gruhalakshmi Yojana: ಮೇ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವ ಮೂರು ಕಂತಿನ ಹಣ ಬಿಡುಗಡೆ! ಗೃಹಲಕ್ಷ್ಮಿ ಯೋಜನೆ

gruhalakshmi Yojana: ಮೇ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವ ಮೂರು ಕಂತಿನ ಹಣ ಬಿಡುಗಡೆ! ಗೃಹಲಕ್ಷ್ಮಿ ಯೋಜನೆ 

ನಮ್ಮ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರವರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡುತ್ತಾರೆ.! ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಕರ್ನಾಟಕದಲ್ಲಿ ಸಾಕಷ್ಟು ಪ್ರಾಮುಖ್ಯತೆ ಹಾಗೂ ಜನಪ್ರಿಯ ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆಯಾಗಿದೆ. ಈ ಯೋಜನೆಯಿಂದ ಕಳೆದ ಮೂರು ತಿಂಗಳಿಂದ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ ಹಾಗಾಗಿ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂದು ಮಹಿಳೆಯರು ಎದುರು ನೋಡುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ನಮ್ಮ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೊಸ ಮಾಹಿತಿ ಹಂಚಿಕೊಂಡಿದ್ದಾರೆ.

WhatsApp Group Join Now
Telegram Group Join Now       

ಆದ್ದರಿಂದ ಈ ಒಂದು ಲೇಖನೆಯ ಮೂಲಕ 19 ಹಾಗೂ 20 ಮತ್ತು 21ನೇ ಕಂತಿನ ಹಣ ಮಹಿಳೆಯರ ಖಾತೆಗೆ ಯಾವಾಗ ಜಮಾ ಆಗುತ್ತದೆ ಮತ್ತು ಪೆಂಡಿಂಗ್ ಇರುವ ಹಣ ಜಮಾ ಆಗದೇ ಇದ್ದರೆ ಏನು ಮಾಡಬೇಕು ಹಾಗೂ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಲಕ್ಷ್ಮಿ ಹೆಬ್ಬಾಳಕರ್ ಅವರು ಯಾವ ಮಾಹಿತಿ ತಿಳಿಸಿದ್ದಾರೆ ಹಾಗೂ ಈ ಯೋಜನೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಈ ಒಂದು ಲೇಖನೆಯ ಮೂಲಕ ತಿಳಿದುಕೊಳ್ಳೋಣ ಆದ್ದರಿಂದ ಆದಷ್ಟು ಮಹಿಳೆಯರಿಗೆ ಹಾಗೂ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಶೇರ್ ಮಾಡಿ

 

ಗೃಹಲಕ್ಷ್ಮಿ ಯೋಜನೆ (gruhalakshmi Yojana).?

ಗೃಹಲಕ್ಷ್ಮಿ ಯೋಜನೆಯನ್ನು ಮಹಿಳೆಯರ ಅಭಿವೃದ್ಧಿಗೆ ಹಾಗೂ ಆರ್ಥಿಕತೆಗೆ ಒತ್ತು ನೀಡುವ ಉದ್ದೇಶದಿಂದ ಮತ್ತು ಪ್ರತಿದಿನ ಏರುತ್ತಿರುವ ವಿವಿಧ ವಸ್ತುಗಳ ಬೆಲೆ ಏರಿಕೆ ಹಾಗೂ ಮುಂತಾದ ಸಣ್ಣಪುಟ್ಟ ವಸ್ತುಗಳ ಖರೀದಿ ನೆರವು ನೀಡಲು ಕಾಂಗ್ರೆಸ್ ಪಕ್ಷ  ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣ ನೀಡುತ್ತೇವೆ ಎಂದು ಭರವಸೆ ನೀಡುವುದಲ್ಲದೆ ಇತರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಈ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು ಗ್ಯಾರೆಂಟಿ ಯೋಜನೆ ಎಂದು ಹೇಳಬಹುದು

gruhalakshmi Yojana
gruhalakshmi Yojana

 

