udyogini Scheme :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಹಾಗೂ ಕೇಂದ್ರ ಸರ್ಕಾರ ಕಡೆಯಿಂದ ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ ಅಂತ ಯೋಜನೆಗಳಲ್ಲಿ ಒಂದಾದಂತ ಯೋಜನೆ ಅಂದರೆ ಅದು ಉದ್ಯೋಗಿನಿ ಯೋಜನೆ ಈ ಯೋಜನೆಗಳ ಮೂಲಕ ಉದ್ಯೋಗ ಪ್ರಾರಂಭ ಮಾಡುವಂತಹ ಮಹಿಳೆಯರಿಗೆ 3 ಲಕ್ಷ ರೂಪಾಯಿವರೆಗೆ ಯಾವುದೇ ಬಡ್ಡಿ ಇಲ್ಲದೆ ಸಾಲ ನೀಡಲಾಗುತ್ತದೆ ಜೊತೆಗೆ ಈ ಹಣವನ್ನು ಮಹಿಳೆಯರು ತಮ್ಮ ಉದ್ಯೋಗಕ್ಕಾಗಿ ಬಳಸಬಹುದು ಅಥವಾ ಈತರಹ ವ್ಯಾಪಾರಗಳಿಗೆ ಸಂಬಂಧಿಸಿದಂತೆ ಈ ಹಣವನ್ನು ಬಳಸಿಕೊಳ್ಳಬಹುದು.
ಪಿಯುಸಿ ಪಾಸಾದ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗೆ ಸರಕಾರಿ ಶಾಲೆಯ LKG & UKG ನೇಮಕಾತಿ ಬೇಗ ಅರ್ಜಿ ಸಲ್ಲಿಸಿ
ಹಾಗಾಗಿ ಈ ಉದ್ಯೋಗಿನಿ ಯೋಜನೆಗೆ ಯಾವ ರೀತಿ ಅರ್ಜಿ ಸಲ್ಲಿಸುವುದು ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವಂತ ದಾಖಲಾತಿಗಳನ್ನು ಮತ್ತು ಅರ್ಜಿ ಸಲ್ಲಿಸಿದ ನಂತರ ಎಷ್ಟು ಹಣ ಸಿಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿಸಿ ಕೊಡುತ್ತಿದ್ದೇನೆ ಹಾಗಾಗಿ ಈ ಲೇಖನನ್ನು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ
ಇದೇ ರೀತಿ ಸರ್ಕಾರಿ ಯೋಜನೆ ಹಾಗೂ ಸರಕಾರಿ ನೌಕರಿಗಳಿಗೆ ಸಂಬಂಧಿಸಿದಂತೆ ಮತ್ತು ರೈತರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸ್ಕಾಲರ್ಶಿಪ್ ಸ್ಕೀಮ್ ಗಳ ಬಗ್ಗೆ ಪ್ರತಿಯೊಂದು ಮಾಹಿತಿ ನೀವು ಬೇಗ ಪಡೆದುಕೊಳ್ಳಬೇಕು ಅಂದರೆ WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು
ಉದ್ಯೋಗಿನಿ (udyogini Scheme) ಯೋಜನೆ..?
ಹೌದು ಸ್ನೇಹಿತರೆ, ನಮ್ಮ ಕೇಂದ್ರ ಸರ್ಕಾರವು ಮಹಿಳೆಯರ ಆರ್ಥಿಕ ಅಭಿವೃದ್ಧಿ ಹಾಗೂ ಮಹಿಳೆಯರು ತಮ್ಮ ಸ್ವಂತ ಉದ್ಯಮವನ್ನು ಸ್ಥಾಪನೆ ಮಾಡಲು ಹಾಗೂ ಈ ಹಿಂದೆ ವ್ಯಾಪಾರ ಮಾಡುತ್ತಿರುವ ಅಂತ ಮಹಿಳೆಯರಿಗೆ ಈ ಯೋಜನೆಯ ಮೂಲಕ ಬರೋಬ್ಬರಿ ಮೂರು ಲಕ್ಷ ರೂಪಾಯಿವರೆಗೆ ಯಾವುದೇ ಬಡ್ಡಿ ದರವಿಲ್ಲದೆ ಹಣವನ್ನು ಸಾಲದ ರೂಪದಲ್ಲಿ ನೀಡುವಂತ ಯೋಜನೆ ಅಂದರೆ ಅದು ಉದ್ಯೋಗಿನಿ ಯೋಜನೆ.
ಹೌದು ಸ್ನೇಹಿತರೆ ಈ ಉದ್ಯೋಗಿನಿ ಯೋಜನೆಯ ಮೂಲಕ ಮಹಿಳೆಯರಿಗೆ 3 ಲಕ್ಷ ರೂಪಾಯಿವರೆಗೆ ಯಾವುದೇ ಬಡ್ಡಿ ಇಲ್ಲದೆ ಸಾಲ ನೀಡಲಾಗುತ್ತದೆ ಈ ಯೋಜನೆ ಮೂಲಕ ಈಗಾಗಲೇ ಲಕ್ಷಾಂತರ ಮಹಿಳೆಯರು ಲಾಭ ಪಡೆದಿದ್ದು ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವ ದಾಖಲಾತಿಗಳು ಬೇಕು ಎಂಬ ಮಾಹಿತಿಯನ್ನು ಈ ಕೆಳಗಡೆ ನೀಡಿದ್ದೇವೆ ಮತ್ತು ಈ ಯೋಜನೆ ಮೂಲಕ ಅರ್ಜಿ ಸಲ್ಲಿಸುವವರಿಗೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳ ವಿವರವನ್ನು ಕೂಡ ಕೆಳಗಡೆ ನೀಡಿದ್ದೇವೆ
ಉದ್ಯೋಗಿನಿ ಯೋಜನೆಗೆ (udyogini Scheme) ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು…?
