3 Lakh BPL Card Cancelled Check: 3 ಲಕ್ಷ ಬಿಪಿಎಲ್ ಕಾರ್ಡ್ ರದ್ದು: ನಿಮ್ಮ ಪಡಿತರ ಚೀಟಿ ಚಾಲ್ತಿಯಲ್ಲಿದ್ಯಾ ಚೆಕ್ ಮಾಡಿ

3 Lakh BPL Card Cancelled Check : ಬಿಪಿಎಲ್ ಕಾರ್ಡ್ ಹೊಂದಿದವರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ ಎಂದು ಹೇಳಬಹು ,ಸೈಟ್,ಕಾರು, ಮನೆ ಇದ್ದು ಸರ್ಕಾರದ (government benefits) ಸೌಲಭ್ಯಕ್ಕೆ ಆಸೆ ಬಿದ್ದವರಿಗೆ ಆಹಾರ ಇಲಾಖೆ ಗುದ್ದು ನೀಡಿದ್ದು, ಸದ್ದಿಲ್ಲದೇ ಬಿಪಿಎಲ್ ಕಾರ್ಡ್ ಗೆ ಕತ್ತರಿ ಹಾಕಲು ಸರಕಾರ ಮುಂದಾಗಿದೆ

ಹೌದು ಸ್ನೇಹಿತರೆ ರಾಜ್ಯದಲ್ಲಿ ಅಂದಾಜು 3 ಲಕ್ಷ ಜನರ ಬಿಪಿಎಲ್‌ ಕಾರ್ಡ್ ( BPL ration Card ) ರದ್ದಾಗಿದೆ ಎಂದು ವರದಿಗಳು ತಿಳಿದು ಬರುತ್ತವೆ. ಹಾಗಾಗಿ ನೀವು ರೇಶನ್ ತಗೊಳ್ಳೋಕೆ ಹೋದರೇ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಅನ್ನೋ ಮಾಹಿತಿ ಸಿಕ್ಕಿದರೂ ಅಚ್ಚರಿಯಿಲ್ಲ ಎಂಬ ಪರಿಸ್ಥಿತಿ BPL ರೇಷನ್ ಕಾರ್ಡ್ ದಾರರದ್ದಾಗಿದೆ, ಯಾವುದಕ್ಕೂ ನೀವೊಮ್ಮೆ ನಿಮ್ಮ ಕಾರ್ಡ್ ರದ್ದಾಗಿಯೇ ? ಇಲ್ಲವೇ ಅನ್ನೋದನ್ನು ಒಮ್ಮೆ ಚೆಕ್ ಮಾಡಿಕೊಳ್ಳುವುದು ಉತ್ತಮ

 

3 Lakh BPL Card Cancelled Check..?

bpl ರೇಷನ್ ಕಾರ್ಡ್ ದಾರರಿಗೆ ರಾಜ್ಯ ಆಹಾರ ಇಲಾಖೆ ಶಾಕ್ ಮೇಲೆ ಶಾಕ್ ನೀಡಿದೆ. ಸೈಲೆಂಟಾಗಿ bpl ಪಡಿತರದಾರರ ಸಮೀಕ್ಷೆ ಸದ್ದಿಲ್ಲದೆ ಕೆಲಸ ಮಾಡಿದ್ದ ಆಹಾರ ಇಲಾಖೆ ಮಾಹಿತಿ ಆಧರಿಸಿ ಉಳ್ಳವರ & ಶ್ರೀಮಂತರ bpl ಕಾರ್ಡ್ ಗೆ ರದ್ದು ಮಾಡಲು ಮುಂದಾಗಿದೆ. ಹೌದು ಸ್ನೇಹಿತರೆ ಬಲ್ಲ ಮೂಲಗಳ ಮಾಹಿತಿ ಪ್ರಕಾರ ರಾಜ್ಯದಲ್ಲಿ ಇದುವರೆಗೆ ಬರೋಬ್ಬರಿ 3.41 ಲಕ್ಷ ರೇಷನ್ ಕಾರ್ಡ್ ಗಳನ್ನು ಆಹಾರ ಇಲಾಖೆ ರದ್ದುಗೊಳಿಸಿದೆ ಎಂದು ತಿಳಿದು ಬಂದಿದೆ bpl ಕಾರ್ಡ್ ಅನರ್ಹರನ್ನು ಗುರುತಿಸಿದ ಆಹಾರ ಇಲಾಖೆ ಯಾವುದೇ ಮುನ್ಸೂಚನೆ ನೀಡದೆ ರೇಷನ್ ಕಾರ್ಡ್ ರದ್ದತಿ ಅಥವಾ ಡಿಲೀಟ್ ಮಾಡಿದೆ ಎಂದು ಹೇಳಬಹುದು

3 Lakh BPL Card Cancelled Check
3 Lakh BPL Card Cancelled Check
WhatsApp Group Join Now
Telegram Group Join Now       

 

ಕಳೆದ 6 ತಿಂಗಳಿನಿಂದ ಅಹಾರ ಇಲಾಖೆ bpl Ration ಕಾರ್ಡ್ ಗಳ ತಿದ್ದುಪಡಿ ಆರಂಭಿಸಿತ್ತು. ಪ್ರತಿತಿಂಗಳು ಮಾಹಿತಿ ಕಲೆ ಹಾಕಲಾಗುತ್ತಿದೆ ಮತ್ತು ಅನರ್ಹರ ಪಟ್ಟಿಯನ್ನು ತಯಾರಿಸುತ್ತ ಬರಲಾಗಿತ್ತು ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯದಲ್ಲಿ ಈಗ ಒಟ್ಟು 3.41 ಲಕ್ಷ BPL ರೇಷನ್ ಕಾರ್ಡ್ delete ಮಾಡಿ APL ರೇಷನ್ ಕಾರ್ಡ್ ಗಳಾಗಿ ವರ್ಗಾವಣೆ ಮಾಡಲಾಗಿದೆ. 3 ಲಕ್ಷಕ್ಕೂ ಅಧಿಕ ಜನರ BPL ರೇಷನ್ ಕಾರ್ಡ್ ರದ್ದುಗೊಳಿಸಿರುವ ಆಹಾರ ಇಲಾಖೆ ತಯಾರಿ ನಡೆಸಲಾಗಿದ್ದು. ಅದರಲ್ಲಿ ಕೆಲವರ ಪಡಿತರ ಚೀಟಿಯನ್ನು APL ರೇಷನ್ ಕಾರ್ಡ್ ಗೆ ಅಪಗ್ರೇಡ್ ಮಾಡಿದೆ.‌ ಇನ್ನು ಹಲವರ ಹೆಸರನ್ನು APL ಮತ್ತು BPL ರೇಷನ್ ಕಾರ್ಡ್ ಎರಡೂ ಪಟ್ಟಿಯಿಂದ ಕೈಬಿಡಲು ತೀರ್ಮಾನಿಸಿದೆ ಎಂದು ಮಾಹಿತಿ ಬಂದಿದೆ

 

ಬಿಪಿಎಲ್ ರೇಷನ್ ಕಾರ್ಡ್ ರಾಜ್ಯ ಸರ್ಕಾರಕ್ಕೆ ತಲೆನೋವು (3 Lakh BPL Card Cancelled Check)..?

ಹೌದು ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿರೋ ರಾಜ್ಯ ಸರ್ಕಾರಕ್ಕೆ ಎರ್ರಾಬಿರ್ರಿ & ಬೇಕಾಬಿಟ್ಟಿ ಏರಿದ BPL ಪಡಿತರದಾರರ ಸಂಖ್ಯೆ ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿತ್ತು. ಲಕ್ಷಾಂತರ ಅನರ್ಹರು BPL ರೇಷನ್ ಕಾರ್ಡ್ ಪಡೆದುಕೊಂಡು ಸರ್ಕಾರಿ ಸೌಲಭ್ಯ ಪಡೆದುಕೊಳ್ಳುತ್ತಿದ್ದರು ಇದರಿಂದ ಸರ್ಕಾರಕ್ಕೆ ತುಂಬಾ ಆರ್ಥಿಕ ಭಾರ ಆಗುತ್ತಿದೆ. ಹೀಗಾಗಿ ಅಂತಿಮವಾಗಿ bpl ರೇಷನ್ ಕಾರ್ಡ್ ಡಿಲೀಟ್ ಮಾಡಿ & APL ರೇಷನ್ ಕಾರ್ಡ್ ಗೆ ವರ್ಗಾವಣೆ ಮಾಡಿದೆ ಎಂದು ಹೇಳಬಹುದು. ಅದರಲ್ಲೂ ನಮ್ಮ ರಾಜ್ಯ ಸರ್ಕಾರ ಇದರಲ್ಲಿ ಶೇ.25ರಷ್ಟು BPL ರೇಷನ್ ಕಾರ್ಡ್ ನಲ್ಲೂ ಸೇರಿಸದೇ ಇರಲು ಚಿಂತನೆ ನಡೆದಿದೆ ಎಂದು ಮಾಹಿತಿ ತಿಳಿದು ಬಂದಿದೆ.

WhatsApp Group Join Now
Telegram Group Join Now       

ಇಷ್ಟೇ ಅಲ್ಲದೇ ಅನಾರೋಗ್ಯ, & ವಯೋಸಹಜ ಸಾವನ್ನಪ್ಪಿದವರ ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸಲಾಗಿದೆ. ನಮ್ಮ ರಾಜ್ಯದಲ್ಲಿ ಇಲ್ಲಿಯವರೆಗೆ 6.25 ಲಕ್ಷ ಮೃತರ ಹೆಸರಿನ ರೇಷನ್ ಕಾರ್ಡ್ ಗಳು ಚಲಾವಣೆಯಲ್ಲಿದ್ದವು. ಇಂಥಹ bpl &AAY ರೇಷನ್ ಕಾರ್ಡ್ ಇರುವವರ ಹೆಸರುಗಳನ್ನು ಗುರುತಿಸಿ ಆಹಾರ ಇಲಾಖೆ ರದ್ದು ಮಾಡಿದೆ. ಇದರಿಂದ ನೂತನವಾಗಿ bpl ಕಾರ್ಡ್ ಅರ್ಜಿ ಸಲ್ಲಿಸುವವರೆಗೆ ಅವಕಾಶವಾಗಲಿದ್ದು, ಇಲ್ಲಿಯವರೆಗೆ 2.95 ಲಕ್ಷ ಜನರು ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿ ಬಂದಿದೆ

ನಮ್ಮ ಕರ್ನಾಟಕ ರಾಜ್ಯದಲ್ಲಿ 1.27 ಕೋಟಿ BPL ಕಾರ್ಡ್ ಗಳಿದ್ದು ಇದರಲ್ಲಿ ಸದ್ಯ 4.36 ಕೋಟಿ ಜನರು ಫಲಾನುಭವಿಗಳಾಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ ಇನ್ನು ಚುನಾವಣೆ ಮುಗಿಯುವುದನ್ನೇ ಕಾಯುತ್ತಿದ್ದ ರಾಜ್ಯ ಸರ್ಕಾರ ಸೋಮವಾರದಂದು ರೇಷನ್ ಕಾರ್ಡ್ ರದ್ದತಿಯ ಬಗ್ಗೆ ಆಹಾರ ಇಲಾಖೆ ಸಿಎಂ ಸೂಚನೆ ನೀಡಿದ್ದಾರೆ. ಈ ಬಗ್ಗೆ ನಮ್ಮ ರಾಜ್ಯ ಸರ್ಕಾರದ ಸಿಎಂ ಸಿದ್ದರಾಮಯ್ಯನವರು ಆಹಾರ ಇಲಾಖೆ ಬಡತನ ರೇಖೆಗಿಂತ ಮೇಲಿರುವ BPL ಕಾರ್ಡ್ ರದ್ದುಮಾಡುವಂತೆ ಸೂಚನೆ ನೀಡಿದ್ದು, ಸಿಎಂ ಸೂಚನೆ ಬೆನ್ನಲ್ಲೇ ಅಕ್ರಮ BPL ರೇಷನ್ ಕಾರ್ಡ್ ಗೆ ಕತ್ತರಿ ಬಿದ್ದಿದೆ ಎಂದು ಹೇಳಬಹುದು

 

ಬಿಪಿಎಲ್ ಕಾರ್ಡ್ (3 Lakh BPL Card Cancelled Check) ಅನರ್ಹರು ಯಾರು? & ಹೇಗೆ ಪತ್ತೆ ಹಚ್ಚುವುದು..?

ಹೌದು ಸ್ನೇಹಿತರೆ ನಿಮ್ಮಲ್ಲಿ ಒಂದು ಸಂದೇಹ ಕಾಡಬಹುದು bpl ರೇಷನ್ ಕಾರ್ಡ್ ಅನರ್ಹರನ್ನು ಹೇಗೆ ಪತ್ತೆ ಹಚ್ಚಲಾಗುತ್ತಿದೆ ಅನ್ನೋದನ್ನು ನೋಡೋದಾದರೇ, HRMS ನೌಕರರ ತಂತ್ರಾಂಶದ ಮೂಲಕ ಸರ್ಕಾರಿ (Government employees) ನೌಕರರು, IT (ಆದಾಯ ತೆರಿಗೆ) ಇಲಾಖೆ ಮಾಹಿತಿ ಮೂಲಕ ಆದಾಯ ತೆರಿಗೆ ಪಾವತಿಸುವವರ ಮಾಹಿತಿ, RTO ಮೂಲಕ ಸ್ವಂತ ಕಾರು ಹಾಗೂ, ಟ್ರಾಕ್ಟರ್, ಲಾರಿ ಹೊಂದಿದವರ ವಿವರ ಪಡೆದುಕೊಂಡು ಅಂತವರ ರೇಷನ್ ಕಾರ್ಡ್ ರದ್ದು ಮಾಡಲಾಗುತ್ತದೆ.

ಹಾಗೂ ಕಂದಾಯ ಇಲಾಖೆಯ ಭೂಮಿ ತಂತ್ರಾಂಶದ ಮೂಲಕ 3 ಹೆಕ್ಟೆರ್ ಗೂ ಅಧಿಕ ಜಮೀನು ಹೊಂದಿದವರ ವಿವರ ಸಂಗ್ರಹಮಾಡಲಾಗಿದೆ ಮೂರು ಎಕರೆಗಿಂತ ಹೆಚ್ಚಿನ ಜಮೀನು ಹೊಂದಿದ್ದರೆ ಅಂತವರ ರೇಷನ್ ಕಾರ್ಡ್ ಕೂಡ ರದ್ದು ಮಾಡಲಾಗುತ್ತದೆ.

ಇನ್ನು ಕಂದಾಯ ಇಲಾಖೆಯ ನೊಂದಣಿ ಕಚೇರಿ ತಂತ್ರಾಂಶ ಪ್ರತಿ ವರುಷ 1.20 ಲಕ್ಷ ಆದಾಯ ವರಮಾನ ಇರುವವರು , ಸೈಟ್ ಹೊಂದಿದವರ ಮಾಹಿತಿ ಪಡೆದು ಆಹಾರ ಇಲಾಖೆ ಅನರ್ಹರ ಪಲಾನುಭವಿತ್ವಕ್ಕೆ ಕತ್ತರಿ ಹಾಕಿದೆ. ಎಲ್ಲಾ ಮಾಹಿತಿಯನ್ನು ಕಲೆ ಹಾಕುತ್ತಿದ್ದು ನೀವು ಇವುಗಳಲ್ಲಿ ಯಾವುದಾದರೂ ಒಂದನ್ನು ಪಾಲಿಸುತ್ತಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುವಂತ ಎಲ್ಲಾ ಚಾನ್ಸ್ ಇರುತ್ತದೆ