮೂಲಕ ಮಹಿಳೆಯರ ಆರೋಗ್ಯ ಮಟ್ಟವನ್ನು ಸುಧಾರಿಸುವುದು ಇದರ ಮೂಲ ಉದ್ದೇಶವಾಗಿದೆ ಅಂದರೆ ಮಹಿಳೆಯರು ಸೌದೆ ಒಲೆ ಅಥವಾ ಕಟ್ಟಿಗೆಯಿಂದ ಅಡುಗೆ ಮಾಡುವುದರಿಂದ ಅವರು ಸ್ವಾಶಕೋಶದ ಸಮಸ್ಯೆಗಳಿಂದ ಮತ್ತು ಅಸ್ತಮದಿಂದ ಬಳಲುತ್ತಿದ್ದರು ಈ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಬಳಸಿ ಅಡುಗೆ ಮಾಡುವುದರಿಂದ ಮಹಿಳೆಯರ ಆರೋಗ್ಯ ಮಟ್ಟವನ್ನು ಸುಧಾರಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಮೂಲಕ 50 ಮಿಲಿಯನ್ ಜನರು ಉಚಿತವಾದ ಎಲ್ಪಿಜಿ ಗ್ಯಾಸ್ ಸಿಲಿಂಡರ್ ( Lpg Subsidy ) ಮತ್ತು ಸ್ಟವ್ ಕಲೆಕ್ಷನ್ ಅನ್ನು ಪಡೆದಿದ್ದಾರೆ

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಪ್ರಾರಂಭವಾದ ಮೊದಲ ವರ್ಷ 15 ಮಿಲಿಯನ್ ಜನರಿಗೆ ಉಚಿತ ಎಲ್ಪಿಜಿ ಗ್ಯಾಸ್ ಸಿಲಿಂಡರ್ ( Lpg Subsidy ) ವಿತರಣೆ ಮಾಡುವ ಉದ್ದೇಶವೊಂದಿತ್ತು ಆದರೆ ಇದು ಪ್ರಾರಂಭವಾದ ವರ್ಷ ಸುಮಾರು 22 ಮಿಲಿಯನ್ ಜನರಿಗೆ ಎಲ್‌ ಪಿ ಜಿ ಗ್ಯಾಸ್ ಸಿಲಿಂಡರ್ ಕಲೆಕ್ಷನ್ ನೀಡಲಾಗಿದೆ ಎಂದು ವರದಿಗಳ ಪ್ರಕಾರ ದೃಢಪಟ್ಟಿದೆ

WhatsApp Group Join Now
Telegram Group Join Now       

ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು 2023 – 2024 ರಲ್ಲಿ ಈ ಯೋಜನೆಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಎಂದು ಮರುನಾಮಕರಣ ಮಾಡಲಾಯಿತು

ಏನಿದು ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 (Lpg Subsidy)

ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಯನ್ನು 2023 – 2024 ರ ( Lpg Subsidy ) ಮೂಲಕ ಈ ಯೋಜನೆಯನ್ನು ಇನ್ನಷ್ಟು ವರ್ಷಗಳ ಕಾಲ ವಿಸ್ತರಣೆ ಮಾಡುವ ಸಲುವಾಗಿ ಈ ಯೋಜನೆ ಹೆಸರನ್ನು ಪ್ರಧಾನಮಂತ್ರಿ ಉಜ್ವಲ ಯೋಜನೆ 2.0 ಎಂದು ನಾಮಕರಣ ಮಾಡಿ ಈ ಯೋಜನೆಯನ್ನು 2024 ರಿಂದ 25 ರವರೆಗೆ ವಿಸ್ತರಣೆ ಮಾಡಲಾಗಿದೆ

ಈ ಯೋಜನೆ ಮೂಲಕ ಇನ್ನಷ್ಟು ಬಡ ಮತ್ತು ಹಿಂದುಳಿದ ವರ್ಗ ದ ಮಹಿಳೆಯರಿಗೆ ಉಚಿತವಾಗಿ ಎಲ್ಪಿಜಿ ಗ್ಯಾಸ್ ಮತ್ತು ಸ್ಟವ್ ನೀಡುವ ಯೋಜನೆಯಾಗಿದೆ

ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಗೆ (Lpg Subsidy ) ಅರ್ಜಿ ಹಾಕುವುದು ಹೇಗೆ

1) ಈ ಯೋಜನೆಗೆ ಅರ್ಜಿ ಹಾಕಲು ಕನಿಷ್ಠ (ಮಹಿಳೆಯರಿಗೆ ಮಾತ್ರ) 18 ವರ್ಷ ಮೇಲ್ಪಟ್ಟಿರಬೇಕಾಗುತ್ತದೆ

2) ಒಂದೇ ಮನೆಯಲ್ಲಿ ವಾಸಿಸುವವರು ಈ ಮೊದಲು ಯಾವುದೇ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕಲಕ್ಷನ್ ಅನ್ನು ಪಡೆದಿರಬಾರದು

3) ಈ ಯೋಜನೆಯ ಲಾಭ ಪಡೆಯಬೇಕಾದರೆ BPL Ration Card ಮತ್ತು ಅಂತೋದಯ ರೇಷನ್ ಕಾರ್ಡ್ ಹೊಂದಿರಬೇಕಾಗುತ್ತದೆ

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

1) ಆಧಾರ್ ಕಾರ್ಡ್ :- ಅರ್ಜಿದಾರ ಗುರುತಿನ ಪುರಾವೆಯಾಗಿ ಅಥವಾ ವಾಸ ಮಾಡುವ ಸ್ಥಳದ ಗುರುತಾಗಿ ಆಧಾರ್ ಕಾರ್ಡನ್ನು ಬಳಸಲಾಗುತ್ತೆ ( ಅಸ್ಸಾಂ ಮತ್ತು ಮೇಘಾಲಯ) ರಾಜ್ಯಗಳಿಗೆ ಹೊರತುಪಡಿಸಿ.

2) BPL Ration Card:- ವಾಸತ್ತಿರುವ ರಾಜ್ಯದಿಂದ ಪಡೆದುಕೊಂಡಿರುವಂತ ಬಿಪಿಎಲ್ ಮತ್ತು ಅಂತೋದಯ ರೇಷನ್ ಕಾರ್ಡ್ ಬೇಕಾಗುತ್ತದೆ

3) ಬ್ಯಾಂಕ್ ಖಾತೆ:- ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವಂತಹ ಮಹಿಳೆಯ ಬ್ಯಾಂಕ್ ಖಾತೆ ಮತ್ತು IFSC ಕೋಡ್ ಬೇಕಾಗುತ್ತೆ

  • ಕಡ್ಡಾಯವಾಗಿ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕಾಗುತ್ತೆ ಅಂದರೆ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತೆ

4) ಮೊಬೈಲ್ ನಂಬರ್ :- ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಇರುವ ಮೊಬೈಲ್ ನಂಬರ್ ಬೇಕಾಗುತ್ತೆ

ಈ ಮೇಲ್ ಕಾಣಿಸಿದ ಎಲ್ಲಾ ದಾಖಲೆಗಳು ನಿಮ್ಮ ಹತ್ತಿರ ಇದ್ದರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಗೆ ಅರ್ಜಿ ಸಲ್ಲಿಸಬಹುದಾಗಿದೆ ಇದರಿಂದ ನಿಮಗೆ ಉಚಿತವಾಗಿ ಒಂದು ಎಲ್ಪಿಜಿ ಗ್ಯಾಸ್ ಮತ್ತು ಸ್ಟವ್ ದೊರೆಯುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ Link:- https://www.pmuy.gov.in/ujjwala2.html

ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಈ ಲಿಂಕ್ ನ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

ಕೇವಲ 500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಪಡೆಯುವುದು ಹೇಗೆ

ನೀವು ಗ್ಯಾಸ್ ಸಿಲೆಂಡರ್ ಬಳಸ್ತಾ ಇದ್ದರೆ ಕೇವಲ 500 ರೂಪಾಯಿಗೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಯಾವ ರೀತಿ ಪಡೆಯುವುದೆಂದು ಈಗ ತಿಳಿದುಕೊಳ್ಳೋಣ

ನಿಮಗೆಲ್ಲರಿಗೂ ಗೊತ್ತಿರುವಂತೆ 2020 ಮತ್ತು 2021ರಲ್ಲಿ ಅಡಿಗೆ ಮಾಡಲು ಬಳಸುವಂತಹ ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ತರವು ಸುಮಾರು 1,300 ವರೆಗೆ ಮುಟ್ಟಿತ್ತು ಕಾರಣವೇನೆಂದರೆ ಕೇಂದ್ರ ಸರ್ಕಾರ ನೀಡುತ್ತಿರುವ ಸಬ್ಸಿಡಿ ದರವನ್ನು ರದ್ ಮಾಡಲಾಗಿತ್ತು ಆದ್ದರಿಂದ ಗ್ಯಾಸ್ ಸಿಲಿಂಡರ್ ನ ಬೆಲೆ ಸಡನ್ ಆಗಿ ಏರಿಕೆಯಾಗಿತ್ತು ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್ಪಿಜಿ ದರವು ಕೂಡ ಏರಿಕೆಯಾದದ್ದು ಇದಕ್ಕೆ ಕಾರಣವಾಗಿದೆ.

ಇವಾಗ ಕೇಂದ್ರ ಸರ್ಕಾರ ಮತ್ತೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಮೇಲೆ ಸಬ್ಸಿಡಿಯನ್ನು ಘೋಷಣೆ ಮಾಡಿದೆ ಆದ್ದರಿಂದ ಇನ್ನು ಮುಂದೆ ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆ ಕೇವಲ ಐದುನೂರು ದೊರೆಯುತ್ತದೆ ಹೇಗೆ ಅಂದರೆ

ಕೇಂದ್ರ ಸರ್ಕಾರವು ಎಲ್ಪಿಜಿ ಗ್ಯಾಸ್ ಸಿಲಿಂಡರಿನ ಮೇಲೆ ರೂ.300 ಸಬ್ಸಿಡಿ ದರವನ್ನು ಘೋಷಣೆ ಮಾಡಿದೆ ಇದಕ್ಕಿಂತ ಮುಂಚಿತವಾಗಿ 200 ಸಬ್ಸಿಡಿ ದರವನ್ನು ಘೋಷಣೆ ಮಾಡಿತ್ತು ಮತ್ತು ಇತ್ತೀಚೆಗೆ ಮಹಿಳೆಯರ ದಿನಾಚರಣೆ ಪ್ರಯುಕ್ತ ನೂರು ರೂಪಾಯಿ ಸಬ್ಸಿಡಿ ದರವನ್ನು ಘೋಷಣೆ ಮಾಡಿದೆ ಇದರಿಂದ ಒಟ್ಟಾಗಿ ಒಂದು ಎಲ್ಪಿಸಿ ಗ್ಯಾಸ್ ಸಿಲಿಂಡರ್ ನ ಬೆಲೆ ಮೇಲೆ 300 ಸಬ್ಸಿಡಿ ಸಿಕ್ಕಂತೆ ಆಗುತ್ತದೆ.

LPG price today
LPG price today

 

ಪ್ರಸ್ತುತ ದಿನದಲ್ಲಿ ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆ ದಿನಾಂಕ ಮಾರ್ಚ್ 10.2024 ರ ಪ್ರಕಾರ ₹805.50 ರಂತೆ ಇದೆ ಅಂದರೆ ಗೃಹಬಳಕೆಗೆ ಬಳಸುವಂತಹ ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆ 14.2 ಕೆಜಿ 810 ಅಂತ ಇಟ್ಟುಕೊಳ್ಳೋಣ ಇದರಲ್ಲಿ ಕೇಂದ್ರ ಸರಕಾರದ ಸಬ್ಸಿಡಿ 300 ಅಪ್ಲೈ ಮಾಡಿದರೆ ನಿಮಗೆ ಕೇವಲ 510 ರೂಪಾಯಿಗೆ ಒಂದು ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಸಿಗುತ್ತದೆ.