ನಮ್ಮ ಕರ್ನಾಟಕದಲ್ಲಿ 2023ರಲ್ಲಿ ಚುನಾವಣೆ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಅಧಿಕಾರ ಅಧಿಕಾರ ಪಡೆಯಲು ಹಾಗೂ ಕರ್ನಾಟಕದಲ್ಲಿ ಪೂರ್ಣ ಪ್ರಮಾಣದಲ್ಲಿ ಸರಕಾರ ಜಾರಿಗೆ ಬರಲು ಈ ಗ್ಯಾರಂಟಿ ಯೋಜನೆಗಳನ್ನು ಒಂದು ಅಸ್ತ್ರವಾಗಿ ಬಳಸಿಕೊಂಡಿದೆ. ಹಾಗಾಗಿ ಕಾಂಗ್ರೆಸ್ ಪಕ್ಷ ಅಂದರೆ ಗ್ಯಾರಂಟಿ ಪಕ್ಷ ಎಂದು ಸಾಕಷ್ಟು ಕಾಂಗ್ರೆಸ್ ಮುಖಂಡರು ಪ್ರಚಾರ ಮಾಡುತ್ತಿದ್ದಾರೆ. ಹಾಗೂ ನಮ್ಮ ಕರ್ನಾಟಕದಲ್ಲಿ ಈ ಗೃಹಲಕ್ಷ್ಮಿ ಯೋಜನೆ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ ಮತ್ತು ಇಲ್ಲಿವರೆಗೂ ಮಹಿಳೆಯರು ಈ ಒಂದು ಯೋಜನೆಯ ಮೂಲಕ ಸುಮಾರು 38,000 ವರೆಗೆ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಮೂಲಕ ಹಣ ಪಡೆದುಕೊಂಡಿದ್ದಾರೆ

ಆದ್ದರಿಂದ ಕಳೆದ ಎರಡು ಅಥವಾ ಮೂರು ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ ಮೂಲಕ ಬರಬೇಕಾದ ಸುಮಾರು ಮೂರು ಕಂತಿನ ಒಟ್ಟು ₹6,000 ಇನ್ನು ಮಹಿಳೆಯರ ಖಾತೆಗೆ ಜಮಾ ಆಗಿಲ್ಲ ಹಾಗಾಗಿ ಯಾವಾಗ ಹಣ ಜಮಾ ಆಗುತ್ತದೆ ಎಂದು ಮಹಿಳೆಯರು ಸರಕಾರಕ್ಕೆ ಪ್ರಶ್ನೆ ಕೇಳುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮಗಳೊಂದಿಗೆ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದ್ದಾರೆ ಅದು ಏನು ಎಂದು ಈಗ ತಿಳಿಯೋಣ.

WhatsApp Group Join Now
Telegram Group Join Now       

 

ಗೃಹಲಕ್ಷ್ಮಿ ಯೋಜನೆ ಮೂರು ತಿಂಗಳ ಹಣ ಒಟ್ಟಿಗೆ ಬಿಡುಗಡೆ..?

ಹೌದು ಸ್ನೇಹಿತರೆ ಕಳೆದ ಎರಡು ಅಥವಾ ಮೂರು ತಿಂಗಳಿಂದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಆಗಿಲ್ಲ ಕೆಲ ಮಹಿಳೆಯರಿಗೆ ಜನವರಿ ಮತ್ತು ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಹಣ ಜಮಾ ಆಗಿಲ್ಲ ಹಾಗಾಗಿ ಸಾಕಷ್ಟು ಮಹಿಳೆಯರು ಈಗ ಸರಕಾರಕ್ಕೆ ಪ್ರಶ್ನೆ ಕೇಳುತ್ತಿದ್ದಾರೆ ಹಾಗೂ ವಿರೋಧ ಪಕ್ಷದ ನಾಯಕ ಆರು ಅಶೋಕ್ ಈ ಬಗ್ಗೆ ಸರಕಾರಕ್ಕೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ

ಇದಕ್ಕೆ ಸಂಬಂಧಿಸಿದಂತೆ ನಮ್ಮ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮಗಳೊಂದಿಗೆ ಹಾಗೂ ಸುದ್ದಿಗಾರರೊಂದಿಗೆ ಸ್ಪಷ್ಟ ಮಾಹಿತಿಯನ್ನು ಮಹಿಳೆಯರಿಗೆ ನೀಡಿದ್ದಾರೆ ಅದು ಏನು ಅಂದರೆ ಗೃಹಲಕ್ಷ್ಮಿ ಯೋಜನೆಯ ಕಳೆದ ಮೂರು ತಿಂಗಳ ಪೆಂಡಿಂಗ್ ಇರುವಂತಹ ಎಲ್ಲಾ ಕಂತಿನ ಹಣವನ್ನು ನಾವು ಮೇ ತಿಂಗಳ ಒಳಗಡೆ ವರ್ಗಾವಣೆ ಮಾಡಲು ತೀರ್ಮಾನ ಮಾಡಿದ್ದೇವೆ ಇದಕ್ಕೆ ಕಾರಣ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಮೇ 20ನೇ ತಾರೀಕಿಗೆ ಎರಡು ವರ್ಷಗಳು ಪೂರೈಸುತ್ತದೆ ಹಾಗಾಗಿ ಶುಭ ಸಮಾರಂಭದಲ್ಲಿ ಪೆಂಡಿಂಗ್ ಇರುವಂತಹ ಎಲ್ಲಾ ಕಂತಿನ ಹಣವನ್ನು ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಮಾಹಿತಿ ತಿಳಿಸಿದ್ದಾರೆ

ಹೌದು ಸ್ನೇಹಿತರೆ ಈ ಮೇ ತಿಂಗಳಿನಲ್ಲಿ ಪ್ರತಿ ವಾರಕ್ಕೊಮ್ಮೆ ಅಂದರೆ ಮೇ 30ನೇ ತಾರೀಖಿನ ಒಳಗಡೆ ಹಂತ ಹಂತವಾಗಿ ₹2000 ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತದೆ ಹಾಗಾಗಿ ಮಹಿಳೆಯರು ಹಣ ಬರುವವರೆಗೂ ಕಾಯಬೇಕು. ಹೌದು ಸ್ನೇಹಿತರೆ, ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿರುವ ಮಾಹಿತಿಯ ಪ್ರಕಾರ ಮೇ ತಿಂಗಳ ಅಂತ್ಯದ ಒಳಗಡೆ ಹಂತ ಹಂತವಾಗಿ ಒಟ್ಟು 6000 ಹಣ ಬಿಡುಗಡೆ ಮಾಡುತ್ತೇವೆ ಎಂದು ಮಾಹಿತಿ ತಿಳಿಸುತ್ತಾರೆ

 

ಗೃಹಲಕ್ಷ್ಮಿ ಯೋಜನೆ (gruhalakshmi Yojana) ಪೆಂಡಿಂಗ್ ಹಣ ಜಮಾ ಆಗಿಲ್ಲ ಅಂದರೆ ಏನು ಮಾಡಬೇಕು..?

ಹೌದು ಸ್ನೇಹಿತರೆ ತುಂಬಾ ಮಹಿಳೆಯರಿಗೆ ಒಂದು ಪ್ರಶ್ನೆ ಕಾಡುತ್ತಿದೆ ಅದು ಏನೆಂದರೆ, ಗೃಹಲಕ್ಷ್ಮಿ ಯೋಜನೆ ಕಳೆದ ಎಂಟು ಅಥವಾ ಹತ್ತು ತಿಂಗಳ ಹಣ ಇನ್ನು ಮಹಿಳೆಯರ ಖಾತೆಗೆ ಜಮಾ ಆಗಿಲ್ಲ ಅಂತ ಮಹಿಳೆಯರು ಏನು ಮಾಡಬೇಕು ಎಂಬ ಪ್ರಶ್ನೆ ಕಾಡುತ್ತದೆ ಆ ಮಹಿಳೆಯರು ಈ ಕೆಳಗಡೆ ನೀಡಿದ ಎಲ್ಲಾ ರೂಲ್ಸ್ ಅಥವಾ ನಿಯಮಗಳನ್ನು ಪಾಲಿಸಿ

ಬ್ಯಾಂಕ್ ಖಾತೆ ಸರಿಪಡಿಸುವಿಕೆ:– ಗೃಹಲಕ್ಷ್ಮಿ ಯೋಜನೆಯ ಹಾಗೂ ಸರ್ಕಾರದ ಯಾವುದೇ ಯೋಜನೆಯ ಹಣವನ್ನು ಪಡೆಯಲು ಬಯಸುವಂತಹ ಮೊದಲು ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ಲಿಂಕ್ ಮತ್ತು ಆಧಾರ್ ಕಾರ್ಡ್ ಸೀಡಿಂಗ್ ಮಾಡಿಸಬೇಕು ಇದರ ಜೊತೆಗೆ ಬ್ಯಾಂಕ್ ಖಾತೆಗೆ ekyc ಮಾಡಿಸುವುದು ಕಡ್ಡಾಯವಾಗಿದೆ ಅಂದರೆ ಮಾತ್ರ ಮಹಿಳೆಯರಿಗೆ ಪೆಂಡಿಂಗ್ ಇರುವ ಐದು ಅಥವಾ ಹತ್ತು ಕಂತಿನ ಹಣ ಜಮಾ ಆಗುತ್ತೆ

ಗೃಹಲಕ್ಷ್ಮಿ ಅರ್ಜಿ:- ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಮೊದಲು ಗೃಹಲಕ್ಷ್ಮಿ ಯೋಜನೆಯ ಅರ್ಜಿಯ E-kyc ಸ್ಥಿತಿ ಚೆಕ್ ಮಾಡಿ ಒಂದು ವೇಳೆ ಈ ಕೆವೈಸಿ ಆಗಿಲ್ಲವೆಂದರೆ ಮೊದಲು ಗೃಹಲಕ್ಷ್ಮಿ ಅರ್ಜಿಗೆ ಈ ಕೆವೈಸಿ ಮಾಡಿಸಿ

ಆಧಾರ್ ಕಾರ್ಡ್ ಅಪ್ಡೇಟ್:- ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದಂತ ಮಹಿಳೆಯರು ಆಧಾರ್ ಕಾರ್ಡ್ ಇಳಿದು 10 ವರ್ಷಗಳ ಕಾಲ ಆಗಿದ್ದು ಮತ್ತು ಯಾವುದೇ ರೀತಿ 10 ವರ್ಷಗಳಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಸದೆ ಇದ್ದರೆ ಅಂತವರು ಕೂಡಲೇ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿ

 

ವಿಶೇಷ ಸೂಚನೆ:- ಮೇಲೆ ತಿಳಿಸಿದಂತ ಎಲ್ಲಾ ನಿಯಮಗಳು ಅಥವಾ ರೂಲ್ಸ್ ಪಾಲಿಸಿದ್ದರು ಕೂಡ ನಿಮಗೆ ಯಾವುದೇ ರೀತಿ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಆಗುತ್ತಿಲ್ಲವೆಂದರೆ, ಕೂಡಲೇ ನೀವು ನಿಮ್ಮ ಹತ್ತಿರದ ಅಥವಾ ನಿಮ್ಮ ತಾಲೂಕು ಮತ್ತು ಜಿಲ್ಲೆಗಳಲ್ಲಿ ಇರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ ಮತ್ತು ಇದೇ ರೀತಿ ಪ್ರತಿದಿನ ಹೊಸ ಮಾಹಿತಿಗಳನ್ನು ಪಡೆಯಲು ಹಾಗೂ ಸರಕಾರದ ಯೋಜನೆಗಳ ಬಗ್ಗೆ ಪ್ರತಿದಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನೆಲ್ ಗಳಿಗೆ ನೀವು ಸೇರಿಕೊಳ್ಳಬಹುದು

1 thought on “gruhalakshmi Yojana: ಮೇ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವ ಮೂರು ಕಂತಿನ ಹಣ ಬಿಡುಗಡೆ! ಗೃಹಲಕ್ಷ್ಮಿ ಯೋಜನೆ”

Leave a Comment

?> ?>