New Ration Card apply online | ನಾಳೆಯಿಂದ ಹೊಸ ರೇಷನ್ ಕಡೆಗೆ ಅರ್ಜಿ ಹಾಕಲು ಪ್ರಾರಂಭ ಈ ರೀತಿ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ

New Ration Card apply online:- ನಮಸ್ಕಾರ ಸ್ನೇಹಿತರೆ ಈ ಮೂಲಕ ಕರ್ನಾಟಕ ಪಬ್ಲಿಕ್ ವೀಕ್ಷಕರಿಗೆ ತಿಳಿಸುವುದೇನೆಂದರೆ ನಾಳೆಯಿಂದ ಅಂದರೆ ಏಪ್ರಿಲ್ 1 ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶವಿದೆ ಮತ್ತು ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶವಿದೆ ಹಾಗೂ ಯಾವ ರೀತಿ ಅರ್ಜಿ ಹಾಕಬೇಕು ಮತ್ತು ಬೇಕಾಗುವ ದಾಖಲಾತಿಗಳು ಎಂಬ ಸಂಪೂರ್ಣ ಮಾಹಿತಿ ತಿಳಿಯಬೇಕಾದರೆ ಈ ಲೇಖನನ್ನು ಪೂರ್ತಿಯಾಗಿ ಓದಿ

ನಮ್ಮ ಪ್ರೀತಿಯ ಹುಡುಗರಿಗೆ ಈ ಮೂಲಕ ತಿಳಿಸುವುದೇನೆಂದರೆ ಪ್ರತಿದಿನ ಇದೇ ರೀತಿ ಸರಕಾರಿ ನೌಕರಿ ಮತ್ತು ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ನಮ್ಮ ಕರ್ನಾಟಕ ಪಬ್ಲಿಕ್ ನಲ್ಲಿ ಪ್ರಕಟಣೆ ಮಾಡಲಾಗುತ್ತದೆ ಆದ್ದರಿಂದ ಹೆಚ್ಚಿನ ಮಾಹಿತಿ ತಿಳಿಯಲು ನಮ್ಮ ವೆಬ್ಸೈಟ್ ಮೀನ್ ಮೆನುವಿಗೆ ಭೇಟಿ ನೀಡಿ ಅಥವಾ ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳಾದ WhatsApp & Telegram ಗ್ರೂಪಿಗೆ ಆಸಕ್ತಿ ಉಳ್ಳವರು ಜಾಯಿನ್ ಆಗುವುದರಿಂದ ಇದರಿಂದ ನಿಮಗೆ ಬೇಗ ಮಾಹಿತಿ ಸಿಗುತ್ತದೆ

RCB ಗೆ ಸೇರಿಕೊಳ್ಳಲಿದ್ದಾರೆ ರೋಹಿತ್ ಶರ್ಮ ! ಆರ್‌ಸಿಬಿ ನಾಯಕತ್ವ ರೋಹಿತ್ ಶರ್ಮ ಗೆ ಹೆಗಲೇರಲಿದೆ

ಹೌದು ಸ್ನೇಹಿತರೆ ತುಂಬಾ ಜನರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಕಾಯುತ್ತಿದ್ದಾರೆ ಅಂತವರಿಗೆ ರಾಜ್ಯ ಸರ್ಕಾರ ಕಡೆಯಿಂದ ಗುಡ್ ನ್ಯೂಸ್ ಅಂತ ಹೇಳಬಹುದು ಏಕೆಂದರೆ ರಾಜ್ಯ ಸರ್ಕಾರ ಅಧಿಕೃತವಾಗಿ ಏಪ್ರಿಲ್ 1 ನಂತರ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಮತ್ತು ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದೆ

WhatsApp Group Join Now
Telegram Group Join Now       

 

(New Ration Card apply online) ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಯಾವಾಗ ಪ್ರಾರಂಭ ?

ನಿಮಗೆಲ್ಲರಿಗೂ ಗೊತ್ತಿರುವಂತೆ ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್ ತುಂಬಾ ಮಹತ್ವ ಪಡೆದಿದೆ ಏಕೆಂದರೆ ಒಂದು ರೇಷನ್ ಕಾರ್ಡ್ ಮನೆಯಲ್ಲಿ ಇದ್ದರೆ ಪ್ರತಿ ತಿಂಗಳು ಮೂರು ಸಾವಿರದಿಂದ ಐದು ಸಾವಿರದವರೆಗೆ ಸರ್ಕಾರ ಕಡೆಯಿಂದ ಬರುವ ನೇರ ಬೆನಿಫಿಟ್ ಅನ್ನು ಪಡೆಯಬಹುದು ಆದ್ದರಿಂದ ತುಂಬಾ ಜನರು ಹೊಸ ರೇಷನ್ ಕಾರ್ಡ್ ಮಾಡಲು ಕಾಯುತ್ತಿದ್ದಾರೆ ಮತ್ತು ಈ ರೇಷನ್ ಕಾರ್ಡ್ ಮಾಡಿಸುವುದರಿಂದ ಕರ್ನಾಟಕದಲ್ಲಿ ಜಾರಿಗೆ ತಂದಿರುವ 5 ಗ್ಯಾರಂಟಿಗಳ ಲಾಭವನ್ನು ಪಡೆಯಬಹುದು ಅದರಲ್ಲಿ ಅತಿ ಮುಖ್ಯವಾಗಿ ಗೃಹಲಕ್ಷ್ಮಿ ಯೋಜನೆ ಈ ಯೋಜನೆ ಮೂಲಕ ಪ್ರತಿ ತಿಂಗಳು 2000 ಹಣವನ್ನು ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಈ ಯೋಜನೆ ಲಾಭ ಪಡೆಯಬೇಕಾದರೆ ರೇಷನ್ ಕಾರ್ಡ್ ಒಂದು ಮುಖ್ಯ ಆಧಾರವಾಗಿದೆ

ಆದ್ದರಿಂದ ರೇಷನ್ ಕಾರ್ಡ್ ಹಾಕಲು ಜನರು ಕಾಯುತ್ತಿದ್ದರು ಸರ್ಕಾರ ಕಡೆಯಿಂದ ಅಧಿಕೃತವಾಗಿ ದಿನಾಂಕ 01/04/2024 ರಂದು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲು ಸರ್ಕಾರ ನಿರ್ಧಾರ ಮಾಡಿದೆ ಆದ್ದರಿಂದ ಆಸಕ್ತಿ ಉಳ್ಳವರು ಏಪ್ರಿಲ್ ಒಂದರ ನಂತರ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಬಹುದು

Anna Bhagya | ಬೆಳ್ಳಂ ಬೆಳಗ್ಗೆ ಅನ್ನ ಭಾಗ್ಯ ಯೋಜನೆ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್ | ಹಣ ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ

(New Ration Card apply online) ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು ?

WhatsApp Group Join Now
Telegram Group Join Now       

ಆಧಾರ್ ಕಾರ್ಡ್ :-ಕುಟುಂಬದಲ್ಲಿರುವಂತ ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್ ಬೇಕು

ಜಾತಿ ಮತ್ತು ಆದಾಯ ಪ್ರಮಾಣ ಪತ್ರ:- ಕುಟುಂಬದ ಮುಖ್ಯಸ್ಥರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ ಅಥವಾ ಕುಟುಂಬ ಸದಸ್ಯರ ಯಾರದಾದರೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ

ಜನನ ಪ್ರಮಾಣ ಪತ್ರ:- ನಿಮ್ಮ ಮನೆಯಲ್ಲಿ ಏನಾದರೂ ಆರು ವರ್ಷಕ್ಕಿಂತ ಕೆಳಗಡೆ ಇರುವ ಮಕ್ಕಳು ಇದ್ದರೆ ರೇಷನ್ ಕಾರ್ಡ್ ನಲ್ಲಿ ಸೇರಿಸಲು ಜನನ ಪ್ರಮಾಣ ಪತ್ರ ಬೇಕಾಗುತ್ತದೆ

ಭಾವಚಿತ್ರ:- ಕುಟುಂಬದ ಮುಖ್ಯಸ್ಥರ ಇತ್ತೀಚಿಗೆ ತೆಗೆಸಲಾದ ಒಂದು ಫೋಟೋ ಬೇಕಾಗುತ್ತದೆ

ಮೊಬೈಲ್ ಸಂಖ್ಯೆ:- ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಇರುವಂತಹ ಒಂದು ಮೊಬೈಲ್ ನಂಬರ್ ಬೇಕಾಗುತ್ತದೆ

ಈ ಮೇಲೆ ನೀಡಲಾದ ಎಲ್ಲಾ ದಾಖಲಾತಿಗಳು ನಿಮ್ಮ ಹತ್ತಿರ ಇದ್ದರೆ ನೀವು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ

Raita vidya nidhi scheme 2024 | ರೈತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಸರ್ಕಾರದಿಂದ 11,000 ಉಚಿತ ಸ್ಕಾಲರ್ಶಿಪ್ ಬಿಡುಗಡೆ | ಈ ರೀತಿ ಅರ್ಜಿ ಸಲ್ಲಿಸಿ

(New Ration Card apply online) ರೇಷನ್ ಕಾರ್ಡ್ ತಿದ್ದುಪಡಿಗೆ ಮಾಡಬಹುದೇ ?

ಹೌದು ನಿಮ್ಮ ಹತ್ತಿರ ರೇಷನ್ ಕಾರ್ಡ್ ಇದ್ದರೆ ಆ ರೇಷನ್ ಕಾರ್ಡ್ ನಲ್ಲಿರುವ ಹೆಸರು ತಪ್ಪಾಗಿದ್ದರೆ ಅಥವಾ ರೇಷನ್ ಕಾರ್ಡ್ ನಲ್ಲಿ ಏನೇ ಸಮಸ್ಯೆ ಇದ್ದರೂ ಸರಿಪಡಿಸಿಕೊಳ್ಳಬಹುದು. ರೇಷನ್ ಕಾರ್ಡ್ ನಲ್ಲಿ ಏನೇನು ಮಾಡಲು ಅವಕಾಶವಿದೆ ಎಂದು ಈ ಕೆಳಗಡೆ ನೀಡಿದ್ದೇನೆ

ಹೆಸರು ಸೇರ್ಪಡೆ:- ನಿಮ್ಮತ್ರ ಈಗಾಗಲೇ ರೇಷನ್ ಕಾರ್ಡ್ ಇದ್ದು ನಿಮ್ಮ ಕುಟುಂಬದಲ್ಲಿ ಯಾರಾದರೂ ಸದಸ್ಯರನ್ನು ಸೇರ್ಪಡೆಮಾಡಿಕೊಳ್ಳಲು ಅವಕಾಶವಿರುತ್ತದೆ

ಹೆಸರು ಬದಲಾವಣೆ:– ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವ ಸದಸ್ಯರ ಹೆಸರು ತಪ್ಪಾಗಿದ್ದಲ್ಲಿ ಅದನ್ನು ಸರಿಪಡಿಸಿಕೊಳ್ಳಬಹುದು

ಕುಟುಂಬದ ಮುಖ್ಯಸ್ಥರ ಬದಲಾವಣೆ:- ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಾವುದೇ ಕಾರಣಾಂತರಗಳಿಂದ ಕುಟುಂಬದ ಮುಖ್ಯಸ್ಥರು ನಿಧನ ಹೊಂದಿದ್ದರೆ ಅಂತ ಸಂದರ್ಭದಲ್ಲಿ ರೇಷನ್ ಕಾರ್ಡ್ ನಲ್ಲಿರುವ ಕುಟುಂಬದ ಮುಖ್ಯಸ್ಥರ ಹೆಸರು ಬದಲಾವಣೆ ಮಾಡಿಕೊಳ್ಳುವ ಅವಕಾಶವಿರುತ್ತದೆ ಮತ್ತು ರೇಷನ್ ಕಾರ್ಡ್ ನಲ್ಲಿ ಪುರುಷ ಕುಟುಂಬದ ಮುಖ್ಯಸ್ಥನಾಗಿದ್ದರೆ ಮಹಿಳಾ ಕುಟುಂಬದ ಮುಖ್ಯಸ್ಥರಾಗಿ ಮಾಡಲು ಅವಕಾಶವಿರುತ್ತದೆ

ಆಧಾರ್ ಕಾರ್ಡ್ ಜೋಡಣೆ:- ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಾರಾದರೂ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲವೆಂದರೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಅವಕಾಶವಿರುತ್ತದೆ

ಕೆ ವೈ ಸಿ:- ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಸದಸ್ಯರ ಕೆವೈಸಿ ಮಾಡಿಸಲು ಅವಕಾಶವಿರುತ್ತದೆ

ಈ ಮೇಲೆ ನೀಡಲಾದ ಎಲ್ಲಾ ತಿದ್ದುಪಡಿಗಳನ್ನು ನಿಮ್ಮ ರೇಷನ್ ಕಾರ್ಡ್ ನಲ್ಲಿ ಮಾಡಿಕೊಳ್ಳಲು ಅವಕಾಶವಿರುತ್ತದೆ

New Ration Card apply online
New Ration Card apply online

(New Ration Card apply online) ಎಲ್ಲಿ ಅರ್ಜಿ ಸಲ್ಲಿಸಬೇಕು ?

ನೀವೇನಾದ್ರೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು ಅಥವಾ ರೇಷನ್ ಕಾರ್ಡ್ ಏನಾದರೂ ತಿದ್ದುಪಡಿ ಮಾಡಿಕೊಂಡ ಬೇಕಂದರೆ ಏಪ್ರಿಲ್ ಒಂದರ ನಂತರ ಈ ಕೆಳಗಡೆ ನೀಡಲಾದ ಆನ್ಲೈನ್ ಸೆಂಟರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ

  • ಗ್ರಾಮ ಒನ್ ಆನ್ಲೈನ್ ಸೆಂಟರ್
  • ಬೆಂಗಳೂರು ಒನ್
  • ಕರ್ನಾಟಕ ಒನ್
  • CSC ಕೇಂದ್ರ
  • ಇತರ ಆನ್ಲೈನ್ ಸೆಂಟರ್ ಗಳು

ಈ ಮೇಲೆ ನೀಡಲಾದ ಆನ್ಲೈನ್ ಸೆಂಟರ್ ಗಳ ಮೂಲಕ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಮತ್ತು ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಲು ಅವಕಾಶವಿರುತ್ತದೆ

ಮೊಬೈಲ್ ಮೂಲಕ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಬಹುದೇ ?

ಹೌದು ಸ್ನೇಹಿತರೆ, ನೀವೇನಾದರೂ ಮೊಬೈಲ್ ಮೂಲಕ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂದು ನಿಮ್ಮಲ್ಲಿ ಒಂದು ಪ್ರಶ್ನೆ ಕಾಡುತ್ತಿರುತ್ತೆ ಅಂತವರಿಗೆ ಗುಡ್ ನ್ಯೂಸ್ ಎಂದು ಹೇಳಬಹುದು ಮೊಬೈಲ್ನಲ್ಲಿ ಕೂಡ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಆದರೆ ನಿಮಗೆ ಅರ್ಜಿ ಸಲ್ಲಿಸಲು ಸ್ವಲ್ಪ ತೊಂದರೆ ಉಂಟಾಗಬಹುದು ಆದ್ದರಿಂದ ಮೇಲೆ ನೀಡಲಾದ ಆನ್ಲೈನ್ ಸೆಂಟರ್ ಗಳ ಮೂಲಕ ಅರ್ಜಿ ಸಲ್ಲಿಸಿ ಅಥವಾ ಮೊಬೈಲ್ನಲ್ಲಿ ಅರ್ಜಿ ಸಲ್ಲಿಸಲು ಈ ಕೆಳಗಡೆ ನೀಡಲಾದ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು

👉 New Ration Card apply Link 👈

ಮೇಲೆ ನೀಡಲಾದ ಲಿಂಕಿನ ಮೂಲಕ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದೆ ಆದರೆ ಗಮನಿಸಿ ಏಪ್ರಿಲ್ ಒಂದರ ನಂತರ ಈ ಲಿಂಕ್ ಓಪನ್ ಆಗಬಹುದು ಅಥವಾ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಬಹುದು ಆದ್ದರಿಂದ ಮೇಲೆ ನೀಡಲಾದ ಆನ್ಲೈನ್ ಸೆಂಟರ್ ಗಳ ಮೂಲಕ ಯಾವುದೇ ತೊಂದರೆ ಇಲ್ಲದೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ

ಇದೇ ರೀತಿ ಹೊಸ ಹೊಸ ಸುದ್ದಿಗಳ ಮಾಹಿತಿಯನ್ನು ತಿಳಿಯಲು ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಾದ WhatsApp & Telegram ಗ್ರೂಪಿಗೆ ಆಸಕ್ತಿ ಉಳ್ಳವರು ಜಾಯಿನ್ ಆಗಬಹುದು ಇದರಿಂದ ನಿಮಗೆ ಬೇಗ ಪ್ರಚಲಿತ ಘಟನೆಗಳ ಮಾಹಿತಿ ಸಿಗುತ್ತದೆ ಧನ್ಯವಾದಗಳು

Leave a comment