ಬುಕ್ ಮಾಡುವ ಮೊದಲು ಈ ಕೆಲಸ ಮಾಡಿ

1) ಮನೆ ಬಳಕೆಗೆ ಬಳಸುವಂತಹ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡುವ ಮೊದಲು ನೀವು ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಕಲೆಕ್ಷನ್ ಪಡೆದಿದ್ದೀರ ಇಲ್ಲವಾ ಎಂದು ಖಚಿತ ಪಡಿಸಿಕೊಳ್ಳಿ ಒಂದು ವೇಳೆ ಪಡೆದಿದ್ದರೆ ನೀವು ಬುಕ್ ಮಾಡುವ ಗ್ಯಾಸ್ ಏಜೆನ್ಸಿ ಬಳಿ ಸಬ್ಸಿಡಿ ಅಪ್ಲೈ ಆಗಿದೆಯಾ ಇಲ್ವಾ ಎಂದು ತಿಳಿದುಕೊಳ್ಳಿ ಸಬ್ಸಿಡಿ ಅಪ್ಲೈ ಆದರೆ ಮಾತ್ರ ನಿಮಗೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ 500 ಗೆ ದೊರೆಯುತ್ತದೆ.

2) ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಕಲೆಕ್ಷನ್ ಪಡೆದರೆ ಕಡ್ಡಾಯವಾಗಿ ಈ ಕೆ ವೈಸಿ ಮಾಡಿರಬೇಕಾಗುತ್ತದೆ.

3) ನೀವು ಗ್ಯಾಸ್ ಸಿಲೆಂಡರ್ ಬುಕ್ ಮಾಡುವಾಗ ಪೂರ್ತಿ ಮೊತ್ತದ ಅಮೌಂಟ್ ಅನ್ನು ಪೇ ಮಾಡಬೇಕಾಗುತ್ತದೆ ನಂತರ ಸಬ್ಸಿಡಿ ಹಣವು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ

4) ಸಬ್ಸಿಡಿ ಪಡಿಯಬೇಕಾದರೆ ಕಡ್ಡಾಯವಾಗಿ ನಿಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಮಾಡಿರಬೇಕಾಗುತ್ತದೆ

ಮೇಲೆ ಕೊಟ್ಟಿರುವಂತ ಎಲ್ಲಾ ರೀತಿಯ ವಿವರಗಳನ್ನು ತಿಳಿಸಲಾಗಿದೆ ಈ ರೀತಿ ಮಾಡುವುದರಿಂದ ನೀವು ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಅನ್ನು 500 ಪಡೆಯಬಹುದು

ಈ ಲೇಖನೆಯೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ವೆಬ್ಸೈಟ್ ನೋಟಿಫಿಕೇಶನ್ ಅನ್ನು ಆನ್ ಮಾಡಿಕೊಳ್ಳಿ ಮತ್ತು ಈ ಲೇಖನೆಯನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್

ಮಾಡಿಕೊಳ್ಳಿ ಇದೇ ರೀತಿ ಸುದ್ದಿ ತಿಳಿಯಲು ನಮ್ಮ ವೆಬ್ಸೈಟ್ ಅನ್ನು ದಿನಾಲು ಫಾಲೋ ಮಾಡಿ.

ಇನ್ನಷ್ಟು ಹೊಸ ಮಾಹಿತಿಯನ್ನು ತಿಳಿಯಲು ನಮ್ಮ ವೆಬ್ಸೈಟ್ ಮೇನ್ ಪೇಜ್

ಇಲ್ಲಿ ಕ್ಲಿಕ್ ಮಾಡಿ

ನಮ್ಮ ಪ್ರೀತಿಯ ಓದುಗರಿಗೆ ತಿಳಿಸುವುದೇನೆಂದರೆ ಈ ವೆಬ್ ಸೈಟ್ ನಲ್ಲಿ ಪ್ರಚಾರವಾಗುವಂತ ಎಲ್ಲಾ ಲೇಖನಗಳು ನಿಖರವಾದ ಮತ್ತು ಖಚಿತ ಮಾಹಿತಿಯನ್ನು ಮಾತ್ರ ನೀಡಲಾಗುತ್ತೆ ಎಂದು ತಿಳಿಸಲಾಗಿದೆ ಮತ್ತು ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಪ್ರಕಟ ಮಾಡಲಾಗುವುದಿಲ್ಲ.