Ganga Kalyana Yojane: ಉಚಿತ ಬೋರ್ವೆಲ್ ಕೊರೆಸಲು ಸರ್ಕಾರದಿಂದ ಸಹಾಯಧನ! ಇಲ್ಲಿದೆ ನೋಡಿ ಸಂಪೂರ್ಣವಾದ ವಿವರ.

Ganga Kalyana Yojane: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಸರ್ಕಾರದ ಕಡೆಯಿಂದ ಸಣ್ಣ ಮತ್ತು ಅತಿ ಸಣ್ಣ ಪ್ರಮಾಣದ ರೈತರಿಗೆ ಉಚಿತವಾಗಿ ಬೋರ್ವೆಲ್ ಕೊರಿಸಲು ಸರ್ಕಾರದಿಂದ ಸಿಗುವ ಸಹಾಯಧನಕ್ಕೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ನೀಡಿರುತ್ತೇನೆ. ಲೇಖನವನ್ನು ಕೊನೆಯವರೆಗೂ ಓದಿ.

Ganga Kalyana Yojane

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಯಾವೆಲ್ಲ ಅರ್ಹತೆಗಳಿರಬೇಕು? ಮತ್ತು ಇಂತಹ ರೈತರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಮತ್ತು ಯಾವೆಲ್ಲಾ ದಾಖಲೆಗಳು ಬೇಕಾಗುತ್ತವೆ? ಎಂಬ ಮಾಹಿತಿಯನ್ನು ಈ ಕೆಳಗೆ ನೀಡಿರುತ್ತೇನೆ ನೋಡಿ.

ಯೋಜನೆಯ ಕರ್ನಾಟಕ ರಾಜ್ಯ ಸರ್ಕಾರದ ಕರ್ನಾಟಕ ಮೈನಾರಿಟಿ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ನಿಂದ ಜಾರಿಗೆ ಇರುವ ಯೋಜನೆಯಾಗಿದೆ. ಸಣ್ಣ ಹಾಗೂ ಅತಿ ಸಣ್ಣ ಪ್ರಮಾಣದ ರೈತರಿಗೆ ಮತ್ತು ಮೈನಾರಿಟಿ ವರ್ಗದ ರೈತರಿಗೆ ಉಚಿತ ಬೋರ್ವೆಲ್ ಪಂಪ್ಸೆಟ್ ಹಾಗೂ ಉಳಿದ ಯಂತ್ರೋಪಕರಣಗಳನ್ನು ಕೂಡ ನೀಡುವುದಾಗಿದೆ. ಯೋಜನೆಯ ಲಾಭವನ್ನು ಇಂತಹ ರೈತರು ಪಡೆದುಕೊಳ್ಳಿ.

ಅರ್ಜಿ ಸಲ್ಲಿಸಲು ಯಾರು ಅರ್ಹರು?

ಅರ್ಜಿ ಸಲ್ಲಿಸಲು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು ಮತ್ತು 1 ಎಕರೆ 20 ಗುಂಟೆಯಿಂದ ಹಿಡಿದು 5 ಎಕರೆ ಒಳಗಿನ ಜಮೀನನ್ನು ಹೊಂದಿರಬೇಕು. ಅರ್ಜಿ ಸಲ್ಲಿಸಲು ರೈತರು ಸಣ್ಣ ಅಥವಾ ಅತಿ ಸಣ್ಣ ಪ್ರಮಾಣದ ರೈತರು ಎಂದು ಗುರುತಿಸಿಕೊಂಡಿರಬೇಕು. ಎಲ್ಲ ಮೂಲಗಳಿಂದ ವಾರ್ಷಿಕ ಆದಾಯ 6 ಲಕ್ಷಕ್ಕಿಂತ ಕಡಿಮೆ ಇರಬೇಕು. ಅರ್ಜಿ ಸಲ್ಲಿಸುವ ರೈತನ ವಯೋಮಿತಿ 55 ವರ್ಷಕ್ಕಿಂತ ಮೇಲಿರಬಾರದು.

WhatsApp Group Join Now
Telegram Group Join Now       

ಕರ್ನಾಟಕ ರಾಜ್ಯದಲ್ಲಿ ಉಚಿತ ಬೋರ್ವೆಲ್ ಥೀಮ್ ಅಥವಾ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನೇನು ಕೆಲವೇ ದಿನಗಳಲ್ಲಿ ಅರ್ಜಿಗಳು ಆರಂಭವಾಗಲಿದ್ದು, ಅದಕ್ಕೂ ಮೊದಲು ರೈತರು ಈ ಕೆಳಗಿನ ದಾಖಲೆಗಳನ್ನು ಸರಿಪಡಿಸಿ ಇಟ್ಟುಕೊಂಡಿರಿ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.

  • ಹೊಲದ ಪಹಣಿ.
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
  • ಸಣ್ಣ ಅಥವಾ ಅತಿ ಸಣ್ಣ ರೈತರ ಪ್ರಮಾಣ ಪತ್ರ.
  • ಬ್ಯಾಂಕ್ ಪಾಸ್ ಬುಕ್.

ಎಲ್ಲ ಮೇಲೆ ದಾಖಲೆಗಳನ್ನು ನೀವು ಸರಿಪಡಿಸಿ ಇಟ್ಟುಕೊಂಡಿರಿ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿಗಳು ಆರಂಭವಾದ ತಕ್ಷಣ ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ.