ಗೃಹಲಕ್ಷ್ಮಿ ಯೋಜನೆ ನಮ್ಮ ಕರ್ನಾಟಕದಲ್ಲಿ ಸಾಕಷ್ಟು ಪ್ರಾಮುಖ್ಯತೆ ಪಡೆದ ಹಾಗೂ ಜನಪ್ರಿಯ ಯೋಜನೆಯಾಗಿದೆ ಮತ್ತು ಈ ಯೋಜನೆ ಜಾರಿಗೆ ಬಂದ ನಮ್ಮ ಕರ್ನಾಟಕದಲ್ಲಿ ಎರಡು ವರ್ಷಗಳ ಪೂರೈಸುವ ಹಂತದಲ್ಲಿ ಇದೆ ಹಾಗಾಗಿ ಇನ್ನು ಮಹಿಳೆಯರಿಗೆ ಮೂರು ತಿಂಗಳ ಬಾಕಿ ಇರುವಂತಹ ಹಣ ಯಾವಾಗ ಜಮಾ ಆಗುತ್ತದೆ ಎಂದು ಮಹಿಳೆಯರು ಕಾತುರದಿಂದ ಎದುರು ನೋಡುತ್ತಿದ್ದಾರೆ ಆದರೆ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹಾಗೂ ಕಾಂಗ್ರೆಸ್ನ ವಿವಿಧ ಸಚಿವರು ಮತ್ತು ನಾಯಕರು ಒಂದೊಂದು ಹೇಳಿಕೆಯನ್ನು ಬಿಡುಗಡೆ ಮಾಡುತ್ತಿದ್ದಾರೆ
ಇದರಿಂದ ನಾವು ಈ ಒಂದು ಲೇಖನಯ ಮೂಲಕ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವ ಫೆಬ್ರುವರಿ ಮತ್ತು ಮಾರ್ಚ್ ಹಾಗೂ ಏಪ್ರಿಲ್ ತಿಂಗಳ 3 ಕಂತಿನ ಪೆಂಡಿಂಗ್ ಇರುವ ಹಣ ಯಾವಾಗ ಜಮಾ ಆಗುತ್ತದೆ ಇದಕ್ಕೆ ಸಂಬಂಧಿಸಿದಂತೆ ನಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಏನು ಮಾಹಿತಿ ತಿಳಿಸಿದ್ದಾರೆ ಮತ್ತು ಯಾವುದೇ ಪೆಂಡಿಂಗ್ ಹಣ ಪಡೆಯಲು ಮಹಿಳೆಯರು ಯಾವೆಲ್ಲ ರೂಲ್ಸ್ ಪಾಲಿಸಬೇಕು ಎಂಬ ವಿವರವನ್ನು ತಿಳಿಯೋಣ ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಓದಿ
ಗೃಹಲಕ್ಷ್ಮಿ ಪೆಂಡಿಂಗ್ ಇರುವ (Gruhalakshmi Payment Release) ಹಣ ಬಿಡುಗಡೆಗೆ ವಿಳಂಬ..?
ಹೌದು ಸ್ನೇಹಿತರೆ, ಕಳೆದ ಮೂರು ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ ಯಾವುದೇ ಕಂತಿನ ಹಣ ಮಹಿಳೆಯರ ಖಾತೆಗೆ ಜಮಾ ಆಗುತ್ತಿಲ್ಲ ಇದಕ್ಕೆ ಸಂಬಂಧಿಸಿದಂತೆ ನಮ್ಮ ರಾಜ್ಯದ ಹಲವಡೆ ಮಹಿಳೆಯರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಹೌದು ಸ್ನೇಹಿತರೆ, ಧಾರವಾಡ ಮತ್ತು ಬೆಳಗಾವಿ ಹಾಗೂ ತುಮಕೂರು, ಗದಗ್, ಚಿಕ್ಕಮಂಗಳೂರು, ಮೈಸೂರು , ಕೊಡಗು ಮಂಡ್ಯ ಮುಂತಾದ ಜಿಲ್ಲೆಗಳಲ್ಲಿ ಜನರು ಈ ಯೋಜನೆಯ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂದು ಅಸಮಾಧಾನ ಹೋರಹಾಕುತ್ತಿದ್ದಾರೆ

ಹೌದು ಸ್ನೇಹಿತರೆ ಏಕೆ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಜಮಾ ಆಗುತ್ತಿಲ್ಲ ಎಂದು ಜನರು ಅಥವಾ ಮಾಧ್ಯಮದವರು ಪ್ರಶ್ನೆ ಕೇಳಿದರೆ ಕಾಂಗ್ರೆಸ್ ಪಕ್ಷದ ಸಚಿವರು ಹಾಗೂ ಗೃಹಲಕ್ಷ್ಮಿ ಯೋಜನೆಯ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ರೀತಿಯಾಗಿ ಉತ್ತರ ನೀಡುತ್ತಿದ್ದಾರೆ ಅದು ಏನು ಅಂದರೆ ತಾಂತ್ರಿಕ ಸಮಸ್ಯೆ ಕಾರಣದಿಂದ ಹಣ ಬಿಡುಗಡೆಗೆ ತೊಂದರೆಯಾಗುತ್ತಿದೆ ಎಂದು ಕಳೆದ ಆರು ತಿಂಗಳಿಂದ ಈ ಒಂದು ನೆಪ ಮಾತ್ರ ಹೇಳುತ್ತಿದ್ದಾರೆ ಹಾಗಾಗಿ ಉಳಿದ ಜನವರಿ ಮತ್ತು ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂದು ಮಹಿಳೆಯರು ರೊಚ್ಚಿಗೆದ್ದಿದ್ದಾರೆ
ಗೃಹಲಕ್ಷ್ಮಿ ಯೋಜನೆ (Gruhalakshmi Payment Release).?