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರು 18 ವರ್ಷದಿಂದ 55 ವರ್ಷದ ವಯಸ್ಸಿನ ಒಳಗಡೆ ಇರಬೇಕು
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಮಹಿಳೆ ಭಾರತದಲ್ಲಿ ವಾಸ ಮಾಡುತ್ತಿರಬೇಕು ಮತ್ತು ಭಾರತೀಯ ಪ್ರಜೆ ಆಗಿರಬೇಕು
- ಈ ಯೋಜನೆ ಮೂಲಕ 3,00,000 ವರೆಗೆ ಮಾತ್ರ ಹಣ ಪಡೆಯಬಹುದು
- ಈ ಯೋಜನೆಗೆ ಅಂಗವಿಕಲರು ವಿಧಿವ ಮಹಿಳೆಯರು ಹಾಗೂ ವಯಸ್ಸಾದವರು ಕೂಡ ಅರ್ಜಿ ಸಲ್ಲಿಸಬಹುದು
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ವಯೋಮಿತಿ ಮತ್ತು ವಾರ್ಷಿಕ ಆದಾಯ ಮಿತಿ ಇಲ್ಲ
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಈ ಹಿಂದೆ ಸ್ವಂತ ಉದ್ಯೋಗಕ್ಕಾಗಿ ಹಣ ಪಡೆದಿದ್ದರೆ ಆ ಸಾಲವನ್ನು ತೀರಿಸಿದ ಬಳಕೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ
ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಲು (udyogini Scheme) ಬೇಕಾಗುವ ದಾಖಲಾತಿಗಳು…?
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ಅರ್ಜಿ ಸಲ್ಲಿಸುವ ಮಹಿಳೆಯ ಫೋಟೋ
ಈ ಯೋಜನೆಗೆ ಅರ್ಜಿ (udyogini Scheme) ಸಲ್ಲಿಸುವುದು ಹೇಗೆ…?
ಹೌದು ಸ್ನೇಹಿತರೆ, ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು ಅಂದರೆ ನೀವು ನಿಮ್ಮ ಹತ್ತಿರದ ಬ್ಯಾಂಕ್ಗಳಿಗೆ ಭೇಟಿ ನೀಡಿ ಈ ಯೋಜನೆ ಮೂಲಕ ನಮಗೆ ಸ್ವಂತ ಉದ್ಯೋಗ ಮಾಡಲು ಸಾಲ ಬೇಕು ಎಂದು ಕೇಳಿ ಮತ್ತು ಬ್ಯಾಂಕುಗಳಲ್ಲಿ ನಿಮಗೆ ಈ ಉದ್ಯೋಗಕ್ಕೆ ಸಂಬಂಧಿಸಿದಂತ ಒಂದು ಫಾರ್ಮ್ ಸಿಗುತ್ತದೆ ಅದನ್ನು ಸರಿಯಾಗಿ ನೋಡಿಕೊಂಡು ಭರ್ತಿ ಮಾಡಿ ಎಲ್ಲಾ ದಾಖಲಾತಿಗಳನ್ನು ಲಘುತಿಸಿ ಬ್ಯಾಂಕ್ ಶಾಖೆಗೆ ನೀಡಬೇಕು ನಂತರ ನಿಮ್ಮ ಬ್ಯಾಂಕಿಗೆ ಸಂಬಂಧಿಸಿದಂತ ಅಧಿಕಾರಿಗಳು ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ವೆರಿಫಿಕೇಶನ್ ಮಾಡಿ ನಿಮಗೆ ಈ ಯೋಜನೆ ಮೂಲಕ ಸಾಲ ಸೌಲಭ್ಯ ದೊರೆಯುವಂತೆ ಮಾಡಿಕೊಡುತ್ತಾರೆ.
ಹಾಗಾಗಿ ಈ ಯೋಜನೆಗೆ ಪ್ರತಿಯೊಬ್ಬರು ಅರ್ಜಿ ಸಲ್ಲಿಸಬೇಕು ಎಂಬ ನಮ್ಮ ಮನವಿ ಮತ್ತು ಯಾರು ಮಹಿಳೆಯರು ಬಡ್ಡಿ ರಹಿತ ಸಾಲ ಪಡೆಯಬೇಕು ಅಂದುಕೊಳ್ಳುತ್ತಾರೋ ಅಂತವರಿಗೆ ಈ ಯೋಜನೆ ಬಗ್ಗೆ ಮಾಹಿತಿ ತಿಳಿಸಲು ಈ ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಹೆಚ್ಚಿನ ಮಾಹಿತಿ ಪ್ರತಿದಿನ ಪಡೆಯಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು