district court recruitment 2024 | ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ | ಬೇಗ ಅರ್ಜಿ ಸಲ್ಲಿಸಿ ಕೊನೆಯ ದಿನ ಇದೆ.

district court recruitment 2024:- ನಮಸ್ಕಾರ ಸ್ನೇಹಿತರೆ ನಮ್ಮ ಮಾಧ್ಯಮದ ಮತ್ತೊಂದು ಹೊಸ ಪೋಸ್ಟಿಗೆ ತಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ ಈ ಲೇಖನದ ಮೂಲಕ ತಿಳಿಸುವುದೇನೆಂದರೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಅಧೀನದಲ್ಲಿ ಬರುವ ನ್ಯಾಯಾಲಯಗಳಲ್ಲಿ ಹತ್ತನೇ ತರಗತಿ ಪಾಸಾದವರಿಗೆ ಅನೇಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಲಾಗಿದೆ, ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ, ಯಾವ ಹುದ್ದೆಗಳು ಖಾಲಿ ಇವೆ? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವವು ? ಹೇಗೆ ಅರ್ಜಿ ಸಲ್ಲಿಸಬೇಕು? ಎಂಬುವುದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಿರುತ್ತೇನೆ ಆದಕಾರಣ ಈ ಲೇಖನವನ್ನು ಪೂರ್ತಿಯಾಗಿ ನೋಡಿ.

gruhalakshmi installment | ಗೃಹಲಕ್ಷ್ಮಿ 7ನೇ ಕಂತಿನ ಹಣದ ಜೊತೆಗೆ ಪೆಂಡಿಂಗ್ ಹಣ-ಬಿಡುಗಡೆ ಈ ರೀತಿ ಚೆಕ್ ಮಾಡಿ 

district court recruitment 2024 

ಜಿಲ್ಲಾ ನ್ಯಾಯಾಲಯದ ಮತ್ತು ಸತ್ರ ನ್ಯಾಯಾಲಯದ ಅಧೀನದಲ್ಲಿ ಕಾಲಿ ಇರುವ ಹುದ್ದೆಗಳ ಸಂಬಂಧಿಸಿ ದಂತೆ ವಿದ್ಯಾರರ್ಹತೆ, ಅರ್ಜಿ ಶುಲ್ಕ,ವೇತನ ಶ್ರೇಣಿ, ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು ಅರ್ಜಿ ಸಲ್ಲಿಸುವ ವಿಧಾನ ಈ ಎಲ್ಲಾ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ ಆದಕಾರಣ ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ನೋಡಿ.

(district court recruitment 2024) ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳು

WhatsApp Group Join Now
Telegram Group Join Now       

ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಅಧೀನದಲ್ಲಿ ಬರುವ 10ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಅನೇಕ ಹುದ್ದೆಗಳು ಖಾಲಿ ಇದ್ದು ಇದೀಗ ಅಂತಹ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ, ಹುದ್ದೆಯ ವಿವರ ನೋಡುವುದಾದರೆ

  • ನೇಮಕಾತಿಯ ಸಂಸ್ಥೆ : ತುಮಕೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ
  • ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ : 60 ಹುದ್ದೆಗಳು
  • ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ ಮುಖಾಂತರ
  • ಉದ್ಯೋಗದ ಸ್ಥಳ : ತುಮಕೂರು ಜಿಲ್ಲೆ

ತುಮಕೂರು ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 60 ಹುದ್ದೆಗಳು ಖಾಲಿ ಇದ್ದು ಇದೀಗ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗಿದೆ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಉದ್ಯೋಗ ಪಡೆಯಬಹುದಾಗಿದೆ.

2nd puc result 2024 | ಸೆಕೆಂಡ್- ಪಿಯುಸಿ ಫಲಿತಾಂಶ -ದಿನಾಂಕ ಫಿಕ್ಸ್ ..! ಈ ರೀತಿ ಚೆಕ್ ಮಾಡಿಕೊಳ್ಳಿ

(district court recruitment 2024) ಖಾಲಿ ಇರುವ ಹುದ್ದೆಗಳ ವಿವರ

ತುಮಕೂರು ಜಿಲ್ಲೆಯ ನ್ಯಾಯಾಲಯದಲ್ಲಿ ಕೆಲವು ಹುದ್ದೆಗಳು ಖಾಲಿ ಇದ್ದು ಆ ಹುದ್ದೆಗಳು ಯಾವ್ಯಾವು ಎಂದು ನೋಡುವುದಾದರೆ ಈ ಕೆಳಗಿನಂತಿವೆ.

  • ಶೀಘ್ರ ಲಿಪಿಕಾರರು 10 ಹುದ್ದೆಗಳು ಖಾಲಿ ಇವೆ
  • ಬೆರಳಚ್ಚುಗಾರರು 5 ಹುದ್ದೆಗಳು ಖಾಲಿ ಇವೆ
  • ಬೆರಳಚ್ಚು ನಕಲುಗಾರರು 5 ಹುದ್ದೆಗಳು ಖಾಲಿ ಇವೆ
  • ಜವಾನ್ 40 ಹುದ್ದೆಗಳು ಖಾಲಿ ಇವೆ.
WhatsApp Group Join Now
Telegram Group Join Now       

ಹೇಗೆ ತುಮಕೂರು ಜಿಲ್ಲೆಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 60 ಹುದ್ದೆಗಳು ಖಾಲಿ ಇದ್ದ ಇದೀಗ ಈ ಹುದ್ದೆಗಳಿಗೆ ಅಧಿಕೃತ ನೇಮಕಾತಿ ಹೊರಡಿಸಿದ್ದು ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ.

ಶೈಕ್ಷಣಿಕ ವಿದ್ಯಾರ್ಹತೆ

ತುಮಕೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಬಯಸಿದರೆ ಅಂಥವರು ಕೆಲವು ವಿದ್ಯಾರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ.

ಶೀಘ್ರ ಲಿಪಿಕಾರ ಹುದ್ದೆ : ದ್ವಿತೀಯ ಪಿಯುಸಿ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಈಗ ಲಿಪಿಯಲ್ಲಿ ಹಿರಿಯ ದರ್ಜೆ ಮತ್ತು ಬೆರಳಚ್ಚು ಹಿರಿಯ ದರ್ಜೆ ತತ್ಸಮಾನ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು.

ಬೆರಳಚ್ಚುಗಾರರು : ಬೆರಳಚ್ಚು ಕಾರರು ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಬೆರಳಚ್ಚು ಪ್ರೌಢ ದರ್ಜೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಬೆರಳಚ್ಚು ನಕಲುಗಾರರು : ಬೆರಳಚ್ಚು ನಕಲುಗಾರರ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಜೊತೆಗೆ ಕನ್ನಡ ಮತ್ತು ಇಂಗ್ಲೀಷ್ ಬೆರಳಚ್ಚು ಕಿರಿಯ ದರ್ಜೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಜವಾನ ಹುದ್ದೆಗೆ : ಜವಾನ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿರಬೇಕು.

ಒಟ್ಟಾರೆಯಾಗಿ ತುಮಕೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ವೇತನ ಶ್ರೇಣಿ

ತುಮಕೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಉದ್ದೇಯ ಅನುಗುಣವಾಗಿ ಮಾಸಿಕ ವೇತನ ನೀಡಲಾಗುತ್ತದೆ ಅದು ಈ ಕೆಳಗಿನಂತಿದೆ.

ಶೀಘ್ರ ಲಿಪಿಕಾರರು ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 22,650 ರಿಂದ 52,650 ರ ವರಗೆ ಮಾಸಿಕ ವೇತನ ಇರುತ್ತದೆ.

ಬೆರಳಚ್ಚುಗಾರರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 21,400 ರಿಂದ 42,000 ರ ವರೆಗೆ ಮಾಸಿಕ ವೇತನ ನೀಡಲಾಗುತ್ತದೆ.

ಬೆರಳಚ್ಚು ನಕಲುಗಾರರು ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 21,400 ರಿಂದ 42,000 ರ ವರೆಗೆ ಮಾಸಿಕ ವೇತನ ಇರುತ್ತದೆ.

ಜವಾನ್ ಹುದ್ದೆಗೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ 17,000 ದಿಂದ 28,950 ರ ವರೆಗೆ ಮಾಸಿಕ ವೇತನ ಇರುತ್ತದೆ.

ಹೀಗೆ ಹುದ್ದೆಗಳ ಅನುಸಾರವಾಗಿ ಅಭ್ಯರ್ಥಿಗಳಿಗೆ ಮಾಸಿಕ ವೇತನ ನಿಗದಿಪಡಿಸಲಾಗಿದೆ.

ವಯಸ್ಸಿನ ಮಿತಿ

ತುಮಕೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 40 ವರ್ಷದ ಒಳಗೆ ಇರಬೇಕು ಮತ್ತು ಅಭ್ಯರ್ಥಿಗಳ ವರ್ಗದ ಮೇಲೆ ವಯೋಮಿತಿ ಸಡಲಿಕ್ಕೆ ಕೂಡ ಇರುತ್ತದೆ.

ಅರ್ಜಿ ಶುಲ್ಕದ ವಿವರ.

ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಅವರ ವರ್ಗದ ಅನುಗುಣವಾಗಿ ಅರ್ಜಿ ಸಲ್ಕವನ್ನು ಪಾವತಿಸಬೇಕಾಗುತ್ತದೆ ಅದು ಈ ಕೆಳಗಿನಂತಿದೆ

ಪ್ರವರ್ಗ 2a, 2b, 3a, 3b, ಮತ್ತು ಸಾಮಾನ್ಯ ವರ್ಗದವರಿಗೆ 200 ಅರ್ಜಿ ಶುಲ್ಕವಾಗಿ ಪಾವತಿಸಬೇಕಾಗುತ್ತದೆ.

ಪರಿಶಿಷ್ಟ ಜಾತಿಯ ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ ಒಂದು ಹಾಗೂ ಅಂಗವಿಕಲರಿಗೆ ಇಂತಹ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಪಾವತಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು.

ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 12/03/2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10/04/2024.

ಈ ನಿಗದಿತ ದಿನಾಂಕದ ಒಳಗೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ತುಮಕೂರು ಜಿಲ್ಲೆಯಲ್ಲಿ ಉದ್ಯೋಗ ಪಡೆಯಬಹುದಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆಯಬೇಕಾದರೆ ಸಹಾಯವಾಣಿ ಸಂಖ್ಯೆಯಾದ 0816- 2278273 ಈ ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.

👉ಅರ್ಜಿ ಸಲ್ಲಿಸಲು -ಇಲ್ಲಿ- ಕ್ಲಿಕ್-ಮಾಡಿ👈

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೇಲೆ ನೀಡಲಾದ ಲಿಂಕ್ ಕ್ಲಿಕ್ ಮಾಡಿ ಈ ಲಿಂಕ್ ನ ಮೂಲಕ ನೀವು ಅಲ್ಲಿ ಕೇಳಲಾದ ಎಲ್ಲಾ  ದಾಖಲಾತಿಗಳನ್ನು ಸರಿಯಾಗಿ ನಮೂದಿಸಿ ಅರ್ಜಿ ಸಲ್ಲಿಸಿ

ವಿಶೇಷ ಸೂಚನೆ : ನಾವು ನಮ್ಮ ಮಾಧ್ಯಮದಲ್ಲಿ ನಿಖರ ಮತ್ತು ಖಚಿತವಾದ ಮಾಹಿತಿ ಪ್ರಸಾರ ಮಾಡುತ್ತೇವೆ ಯಾವುದೇ ಸುಳ್ಳು ಮಾಹಿತಿ ಪ್ರಸಾರ ಮಾಡುವುದಿಲ್ಲ, ಇನ್ನು ಹೆಚ್ಚಿನ ಜಾಬ್ಗಳ ಮಾಹಿತಿ ಬೇಕಾದರೆ ನಮ್ಮ ವೆಬ್ಸೈಟ್ನ ಮೆನು ಮೆನುಗೆ ಭೇಟಿ ನೀಡಿ, ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೂ ಹಾಗೂ ನಿಮ್ಮ ಕುಟುಂಬದವರೊಂದಿಗೆ ಸಹ ಹಂಚಿಕೊಳ್ಳಿ ಅವರಿಗೂ ಸಹ ತುಮಕೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜಾಗೃತಿಯನ್ನು ಮೂಡಿಸಿ.

ಎಲ್ಲಿಯವರೆಗೂ ನನ್ನ ಲೇಖನವನ್ನು ಓದಿದ್ದಕ್ಕಾಗಿ ತಮಗೆಲ್ಲರಿಗೂ ಧನ್ಯವಾದಗಳು…

Leave a comment