ಗೃಹಲಕ್ಷ್ಮಿ ಯೋಜನೆ ನಮ್ಮ ರಾಜ್ಯದಲ್ಲಿ ಅಗಸ್ಟ್ 2023ರಲ್ಲಿ ಜಾರಿಗೆ ತರಲಾಯಿತು ಈ ಒಂದು ಯೋಜನೆಯನ್ನು ಕಾಂಗ್ರೆಸ್ ಪಕ್ಷ ಚುನಾವಣೆ ಗೆಲ್ಲುವ ಉದ್ದೇಶದಿಂದ ನಮ್ಮ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ನೀಡುವುದಾಗಿ ಬರವಸೆ ನೀಡುತ್ತು. ಈ ಗ್ಯಾರಂಟಿ ಯೋಜನೆಗಲ್ಲಿ ಗೃಹಲಕ್ಷ್ಮಿ ಯೋಜನೆಯು ಕೂಡ ಒಂದಾಗಿದೆ,
ಗೃಹಲಕ್ಷ್ಮಿ ಯೋಜನೆಯ ಮೂಲಕ ಅರ್ಜಿ ಸಲ್ಲಿಸಿದಂತ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ ಇದರಿಂದ ಮಹಿಳೆಯರು ದಿನನಿತ್ಯ ಜೀವನದಲ್ಲಿ ಬೆಲೆ ಏರಿಕೆಯ ವಿರುದ್ಧ ಹೋರಾಡಬಹುದು ಹಾಗೂ ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಈ ಯೋಜನೆ ನೆರವಾಗುತ್ತದೆ ಎಂದು ಸಾಕಷ್ಟು ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಈ ಯೋಜನೆಯ ಮುಖ್ಯ ಉದ್ದೇಶವೆಂದು ತಿಳಿಸಿದ್ದಾರೆ
ಇಲ್ಲಿವರೆಗೂ ಈ ಗೃಹಲಕ್ಷ್ಮಿ ಯೋಜನೆಯ ಮೂಲಕ 18 ಹಾಗೂ 19 ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ ಅಂದರೆ ಈ ಒಂದು ಯೋಜನೆಯ ಮೂಲಕ ಇಲ್ಲಿಯವರೆಗೂ ಮಹಿಳೆಯರು 38,000 ವರೆಗೆ ಹಣ ಪಡೆದುಕೊಂಡಿದ್ದಾರೆ ಎಂದು ಹೇಳಬಹುದು ಆದ್ದರಿಂದ ಕಳೆದ ಮೂರು ತಿಂಗಳ ಹಣ ಯಾವಾಗ ಜಮಾ ಆಗುತ್ತದೆ ಎಂದು ಮಹಿಳೆಯರು ಎದುರು ನೋಡುತ್ತಿದ್ದಾರೆ
ಮೂರು ತಿಂಗಳ ಬಾಕಿ ಹಣ ಒಟ್ಟಿಗೆ ಜಮಾ (Gruhalakshmi Payment Release) ಮಾಡುವುದಾಗಿ ಭರವಸೆ..?
ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಇರುವ ಮೂರು ತಿಂಗಳ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಮಾಧ್ಯಮಗಳು ಹಾಗೂ ವಿಪಕ್ಷ ನಾಯಕರು ಸರಕಾರಕ್ಕೆ ಪ್ರಶ್ನೆ ಕೇಳಿದರೆ ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟ ಮಾಹಿತಿ ನೀಡಿದ್ದಾರೆ,
ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವಂತ ಮೂರು ತಿಂಗಳ ಹಣವನ್ನು ನಾವು ಮೇ ತಿಂಗಳ ಅಂತ್ಯದ ಒಳಗಡೆ ಪ್ರತಿಯೊಬ್ಬರ ಖಾತೆಗೆ ಜಮಾ ಮಾಡುತ್ತೇವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ ಮತ್ತು ಈ ಬಗ್ಗೆ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ರಾಜ್ಯದ ಜನತೆಗೆ ನಿನ್ನೆ ನಡೆದ ಪ್ರೆಸ್ ಮೀಟ್ ನಲ್ಲಿ ಮಾಹಿತಿ ತಿಳಿಸಿದ್ದಾರೆ.
ಹೌದು ಸ್ನೇಹಿತರೆ ಈ ತಿಂಗಳ ಅಂತ್ಯದ ಒಳಗಡೆ ಪ್ರತಿಯೊಬ್ಬರಿಗೂ ಕೂಡ ಪೆಂಡಿಂಗ್ ಇರುವಂತಹ ಹಣವನ್ನು ಹಂತ ಹಂತವಾಗಿ ಜಮಾ ಮಾಡಲಾಗುತ್ತದೆ ಎಂದು ಮಾಹಿತಿ ತಿಳಿಸಿದ್ದಾರೆ, ಆದ್ದರಿಂದ ಮಹಿಳೆಯರು ಹಣ ಬರುವವರೆಗೂ ಕಾಯಬೇಕಾಗುತ್ತದೆ,
ಗೃಹಲಕ್ಷ್ಮಿ ಯೋಜನೆ ಬಾಕಿ ಇರುವ ಕಂತಿನ ಎಲ್ಲಾ ಹಣ ಪಡೆಯಲು ಮಹಿಳೆಯರು ಕಡ್ಡಾಯವಾಗಿ ಈ ರೂಲ್ಸ್ ಪಾಲಿಸಬೇಕು..?
ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಸಾಕಷ್ಟು ಮಹಿಳೆಯರಿಗೆ ಇನ್ನೂ ಐದು ಅಥವಾ ಆರು ಕಂತಿನ ಹಣ ಜಮಾ ಆಗಿಲ್ಲ ಹಾಗೂ ಕೆಲ ಮಹಿಳೆಯರಿಗೆ ಇನ್ನೂ 10 ಕಂತಿನವರೆಗೆ ಯಾವುದೇ ರೀತಿ ಹಣ ಜಮಾ ಆಗಿಲ್ಲ ಹಾಗಾಗಿ ಅಂತ ಮಹಿಳೆಯರು ಕಡ್ಡಾಯವಾಗಿ ಕೆಳಗಡೆ ತಿಳಿಸಿದ ಎಲ್ಲಾ ರೂಲ್ಸ್ ಗಳನ್ನು ಪಾಲಿಸಿ
ಬ್ಯಾಂಕ್ ಖಾತೆ ಸರಿಪಡಿಸಿ:- ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವಂತಹ ಯಾವುದೇ ಕಂತಿನ ಹಣ ಪಡೆಯಲು ಬಯಸುವ ಮಹಿಳೆಯರು ಮೊದಲು ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಹಾಗೂ ಆಧಾರ್ ಕಾರ್ಡ್ ಸೀಡಿಂಗ್ ಮಾಡಿಸಬೇಕು ಇದರ ಜೊತೆಗೆ ಬ್ಯಾಂಕ್ ಖಾತೆಯ ekyc ಮಾಡಿಸಬೇಕು
ಗೃಹಲಕ್ಷ್ಮಿ ಅರ್ಜಿ ಸರಿಪಡಿಸಿ:– ಬಾಕಿ ಇರುವಂತ ಎಲ್ಲಾ ಕಂತಿನ ಹಣ ಪಡೆಯಲು ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಅರ್ಜಿಗೆ ಮತ್ತೊಮ್ಮೆ ekyc ಮಾಡಿಸಬೇಕು
ರೇಷನ್ ಕಾರ್ಡ್ ಸರಿಪಡಿಸಿ:- ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವಂತ ಎಲ್ಲಾ ಕಂತಿನ ಹಣ ಪಡೆಯಲು ರೇಷನ್ ಕಾರ್ಡಿಗೆ ಸಂಬಂಧಿಸಿದಂತೆ ಎಲ್ಲಾ ಸದಸ್ಯರ ಈಕೆ ವೈಸಿ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು
ವಿಶೇಷ ಸೂಚನೆ:- ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವಂತ ಯಾವುದೇ ಕಂತಿನ ಹಣ ಜಮಾ ಆಗುತ್ತಿಲ್ಲ ಎಂಬ ಮಾಹಿತಿಯನ್ನು ನೀವು ತಿಳಿದುಕೊಳ್ಳಲು ಬಯಸುತ್ತಿದ್ದರೆ ಹಾಗೂ ಯಾವ ಕಾರಣಕ್ಕೆ ಹಣ ಬರುತ್ತಿಲ್ಲ ಎಂಬ ಮಾಹಿತಿ ಬೇಕಾದರೆ ನೀವು ಕೂಡಲೇ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ ಹಾಗೂ ಇದೇ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿಕೊಳ್ಳಿ
Kea Recruitment 2025: SDA, FDA ಹೊಸ ನೇಮಕಾತಿ! 2882 ಹುದ್ದೆಗಳು, 10Th,PUC ಪಾಸಾದವರು ಬೇಗ ಅರ್ಜಿ ಸಲ್ಲಿಸಿ
1 thought on “Gruhalakshmi Payment Release: ಗೃಹಲಕ್ಷ್ಮಿ ಪೆಂಡಿಂಗ್ ಇರುವ ಎಲ್ಲಾ ಕಂತಿನ ಹಣ ಈ ದಿನಾಂಕದಿಂದ ಬಿಡುಗಡೆ, ಲಕ್ಷ್ಮಿ ಹೆಬ್ಬಾಳ್ಕರ್”